ಪುತ್ತೂರು: ಯಾರೂ ಉದ್ಯಮಿಗಳಾಗಿ ಹುಟ್ಟುವುದಿಲ್ಲ. ಉತ್ತಮ ಯೋಚನೆ, ಯೋಜನೆ, ಪರಿಕಲ್ಪನೆಯೊಂದಿಗೆ ಸೂಕ್ತ ತರಬೇತಿ ಪಡೆದುಕೊಂಡಾಗ ಯಶಸ್ವೀ ಉದ್ಯಮಿಯಾಗುವುದಕ್ಕೆ ಸಾಧ್ಯವಿದೆ ಎಂದು ಪುತ್ತೂರಿನ ಮುಳಿಯ ಜುವೆಲ್ಲರ್ಸ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮಾತನಾಡಿ, ಸೃಜನಶೀಲ ಚಿಂತನೆಯ ಮೂಲಕ ಸಣ್ಣ ಸಣ್ಣ ಪಟ್ಟಣಗಳಲ್ಲಿ ಉದ್ಯಮವನ್ನು ಪ್ರಾರಂಭಿಸಿದಾಗ ಅದು ಆ ಪ್ರದೇಶದ ಆರ್ಥಿಕಾಭಿವೃದ್ದಿಗೆ ವೇಗವರ್ಧಕವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ಹೊಸತನದ, ಸಾಮಾಜಿಕ ಜವಾಬ್ಧಾರಿಯ, ಪರಿಸರದ ಕಾಳಜಿಯುಳ್ಳ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಎಂಬಿಎ ವಿಭಾಗದ ವಿದ್ಯಾರ್ಥಿಗಳ ಮೇಲಿದೆ ಎಂದರು. ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ.ಆಶ್ಲೆ.ಡಿ.ಸೋಜ ವಂದಿಸಿದರು. ಸಹ ಸಂಯೋಜಕಿ ಪ್ರೊ.ಜೀವಿತಾ.ಬಿ.ವಿ ಸಹಕರಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ.ಜಿ.ಕೆ ಮತ್ತು ಶ್ರುತಾ ರೈ ನಿರ್ವಹಿಸಿದರು.ಬಹುಮಾನ ವಿತರಣೆ: ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ಬಹುಮಾನ ವಿತರಿಸಿದರು. ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಕಲ್ಲಡ್ಕದ ಶ್ರೀರಾಮ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಮತ್ತು ವಿವೇಕಾನಂದ ಕಾಲೇಜು(ಸ್ವಾಯತ್ತ) ಕಾಲೇಜು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.