ಪಿವಿಆರ್ ಸಿನಿಮಾಸ್‌ಗೆ 75,000 ರು.ದಂಡ

KannadaprabhaNewsNetwork |  
Published : Sep 17, 2026, 03:45 AM IST
ಪಿವಿಆರ್‌ | Kannada Prabha

ಸಾರಾಂಶ

ಹೊಸೂರು ಮುಖ್ಯ ರಸ್ತೆಯ ಪ್ರತಿಷ್ಠಿತ ‘ಪಿವಿಆರ್ ಸಿನಿಮಾಸ್’ ವಾಣಿಜ್ಯ ಸಂಸ್ಥೆಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಿ ನಿಯಮ ಉಲ್ಲಂಘಿಸಿದ ಪಿವಿಆರ್ ಸಿನಿಮಾಸ್‌ಗೆ ಪಾಲಿಕೆ ಅಧಿಕಾರಿಗಳು 75,000 ರು.ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸೂರು ಮುಖ್ಯ ರಸ್ತೆಯ ಪ್ರತಿಷ್ಠಿತ ‘ಪಿವಿಆರ್ ಸಿನಿಮಾಸ್’ ವಾಣಿಜ್ಯ ಸಂಸ್ಥೆಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಿ ನಿಯಮ ಉಲ್ಲಂಘಿಸಿದ ಪಿವಿಆರ್ ಸಿನಿಮಾಸ್‌ಗೆ ಪಾಲಿಕೆ ಅಧಿಕಾರಿಗಳು 75,000 ರು.ದಂಡ ವಿಧಿಸಿದ್ದಾರೆ.

ಕಸವನ್ನು ಮೂಲದಲ್ಲೇ ಸಮರ್ಪಕವಾಗಿ ವಿಂಗಡಿಸದೆ ಮಿಶ್ರಣ ಮಾಡಿದ್ದಕ್ಕಾಗಿ 50 ಸಾವಿರ ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪೋರಂ ಮಾಲ್ ಸಿಬ್ಬಂದಿಗೆ 50,839 ರೂ. ದಂಡ

ಉತ್ತರಹಳ್ಳಿ ಕನಕಪುರ ಮುಖ್ಯ ರಸ್ತೆ ಜಯನಗರ ಹೌಸಿಂಗ್ ಸೊಸೈಟಿ ಬಡಾವಣೆ ಶಾಪ್ ವೆಲ್ ಸೂಪರ್ ಮಾರ್ಕೆಟ್ ಹತ್ತಿರ ಒಳಚರಂಡಿ ಸಂಸ್ಕರಣ ತ್ಯಾಜ್ಯ ಸುರಿದಿರುವುದು ಕಂಡು ಬಂದಿರುತ್ತದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹಾಗೂ ಈ ತ್ಯಾಜ್ಯವು ಪೋರಂ ಮಾಲ್‌ಗೆ ಸೇರಿದ್ದಾಗಿದೆ ಎಂದು ಮಾಲ್ ನ ಸಿಬ್ಬಂದಿ ಒಪ್ಪಿದ ಮೇರೆಗೆ 50,839 ರು. ಗಳ ದಂಡ ವಿಧಿಸಿ ವಸೂಲಿ ಮಾಡಲಾಗಿದೆ.

ವೈಜ್ಞಾನಿಕ ತ್ಯಾಜ್ಯ ವಿಲೇಗೆ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ:

ದಂಡ ವಸೂಲಿ ಮಾಡಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಚಿತ್ರಮಂದಿರದ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೂಜೆ ಹೆಸ್ರಲ್ಲಿ ವೃದ್ಧೆಗೆ40 ಲಕ್ಷದ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!
ವಿವಾಹಿತೆಯ ಅಪಹರಣ: ದುಷ್ಕರ್ಮಿಗಳಿಗೆ ಥಳಿಸಿದ ಸ್ಥಳೀಯರು