ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ

KannadaprabhaNewsNetwork |  
Published : Jan 23, 2026, 01:45 AM IST
ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಿಂದ ಗುಣಮಟ್ಟದ  ಶಿಕ್ಷಣ ತಿಮ್ಮರಾಜಿಪುರ ಪುಟ್ಟಣ್ಣ | Kannada Prabha

ಸಾರಾಂಶ

ಪಟ್ಟಣದಲ್ಲಿ ದೇವನೂರು ಶ್ರೀಗಳು ಸ್ಥಾಪಿಸಿರುವ ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಕಡಿಮೆ ಶುಲ್ಕದೊಂದಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಇಲ್ಲಿ ಕಲಿತ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಿ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ ಹೇಳಿದರು

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದಲ್ಲಿ ದೇವನೂರು ಶ್ರೀಗಳು ಸ್ಥಾಪಿಸಿರುವ ಗುರುಮಲ್ಲೇಶ್ವರ ವಿದ್ಯಾಸಂಸ್ಥೆ ಕಡಿಮೆ ಶುಲ್ಕದೊಂದಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಇಲ್ಲಿ ಕಲಿತ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಿ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ ಹೇಳಿದರು.

ಗುರುಮಲ್ಲೇಶ್ವರ ಸಂಸ್ಥೆಯಲ್ಲಿ ಆಯೋಜಿಸಿದ್ದ ಗುರುಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಗುರುಮಲ್ಲೇಶ್ವರರ ಕೊಡುಗೆ ಅಪಾರ, ಅವರ ಹೆಸರಲ್ಲಿ ಕೊಳ್ಳೇಗಾಲದಲ್ಲಿ ಮಹಾಂತಸ್ವಾಮಿಜಿಗಳು ಸ್ಥಾಪಿಸಿರುವ ಈ ಸಂಸ್ಥೆ ಪ್ರಾಮಾಣಿಕವಾಗಿ ಕಳೆದ 11ವರುಷಗಳಲ್ಲಿ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ. ಈ ವಿದ್ಯಾಸಂಸ್ಥೆಗೆ ಗೇರುಮಾಳದ ಸಾಹುಕಾರರ ಕುಟುಂಬ ಸ್ಥಳ ದಾನ ನೀಡಿದ ಹಿನ್ನೆಲೆ ಇಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿದೆ,

ಈ ಸಂಸ್ಥೆಗೆ ಗೇರುಮಾಳದ ಧಾನಿಗಳ ಕೊಡುಗೆ ಅಪಾರ, ವಿದ್ಯಾರ್ಥಿಗಳು ಶಿಕ್ಷಣ ಕಲಿತು ಸಂಸ್ಥಾರವಂತರಾಗಬೇಕು, ಮೊಬೈಲ್ ನಿಂದ ಸಾಧ್ಯವಾದಷ್ಟು ದೂರವಿರಬೇಕು,ಅಗತ್ಯಕ್ಕೆ ತಕ್ಕಂತೆ ಜಾಲತಾಣ ಬಳಸಬೇಕು, ಆದರೆ ಜಾಲತಾಣದ ಗೀಳಿಗೆ ವಿದ್ಯಾಥಿ೯ಗಳು ಅಂಟಿಕೊಳ್ಳಬಾರದು, ಜಾಲತಾಣಗಳಿಂದ ಉಪಯೋಗ ಪಡೆಯಬೇಕು, ಆದರೆ ಅವುಗಳಿಂದ ಅಪಾಯಕ್ಕೊಳಗಾಗಬಾರದು ಎಂದರು.

ಈವೇಳೆ ವೀರಶೈವ ಮಹಾಸಭೆ ಚಾ.ನಗರ ಜಿಲ್ಲಾ ಘಟಕದ ಅಧ್ಯಕ್ಷ ಮುಡ್ಲೂಪುರ ನಂದೀಶ್, ಗುರುಮಲ್ಲೇಶ್ವರ

ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವೖಷಬೇಂದ್ರ, ಪ್ರಾದ್ಯಾಪಕ ರಾಜಶೇಖರ್, ದಾನಿಗಳಾದ ಹಲಗೇಶ್, ಜಯಣ್ಣ, ತಾಲೂಕು ವೀರಶೈವ ಮಹಾಸಭೆ ತಾಲೂಕು ಕಾರ್ಯದರ್ಶಿ ಕೆಂಪನ ಪಾಳ್ಯ ಮಹೇಶ್, ಸಿ ಆರ್ ಪಿ ಸಮಿರಾ ಖಾನಂ, ಪ್ರೊ ನಂಜುಂಡ ಸ್ವಾಮಿ , ಲಿಂಗಣಾಪುರ ಬಸವರಾಜ, ತಾಪಂ ಮಾಜಿ ಸದಸ್ಯ.ಕಾಮಗೆರೆ ನಟೇಶ್ , ವೀರಶೈವ ಪತ್ತಿನ ಸಂಘದ ನಂದೀಶ್, ಶಿವಸ್ವಾಮಿ, ನಿಂಗರಾಜು, ಶಿವಸ್ವಾಮಿ , ಕಾಳಿಹುಂಡಿ ಕುಮಾರಸ್ವಾಮಿ, ಮಹೇಶ. ಕುಣಗಳ್ಳಿ ಕಾಂತರಾಜು ಜಿನಕನಹಳ್ಳಿ ನಟರಾಜು,ಉಗನಿಯ ಮಹೇಶ್, ಮಧುವನಹಳ್ಳಿ ಬಸವರಾಜು, ದೊರೆಸ್ವಾಮಿ, ಮುಖ್ಯಶಿಕ್ಷಕಿ ಮನು ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರ್‍ಯಾಗಿಂಗ್ ಮಾಡಿದ ಮೂವರ ಬಂಧನ
ಪ್ರಯಾಣಿಕರೊಂದಿಗೆ ಕೆಲ ಚಾಲಕ, ನಿರ್ವಾಹಕರ ಉದ್ಧಟತನ ವರ್ತನೆ