ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು: ನಟ್ಟೋಜ

KannadaprabhaNewsNetwork |  
Published : Apr 09, 2026, 03:15 AM IST
ಫೋಟೋ: ೭ಪಿಟಿಆರ್-ಅಂಬಿಕಾ ಶಿಬಿರಅಂಬಿಕಾ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಬೇಸಿಗೆ ಶಿಬಿರ ನಡೆಯಿತು. | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದ್ದು, ಈ ದೇಶದ ಪ್ರತಿಯೊಬ್ಬರೂ ಕೂಡ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ದೇಶ ವಿಶ್ವಮಾನ್ಯವಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.

ಪುತ್ತೂರು: ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದ್ದು, ಈ ದೇಶದ ಪ್ರತಿಯೊಬ್ಬರೂ ಕೂಡ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ದೇಶ ವಿಶ್ವಮಾನ್ಯವಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮವಾದ ರೀತಿಯ ಕೊಡುಗೆ ನೀಡಬೇಕು. ಪ್ರವಾಹದ ಜೊತೆಯಲ್ಲಿ ಈಜುವ ಕೆಲಸವನ್ನು ಮಾಡಬೇಕಾದ ಅವಶ್ಯಕತೆ ಇದೆ. ಹಾಗಾಗಿ ಸ್ಕೌಟ್ಸ್ ಗೈಡ್ಸ್ ಗೆ ಸೇರಿದ ಪ್ರತಿಯೊಬ್ಬರೂ ಶಿಸ್ತು, ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಉಳಿದವರಿಗೆ ಮಾದರಿ ವಿದ್ಯಾರ್ಥಿಗಳಾಗಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಎ.ಎಲ್.ಟಿ. ತರಬೇತುದಾರೆ ಸುನೀತಾ ಜೆ. ರೈ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಲಿಕೆ ನಿರಂತರ ಪ್ರಕ್ರಿಯೆ, ಸಮಾಜದಲ್ಲಿ ಎಲ್ಲರೂ ಅಭಿವೃದ್ಧಿ ಹೊಂದಬೇಕು. ಎಲ್ಲರಲ್ಲಿಯೂ ನಾಯಕತ್ವ ಗುಣ, ಸಮಾಜಮುಖಿ ಆಲೋಚನೆಗಳು ಬೆಳೆಯಬೇಕು ಎಂದರು. ಗಿಡಗಳನ್ನು ನೆಟ್ಟು ಪೋಷಿಸಬೇಕು, ಇದರಿಂದ ಮುಂದಿನ ಜನಾಂಗ ಸುಖಿಯಾಗಿರುತ್ತದೆ. ಇದು ಪುಣ್ಯದ ಕೆಲಸ. ಜೀವನಕ್ಕೆ ಉತ್ತಮವಾದ ದಾರಿಯನ್ನು ಮಾಡುವಲ್ಲಿ ಇಂತಹ ಶಿಬಿರಗಳು ಸಹಾಯಕವಾಗುತ್ತವೆ ಎಂದರು. ವೇದಿಕೆಯಲ್ಲಿ ಸ್ಕೌಟ್ ಗೈಡ್ಸ್ ಎ.ಎಲ್.ಟಿ. ತರಬೇತಿ ಪಡೆದ ಮೇಬಲ್, ಶಿಬಿರದ ನಾಯಕ ಚಂದ್ರಾಕ್ಷ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಸ್ಕೌಟ್ ಶಿಕ್ಷಕ ಸತೀಶ್ ಇರ್ದೆ ಹಾಗೂ ಗೈಡ್ಸ್ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು. ಸ್ಕೌಟ್ ಶಿಕ್ಷಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯ ದೇಶದ ಆರ್ಥಿಕ ಪ್ರಗತಿಗೆ ಅಡಿಪಾಯ
ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಕೈಜೋಡಿಸಿ: ಡಿಗ್ರಿಜ