ಶ್ರೀರಂಗಪಟ್ಟಣದಲ್ಲಿ ಮತ್ತೆ ಭಾರೀ ಶಬ್ದ, ಭೂಕಂಪನ ಅನುಭವ

KannadaprabhaNewsNetwork |  
Published : Feb 27, 2024, 01:33 AM IST
ಶ್ರೀರಂಗಪಟ್ಟಣ | Kannada Prabha

ಸಾರಾಂಶ

ಶ್ರೀರಂಗಪಟ್ಟಣದಲ್ಲಿ ಮತ್ತೆ ಭಾರೀ ಸದ್ದು ಕೇಳಿಸಿದ್ದು, ಕೆಲವೆಡೆ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ಸೇರಿ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ಭಾರೀ ಸ್ಫೋಟದ ಸದ್ದಿನ ಜತೆಗೆ ಸುಮಾರು 5 ರಿಂದ 10 ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವೂ ಆಗಿದ್ದು, ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.

ಸೋಮವಾರ ಮಧ್ಯಾಹ್ನ 3.50ಕ್ಕೆ ಸರಿಯಾಗಿ ಇದ್ದಕ್ಕಿದಂತೆ ನಿಗೂಢ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ವೇಳೆ ಮನೆಯೊಳಗಿನ ಪಾತ್ರೆಗಳು ಅಲುಗಾಡಿವೆ. ಅಂಗಡಿ ಮುಂಗಟ್ಟುಗಳ ಬಳಿ ಭೂಮಿ ಕಂಪಿಸಿದ ಅನುಭವವಾಗಿದೆ.ಕೆಆರ್‌ಎಸ್, ಬೆಳಗೊಳ, ಕೆ.ಶೆಟ್ಟಹಳ್ಳಿ, ಅರಕೆರೆ ಈ ಭಾಗದಲ್ಲಿ ಹೆಚ್ಚಿನ ಶಬ್ದ ಕೇಳಿ ಬಂದಿದೆ.

ಕಳೆದೆರಡು ದಿನಗಳ ಹಿಂದೆ ಮಂಡ್ಯದಲ್ಲಿ ಇಂಥದ್ದೇ ಶಬ್ದ ಕೇಳಿ ಬಂದಿತ್ತು. ಮೇಲಿಂದ ಮೇಲೆ ಕೇಳಿ ಬರುತ್ತಿರುವ ನಿಗೂಢ ಸ್ಫೋಟದ ಶಬ್ದಕ್ಕೆ ಜನ ಆತಂಕಗೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ಬಿಟ್ಟುಕೊಡದ ಕಾರಣ ಜನರ ಆತಂಕ ಹೆಚ್ಚಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''