ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಬದಲಾವಣೆ- ಖಾದ್ರಿ

KannadaprabhaNewsNetwork |  
Published : Nov 15, 2025, 02:15 AM IST
ಪೊಟೋಪೈಲ್ ನೇಮ್ ೧೪ಎಸ್‌ಜಿವಿ೨   ತಾಲೂಕಿನ ಕುನ್ನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಪೋಷÀಕರ-ಶಿಕ್ಷಕರ ಮಹಾಸಭೆ ಕಾರ್ಯಕ್ರಮದಲ್ಲಿ ಶಾಸಕರು,  ಹೆಸ್ಕಾಂ ನಿಗಮದ ಅಧ್ಯಕ್ಷ  ಸಯ್ಯದ ಅಜೀಮಪೀರ್ ಎಸ್ ಖಾದ್ರಿ ಪಾಲ್ಗೊಂಡು ಮಾತನಾಡಿದರು.  | Kannada Prabha

ಸಾರಾಂಶ

ಇದು ತಂತ್ರಜ್ಞಾನ ಯುಗವಾಗಿದೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಜಗತ್ತಿನ ವೇಗಕ್ಕೆ ಸರಿಸಾಟಿಯಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಗುಣಮಟ್ಟದ ಬದಲಾವಣೆ ತಂದಿದೆ, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಮಾಜಿ ಶಾಸಕ, ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ ಅಜೀಮಪೀರ್ ಎಸ್. ಖಾದ್ರಿ ಅವರು ಹೇಳಿದರು.

ಶಿಗ್ಗಾಂವಿ: ಇದು ತಂತ್ರಜ್ಞಾನ ಯುಗವಾಗಿದೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಜಗತ್ತಿನ ವೇಗಕ್ಕೆ ಸರಿಸಾಟಿಯಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಗುಣಮಟ್ಟದ ಬದಲಾವಣೆ ತಂದಿದೆ, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಮಾಜಿ ಶಾಸಕ, ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ ಅಜೀಮಪೀರ್ ಎಸ್. ಖಾದ್ರಿ ಅವರು ಹೇಳಿದರು.ತಾಲೂಕಿನ ಕುನ್ನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಪೋಷಕರ-ಶಿಕ್ಷಕರ ಮಹಾಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲಸಗಳು ಮಾತನಾಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ, ನಮ್ಮ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಿದೆ. ಇನ್ನೂ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು, ಅವುಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ದೇಶ ಕಟ್ಟುವಂತವರಾಗಬೇಕು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಪಾಲಕರ ಕನಸನ್ನು ನನಸು ಮಾಡಿ, ನಮ್ಮ ತಾಲೂಕಿನ, ಜಿಲ್ಲೆಯ, ರಾಜ್ಯದ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಬಾರದು, ದುಶ್ಚಟಗಳಿಂದ ದೂರವಿರಿ, ಉನ್ನತ ಶಿಕ್ಷಣ ಪಡೆದುಕೊಳ್ಳಿ, ನಿಮ್ಮಲ್ಲಿ ಸಾಧಿಸುವ ಛಲ ಬೆಳೆಸಿಕೊಳ್ಳಿ ಅದಕ್ಕೆ ತಕ್ಕ ಪ್ರಯತ್ನ ಮಾಡುತ್ತಿರಬೇಕು ಎಂದರು.ಹಿರಿಯ ಪತ್ರಕರ್ತ ಬಿ.ಎಸ್. ಹಿರೇಮಠ, ಉಪಾಧ್ಯಕ್ಷರಾದ ದಾವಲಸಾಬ ಮಮದೂನವರ, ಸದಸ್ಯರುಗಳಾದ ಪ್ರಕಾಶ ಮನಾಯಿ, ಈಶ್ವರಗೌಡ ಪಾಟೀಲ, ಬಸವರಾಜ ಕಣಕಣ್ಣವರ, ಮುಖ್ಯೋಪಾಧ್ಯಾಯ ಎಸ್.ಆರ್. ಲಮಾಣಿ, ಶಿಕ್ಷಕಿ ಡಿ.ಎನ್. ದೇಸಾಯಿ, ಪಿ.ಕೆ. ಫಾಟಕ, ಜ್ಯೋತಿ ಪಾಟೀಲ, ಸಂಗೀತಾ ಕೋಟಿ, ಎನ್.ಎಸ್. ರಾಠೋಡ, ಮುಖಂಡರಾದ ಮುದಕಯ್ಯ ಹಿರೇಮಠ, ವಿದ್ಯಾಧರ ಸೊಗಲಿ, ಗದಗಯ್ಯ ಹಿರೇಮಠ, ಮಾಬುಲಿ ಹೊರಕೇರಿ, ಶಿವಪ್ಪ ಬಾರ್ಕಿ, ರಾಜೇಸಾಬ ಕುರಟ್ಟಿ, ಶಿವಾನಂದ ದೊಡ್ಡಮನಿ ಪಾಲ್ಗೊಂಡಿದ್ದರು.ಶಿಕ್ಷಕ ಗಿರೀಶ್ ಸವಣೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV

Recommended Stories

ಎರಡನೇ ಬೆಳೆಗಿಲ್ಲ ತುಂಗಭದ್ರಾ ನೀರು
ಬಿಹಾರ ಜನರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ: ಜಿ.ಐ. ಹೆಗಡೆ