ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಆರ್.ಎನ್. ಸಿಂಗ್ ಪಾಲಕ್ಕಾಡ್ ವಿಭಾಗದಲ್ಲಿ ರೈಲ್ವೆ ಮೂಲಸೌಕರ್ಯ, ಸುರಕ್ಷತಾ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ
ಮಂಗಳೂರು: ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಆರ್.ಎನ್. ಸಿಂಗ್ ಪಾಲಕ್ಕಾಡ್ ವಿಭಾಗದಲ್ಲಿ ರೈಲ್ವೆ ಮೂಲಸೌಕರ್ಯ, ಸುರಕ್ಷತಾ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮಂಗಳೂರು ಸೆಂಟ್ರಲ್ ನಿಲ್ದಾಣದ ಸಂಪೂರ್ಣ ಪರಿಶೀಲನೆ ಮತ್ತು ಮಂಗಳೂರು ಜಂಕ್ಷನ್ ಯಾರ್ಡ್‌ನ ಮೇಲ್ದರ್ಜೀಕರಣದ ಕುರಿತು ಚರ್ಚಿಸಿದ ಬಳಿಕ ಜನರಲ್ ಮ್ಯಾನೇಜರ್ ಮಂಗಳೂರು ಸೆಂಟ್ರಲ್‌ನಿಂದ ಶೋರನೂರು ಜಂಕ್ಷನ್‌ಗೆ ವಿಶೇಷ ತಪಾಸಣಾ ರೈಲಿನಲ್ಲಿ ಪ್ರಯಾಣಿಸಿದರು. ಮಾರ್ಗಮಧ್ಯೆ ರೈಲ್ವೆ ಮೂಲಸೌಕರ್ಯ, ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಕಾರಿಡಾರ್‌ನಾದ್ಯಂತದ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು.ಕೋಝಿಕ್ಕೋಡ್‌ಗೆ ಆಗಮಿಸಿದ ಜಿಎಂ ಆರ್.ಎನ್.ಸಿಂಗ್ ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳ ಪರಿಶೀಲ ನಡೆಸಿದರು. ಈ ವೇಳೆ ಜಿಎಂ ಕೋಝಿಕ್ಕೋಡ್ ಸಂಸದ ಎಂ.ಕೆ. ರಾಘವನ್ ಅವರನ್ನು ಭೇಟಿ ಮಾಡಿ ಪುನರಾಭಿವೃದ್ಧಿಯ ವ್ಯಾಪ್ತಿ ಮತ್ತು ಪ್ರಗತಿಯ ಕುರಿತು ಚರ್ಚೆ ನಡೆಸಿದರು.ಜನರಲ್ ಮ್ಯಾನೇಜರ್ ಅವರು ಕಾಸರಗೋಡು ಮತ್ತು ಕಣ್ಣೂರು ರೈಲ್ವೆ ನಿಲ್ದಾಣಗಳನ್ನು ಸಹ ಪರಿಶೀಲಿಸಿದರು, ಇವೆರಡೂ ಪ್ರಸ್ತುತ ಅಮೃತ್ ಭಾರತ್ ಯೋಜನೆಯಡಿ ಪುನರಾಭಿವೃದ್ಧಿಗೆ ಒಳಗಾಗುತ್ತಿವೆ. ಪ್ರತಿ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೇಗ ಮತ್ತು ಗುಣಮಟ್ಟದ ಪರಿಶೀಲನೆ ನಡೆಸಿದರು.
ಪಾಲಕ್ಕಾಡ್ ವಿಭಾಗೀಯ ರೈಲ್ವೆ ಮ್ಯಾನೇಜರ್ ಮಧುಕರ್ ರೋಟ್, ಮುಖ್ಯ ಯೋಜನಾ ವ್ಯವಸ್ಥಾಪಕ / ಗತಿಶಕ್ತಿ ಎಸ್. ಜಯಕೃಷ್ಣನ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.