ಹನುಮಗಿರಿ ಬ್ರಹ್ಮಕಲಶೋತ್ಸವಕ್ಕೆ ಅಯೋಧ್ಯೆಯಿಂದ ಜ್ಯೋತಿ, ಮೂಲ ಮೃತ್ತಿಕೆ

KannadaprabhaNewsNetwork |  
Published : Mar 29, 2026, 02:45 AM IST
ಫೋಟೋ: ೨೭ಪಿಟಿಆರ್- ಅಯೋಧ್ಯಅಯೋಧ್ಯೆಯಲ್ಲಿ ರಾಮಹನುಮ ಜ್ಯೋತಿ ರಥಯಾತ್ರೆ | Kannada Prabha

ಸಾರಾಂಶ

ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.೯ರಿಂದ ೧೨ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಅಯೋಧ್ಯೆಯಿಂದ ಜ್ಯೋತಿ ಹಾಗೂ ಮೂಲ ಮೃತ್ತಿಕೆಯನ್ನು ತರಲು ಹನುಮಗಿರಿಯಿಂದ ಹೊರಟ ರಾಮಹನುಮ ಜ್ಯೋತಿ ರಥಯಾತ್ರೆಯು ರಾಮ ಜನ್ಮಭೂಮಿ ಅಯೋಧ್ಯೆಗೆ ತಲುಪಿದೆ. ಅಲ್ಲಿ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ.

ಪುತ್ತೂರು : ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.೯ರಿಂದ ೧೨ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಅಯೋಧ್ಯೆಯಿಂದ ಜ್ಯೋತಿ ಹಾಗೂ ಮೂಲ ಮೃತ್ತಿಕೆಯನ್ನು ತರಲು ಹನುಮಗಿರಿಯಿಂದ ಹೊರಟ ರಾಮಹನುಮ ಜ್ಯೋತಿ ರಥಯಾತ್ರೆಯು ರಾಮ ಜನ್ಮಭೂಮಿ ಅಯೋಧ್ಯೆಗೆ ತಲುಪಿದೆ. ಅಲ್ಲಿ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಬಳಿಕ ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀ ರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಆಗಮಿಸಲಿದೆ. ರಾಮ ದೀಕ್ಷೆಯನ್ನು ಪಡೆದವರಿಗೆ ಕೋಟಿ ಶ್ರೀರಾಮ ತಾರಕ ಮಹಾಯಜ್ಞಾನದ ಸಂದರ್ಭದಲ್ಲಿ ಅಯೋಧ್ಯೆಯ ಪುಣ್ಯ ಮೃತ್ತಿಕೆ (ಮಣ್ಣು) ಮತ್ತು ಪ್ರಸಾದ ರೂಪದಲ್ಲಿ ಗಂಗಾಜಲವನ್ನು ನೀಡಲಾಗುತ್ತದೆ. ರಥಯಾತ್ರೆ ಅಂಜನಾದ್ರಿ ಮೂಲಕ ಪುತ್ತೂರಿನ ಹನುಮಗಿರಿಗೆ ಆಗಮಿಸುತ್ತಿದೆ.ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ದೇವಾಲಯದ ನಿರ್ಮಾಣದ ಉಸ್ತುವಾರಿ ಗೋಪಾಲ್ ಜಿ. ನೇತೃತ್ವದಲ್ಲಿ ರಥಯಾತ್ರೆ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಬ್ರಹ್ಮಕಲಶ ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ, ಪ್ರಮುಖರಾದ ಜಗದೀಶ್ ಶೇಣವ, ಶ್ರೀಧರ್ ತೆಂಕಿಲ, ಜಿತೇಶ್ ಬಲ್ನಾಡು, ಜಯಂತ್ ಕುಂಜೂರುಪಂಜ, ಜೀವನ್ ಬಲ್ನಾಡು, ಸಿ ಗೋವಿಂದರಾಜು ಯಲಹಂಕ, ನಂದನ್ ತಿಂಗಳಾಡಿ ಸೇರಿದಂತೆ ಹಲವಾರು ಶ್ರೀರಾಮ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಎನ್ನುವುದು ಜೀವನ ಸ್ವಭಾವ, ಆಚರಣೆಯಲ್ಲ
ಬಂಟ್ವಾಳ ಶಾಸಕರು ಮಂಡಿಸಿದ ಹಕ್ಕುಚ್ಯುತಿಯಿಂದ ನೋವಾಗಿದೆ: ರಮಾನಾಥ ರೈ