ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರುದ ಪಿಲಿಗೊಬ್ಬು'''' ಸೀಸನ್ ೪

KannadaprabhaNewsNetwork |  
Published : Oct 17, 2026, 02:30 AM IST
ಫೋಟೋ: ೧೬ಪಿಟಿಆರ್-ಪ್ರೆಸ್ ಪಿಲಿ ಸುದ್ಧಿಗೋಷ್ಟಿಯಲ್ಲಿ ಸಹಜ್ ರೈ ಬಳಜ್ಜ ಮಾತನಾಡಿದರು. | Kannada Prabha

ಸಾರಾಂಶ

: ಪುತ್ತೂರಿನ ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ತುಳುನಾಡಿನ ಧಾರ್ಮಿಕ-ಸಾಂಸ್ಕ್ರತಿಕ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ `ಪುತ್ತೂರುದ ಪಿಲಿಗೊಬ್ಬು''''ಎಂಬ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಸ್ಪರ್ಧೆಯ ನಾಲ್ಕನೇ ಸೀಸನ್ ಅ. ೧೭ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.

ಪುತ್ತೂರು: ಪುತ್ತೂರಿನ ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ತುಳುನಾಡಿನ ಧಾರ್ಮಿಕ-ಸಾಂಸ್ಕ್ರತಿಕ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ `ಪುತ್ತೂರುದ ಪಿಲಿಗೊಬ್ಬು''''''''ಎಂಬ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಸ್ಪರ್ಧೆಯ ನಾಲ್ಕನೇ ಸೀಸನ್ ಅ. ೧೭ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.ಅವರು ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅ. ೧೭ರಂದು ಬೆಳಗ್ಗೆ ೧೦.೩೦ಕ್ಕೆ ಸ್ಪರ್ಧೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದು, ಜತೆಗೆ ಸೆಲೆಬ್ರಿಟಿಗಳಾದ ಬಾಲಿವುಡ್ ನ ಸೋನು ಸೂದ್, ಪೃಥ್ವಿ ಅಂಬರ್ ಮೊದಲಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.ಸ್ಪರ್ಧೆಯಲ್ಲಿ ೯ ಹುಲಿವೇಷದ ತಂಡಗಳು ಪಾಲ್ಗೊಳ್ಳಲಿದ್ದು, ಮೊದಲ ಮೂರು ವಿಜೇತರಿಗೆ ಕ್ರಮವಾಗಿ ೪, ೩, ೨ ಲಕ್ಷ ರು.ಗಳ ನಗದು ಬಹುಮಾನವಿರುತ್ತದೆ. ಜತೆಗೆ ಪ್ರತಿ ತಂಡಗಳಿಗೂ ೬೦ ಸಾವಿರ ರೂ.ಗಳ ಗೌರವಧನವಿರುತ್ತದೆ. ಜತೆಗೆ ಹಲವು ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ಪ್ರಥಮ ಬಹುಮಾನವಾಗಿ ೪ ಲಕ್ಷ ರು, ದ್ವಿತೀಯ ಬಹುಮಾನವಾಗಿ ೩ ಲಕ್ಷ ರು. ಹಾಗೂ ತೃತೀಯ ಬಹುಮಾನವಾಗಿ ೨ ಲಕ್ಷ ರು. ನೀಡಲಾಗುವುದು. ಇದರೊಂದಿಗೆ ಪ್ರೋತ್ಸಾಹಕ ಬಹುಮಾನಗಳನ್ನೂ ವಿತರಿಸಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ರು. ೬೦,೦೦೦ ಗೌರವ ಸಂಭಾವನೆ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಪ್ರಶಸ್ತಿ ಹಾಗೂ ಗುಂಪು ಪ್ರಶಸ್ತಿ ವಿಭಾಗಗಳಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ ಮತ್ತು ಉತ್ತಮ ಧರಣಿ ಮಂಡಲ ಕುಣಿತಕ್ಕೆ ಪ್ರಶಸ್ತಿಗಳನ್ನು ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು ಮತ್ತು ನಾಣ್ಯ ತೆಗೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳಿಗೆ ವಿಶೇಷ ಬಹುಮಾನಗಳಿರಲಿವೆ ಎಂದು ತಿಳಿಸಿದರು.

ಪ್ರತಿ ತಂಡದಲ್ಲಿ ೧೫ ಹುಲಿವೇಷಧಾರಿಗಳು ಭಾಗವಹಿಸಲಿದ್ದು, ಕಲಾ ಪ್ರದರ್ಶನಕ್ಕೆ ೨೦+೨ ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಹುಲಿವೇಷ ಕುಣಿತ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಹೊಂದಿರುವ ಜಿಲ್ಲೆಯ ಖ್ಯಾತ ತೀರ್ಪುಗಾರರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ನವನೀತ್ ಶೆಟ್ಟಿ, ಪಿಲಿಕುಣಿತದಲ್ಲಿ ಹಲವು ವರ್ಷಗಳ ಅನುಭವವುಳ್ಳ ಟೈಗರ್ ಕ್ಯಾಂಪ್ ರಾಜ, ಸತೀಶ್ ಹೊಯಿಗೆ ಬಜಾರ್, ಗಿರೀಶ್ ನಾರಾಯಣ್ ತೀರ್ಪುಗಾರರಾಗಿರುವರು ಎಂದು ಮಾಹಿತಿ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ವಿಜಯ ಸಾಮ್ರಾಟ್ ಸಂಘಟನೆಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪದಾಧಿಕಾರಿಗಳಾದ ರತನ್ ರೈ ಕುಂಬ್ರ, ಶರತ್ ಆಳ್ವ ಕೂರೇಲು, ಅಶೋಕ್ ಅಡೂರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಚೇತನರಿಗೆ ಮೆಡಿಕಲ್ ಕಾಲೇಜ್‌ನಲ್ಲಿ ಉದ್ಯೋಗ ಒದಗಿಸಲು ಯತ್ನ-ಶಾಸಕ ಅಶೋಕ್ ರೈ
ದೊಡ್ಡಣಗುಡ್ಡೆ ಕ್ಷೇತ್ರ - ತ್ರಿಪುರ ಸುಂದರಿ ಮಹಾಯಾಗ ಸಂಪನ್ನ