ಉಸಿರಿಗೆ ಜೀವ ಕೊಡುವ ಮರಗಿಡಗಳನ್ನು ಕಾಪಾಡಿಕೊಳ್ಳಬೇಕು: ಅಶೋಕ್ ರೈ

KannadaprabhaNewsNetwork |  
Published : Jan 21, 2026, 03:15 AM IST
ಫೋಟೋ: ೧೯ಪಿಟಿಆರ್-ಫಾರೆಸ್ಟ್ಪುತ್ತೂರಿನಲ್ಲಿ ಅರಣ್ಯ ಇಲಾಖೆಯ ದಿನಚರಿ ಬಿಡುಗಡೆ-ಮಾಹಿತಿ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಜನತೆಯ ಬದುಕು ಹಾಗೂ ಪರಿಸರದ ಸಂರಕ್ಷಣೆಗಾಗಿ ಅರಣ್ಯ ಅತಿ ಅವಶ್ಯಕವಾಗಿದ್ದು, ಅರಣ್ಯ ಇಲಾಖೆ ಇಲ್ಲದೆ ಹೋಗಿದ್ದರೆ ಇಂದು ಮನುಷ್ಯ ಗಾಳಿಗಾಗಿ ಪರದಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ನಾಡಿನಲ್ಲಿ ಸರ್ಕಾರದ ಜಾಗವೂ ದೊರೆಯದಂತಾಗುತ್ತಿತ್ತು. ಅರಣ್ಯ ರಕ್ಷಣೆ ಜನತೆಯ ಜವಾಬ್ದಾರಿಯಾಗಿದೆ. ನಮ್ಮ ಉಸಿರಿಗೆ ಜೀವ ಕೊಡುವ ಮರ ಗಿಡಗಳನ್ನು ನಾವು ಕಾಪಾಡಿಕೊಳ್ಳಬೇಕು.

ಪುತ್ತೂರು: ಜನತೆಯ ಬದುಕು ಹಾಗೂ ಪರಿಸರದ ಸಂರಕ್ಷಣೆಗಾಗಿ ಅರಣ್ಯ ಅತಿ ಅವಶ್ಯಕವಾಗಿದ್ದು, ಅರಣ್ಯ ಇಲಾಖೆ ಇಲ್ಲದೆ ಹೋಗಿದ್ದರೆ ಇಂದು ಮನುಷ್ಯ ಗಾಳಿಗಾಗಿ ಪರದಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ನಾಡಿನಲ್ಲಿ ಸರ್ಕಾರದ ಜಾಗವೂ ದೊರೆಯದಂತಾಗುತ್ತಿತ್ತು. ಅರಣ್ಯ ರಕ್ಷಣೆ ಜನತೆಯ ಜವಾಬ್ದಾರಿಯಾಗಿದೆ. ನಮ್ಮ ಉಸಿರಿಗೆ ಜೀವ ಕೊಡುವ ಮರ ಗಿಡಗಳನ್ನು ನಾವು ಕಾಪಾಡಿಕೊಳ್ಳಬೇಕು. ವ್ಯಕ್ತಿಗೊಂದು ಮರ ನಿರ್ಮಾಣದ ಚಿಂತನೆ ಬೆಳೆಯಬೇಕಾಗಿದೆ ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಮಂಗಳೂರು ವಿಭಾಗದ ವತಿಯಿಂದ ಸೋಮವಾರ ಪುತ್ತೂರಿನ ಸರ್ಕಾರಿ ನೌಕರ ಸಂಘದ ಸಭಾ ಭವನದಲ್ಲಿ ನಡೆದ ದಿನಚರಿ ಬಿಡುಗಡೆ-ಮಾಹಿತಿ ಕಾರ್‍ಯಾಗಾರ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾವಿನ ಮಿಡಿ ಏಲಂ ನಡೆಯಲ್ಲ:ಈ ಬಾರಿ ಸಾಕಷ್ಟು ಮಾವಿನ ಮರಗಳು ಹೂವು ಬಿಟ್ಟಿವೆ. ಬೇಕಾದಷ್ಟು ಮಾವಿನ ಹಣ್ಣು ಸಿಗಬಹುದು. ಇದರಿಂದ ನೂರಾರು ಪಕ್ಷಿಗಳಿಗೆ ಆಹಾರ ಸಿಗುವಂತಾಗುತ್ತದೆ. ಹಾಗಾಗಿ ಸರ್ಕಾರಿ ಜಾಗದಲ್ಲಿರುವ ಮಾವಿನ ಮರಗಳಿಂದ ಮಾವಿನ ಮಿಡಿಗಳನ್ನು ಕೊಯ್ಯಲು ಅವಕಾಶ ಇಲ್ಲ. ಈ ಹಿಂದೆ ಸರ್ಕಾರಿ ಜಾಗದಲ್ಲಿರುವ ಮಾವಿನ ಮರಗಳಿಂದ ಮಾವಿನ ಮಿಡಿ ಕೊಯ್ಯಲು ಏಲಂ ನಡೆಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಇದನ್ನು ತಡೆಹಿಡಿಯಲಾಗಿದೆ. ಪರಿಸರ ಕೊಟ್ಟ ಹಣ್ಣಿನಿಂದ ಪರಿಸರದ ಪ್ರಾಣಿ ಪಕ್ಷಿಗಳು ಬದುಕುವಂತಾಗಬೇಕು ಎಂಬ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.ಕಾರ್‍ಯಕ್ರಮದಲ್ಲಿ ಮಂಗಳೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಮಾತನಾಡಿ, ಅಭಿವೃದ್ಧಿಪರವಾದ ಅರಣ್ಯ ರಕ್ಷಣೆಯ ಮುಂಚೂಣಿಯ ಸಂಘಟನೆಗಳಿಂದ ಮಂಗಳೂರು ವಿಭಾಗದ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ಅರಣ್ಯ ರಕ್ಷಣೆಗಾಗಿ ಮುಂದಿನ ೪ ತಿಂಗಳು ನಿಮ್ಮ ಶ್ರಮ ಮತ್ತಷ್ಟು ಹೆಚ್ಚಾಗಬೇಕಾಗಿದೆ. ಬೆಂಕಿ ಅವಘಡಗಳಿಂದ ಅರಣ್ಯ ಪ್ರದೇಶವನ್ನು ರಕ್ಷಿಸಲು ಸಾಕಷ್ಟು ಮುಂಜಾಗರೂಕತೆ ವಹಿಸಬೇಕು. ಅದಕ್ಕಾಗಿ ಕಚೇರಿಯ ಕೆಲಸಕ್ಕಿಂತಲೂ ಪೀಲ್ಡ್ ಕಾರ್ಯಾಚರಣೆಗೆ ಹೆಚ್ಚು ಒತ್ತು ಕೊಡಬೇಕು ಎಂದರು.

ಕಾರ್‍ಯಕ್ರಮದಲ್ಲಿ ಯೋಧರ ಹೆಸರಲ್ಲಿ ಗಿಡಗಳನ್ನು ನೆಡುತ್ತಿರುವ ಬೆಳ್ತಂಗಡಿ ಮುಂಡಾಜೆಯ ಸಚಿನ್ ಭಿಡೆ, ಉರಗ ರಕ್ಷಕರಾದ ರಾಮಣ್ಣ ಗೌಡ ಬಿಳಿನೆಲೆ, ತೇಜಸ್ ಪುತ್ತೂರು, ಶ್ರೀನಿವಾಸ್ ಹಾಗೂ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾದ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷ ಜಿತೇಶ್ ಪಿ. ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಬ್ಬಯ್ಯ, ಶಶಿಕಾಂತ್ ಎಸ್ ವಿಭೂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ, ವಲಯ ಅರಣ್ಯಾಧಿಕಾರಿಗಳಾದ ಬಿ.ಎಂ. ಕಿರಣ್, ಮಂಜುನಾಥ್, ರಾಜೇಶ್ ಬಳಿಗಾರ, ರಾಘವೇಂದ್ರ ಎಚ್.ಪಿ, ಸಂತೋಷ್ ಕುಮಾರ್ ರೈ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಸಂಘದ ಗೌರವಾಧ್ಯಕ್ಷ ಜಗದೀಶ್ ಕೆ.ಎನ್. ಮತ್ತಿತರರು ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಮಾಹಿತಿ ಕಾರ್‍ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಭುವನೇಶ್ ಸುಬ್ರಹ್ಮಣ್ಯ ನಡೆಸಿಕೊಟ್ಟರು. ಸಂಘದ ಗೌರವಾಧ್ಯಕ್ಷ ಚಿದಾನಂದ್ ಬಿ. ಸ್ವಾಗತಿಸಿದರು. ಬಂಟ್ವಾಳ ವಲಯ ಅಧ್ಯಕ್ಷ ಅನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಸ್ತು ಅರಣ್ಯ ಪಾಲಕ ರಸೂಲಸಾಬ ಸಕನಾದಗಿ ಮತ್ತು ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ