ಆಕಾಶವಾಣಿ ಇಲ್ಲದ ಸಮಾಜ ಊಹಿಸಲು ಅಸಾಧ್ಯ: ಪ್ರೊ.ನರೇಂದ್ರ ನಾಯಕ್‌

KannadaprabhaNewsNetwork |  
Published : May 28, 2026, 02:45 AM IST
ಮಂಗಳೂರು ಆಕಾಶವಾಣಿಯಿಂದ ‘ಸ್ವರ ಸಂಭ್ರಮʼ ಕಾರ್ಯಕ್ರಮ ಉದ್ಘಾಟನೆ  | Kannada Prabha

ಸಾರಾಂಶ

ಭಾರತದ ಸಾರ್ವಜನಿಕ ಪ್ರಸಾರ ಸೇವೆ ಪ್ರಸಾರ ಭಾರತಿಯ ರೇಡಿಯೋ ಪ್ರಸಾರಂಗ ಆಕಾಶವಾಣಿಯ 90ನೇ ವಾರ್ಷಿಕೋತ್ಸವ ಮತ್ತು ಆಕಾಶವಾಣಿಯ ಮಂಗಳೂರು ಕೇಂದ್ರದ 50ನೇ ವರ್ಷ ದ ಸಂಭ್ರಮಾಚರಣೆಯ ಅಂಗವಾಗಿ ಮಂಗಳೂರು ಆಕಾಶವಾಣಿಯ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ಭಾವಗೀತೆ ಮತ್ತು ಜನಪದ ಸಂಗೀತ ಪ್ರಸ್ತುತಿ ‘ಸ್ವರ ಸಂಭ್ರಮʼ ಕಾರ್ಯಕ್ರಮ ಸೋಮವಾರ ನಡೆಯಿತು.

ಮಂಗಳೂರು: ಭಾರತದ ಸಾರ್ವಜನಿಕ ಪ್ರಸಾರ ಸೇವೆ ಪ್ರಸಾರ ಭಾರತಿಯ ರೇಡಿಯೋ ಪ್ರಸಾರಂಗ ಆಕಾಶವಾಣಿಯ 90ನೇ ವಾರ್ಷಿಕೋತ್ಸವ ಮತ್ತು ಆಕಾಶವಾಣಿಯ ಮಂಗಳೂರು ಕೇಂದ್ರದ 50ನೇ ವರ್ಷ ದ ಸಂಭ್ರಮಾಚರಣೆಯ ಅಂಗವಾಗಿ ಮಂಗಳೂರು ಆಕಾಶವಾಣಿಯ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ಭಾವಗೀತೆ ಮತ್ತು ಜನಪದ ಸಂಗೀತ ಪ್ರಸ್ತುತಿ ‘ಸ್ವರ ಸಂಭ್ರಮʼ ಕಾರ್ಯಕ್ರಮ ಸೋಮವಾರ ನಡೆಯಿತು.

ಎಕ್ಸ್‌ಪರ್ಟ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರೊ. ನರೇಂದ್ರ ಎಲ್‌. ನಾಯಕ್‌ ಉದ್ಘಾಟಿಸಿ, ಆಕಾಶವಾಣಿಯ ದನಿಯು ಜನಮಾನಸದಲ್ಲಿ ಹಾಸುಹೊಕ್ಕಿದ್ದು, ಆಕಾಶವಾಣಿ ಇಲ್ಲದ ಸಮಾಜವನ್ನು ಊಹಿಸಲೂ ಅಸಾಧ್ಯ ಎಂದರು.

ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕ ಮುದ್ದು ಮೂಡುಬೆಳ್ಳೆ ಮಾತನಾಡಿ, ತನಗಿರುವ ಅಲ್ಪ ಮಾನವ ಸಂಪನ್ಮೂಲದ ಹೊರತಾಗಿಯೂ ಆಕಾಶವಾಣಿಯು ತನ್ನ ಘನತೆಗೆ ಯಾವುದೇ ಚ್ಯುತಿಬಾರದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಖ್ಯಾತ ಸಂಗೀತ ಕಲಾವಿದರಾದ ರವೀಂದ್ರ ಪ್ರಭು, ಕೀರ್ತನ್ ಹೊಳ್ಳ, ಶರಧಿ ಪಾಟೀಲ್, ಸಂಗೀತಾ ಬಾಲಚಂದ್ರ, ಮಾಲಿನಿ ಕೇಶವಪ್ರಸಾದ್ ಅವರಿಂದ ಗಾಯನ ಮತ್ತು ಸಮೀರ್ ರಾವ್, ರಾಜಗೋಪಾಲ್ ಕೆ, ಗುರುರಾಜ್ ಎಂ. ಬಿ, ರಾಜೇಶ್ ಭಾಗವತ್, ಪ್ರಭಾಕರ್ ಅವರಿಂದ ವಾದನವನ್ನು ಒಳಗೊಂಡ ವರ್ಣರಂಜಿತ ಭಾವಗೀತೆ ಮತ್ತು ಜನಪದ ಸಂಗೀತ ಪ್ರಸ್ತುತಿಗೊಂಡಿತು.

ಮಂಗಳೂರು ಆಕಾಶವಾಣಿ ಕೇಂದ್ರದ ತಾಂತ್ರಿಕ ಉಪನಿರ್ದೇಶಕ ಶಿವಪ್ರಕಾಶ್ ಕೆ. ಸಿ. ಸ್ವಾ ಗತಿಸಿದರು. ಕಾರ್ಯಕ್ರಮ ವಿಭಾಗ ಮುಖ್ಯಸ್ಥ ಪಿ.ವಿ. ಪ್ರಶಾಂತ್ ಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿಕೆಯಲ್ಲಿ ಬಣಜಿಗರ ಕೊಡಗೆ ಸ್ಮರಣಾರ್ಹ
ನಗರಸಭೆಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ