ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣವಿದೆ: ಡಾ. ಜ್ಞಾನೇಶ್

KannadaprabhaNewsNetwork |  
Published : Sep 07, 2026, 01:30 AM IST
ಫೋಟೊ:೦೬ಕೆಪಿಸೊರಬ-೦೨ : ಸೊರಬ ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್ನಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಗೌರವಿಸಿ, ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಕರನ್ನು ಗೌರವಿಸುವುದು ಕೇವಲ ಒಬ್ಬ ವ್ಯಕ್ತಿಯ ಗೌರವಿಸಿದಂತೆ ಅಲ್ಲ, ಇಡೀ ಸಮಾಜವನ್ನೇ ಗೌರವಿಸಿದಂತೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪನಾ ಅದ್ಯಕ್ಷ ಡಾ. ಎಚ್.ಇ. ಜ್ಞಾನೇಶ್ ಅಭಿಪ್ರಾಯಪಟ್ಟರು. ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಶಿಕ್ಷಕರನ್ನು ಗೌರವಿಸುವುದು ಕೇವಲ ಒಬ್ಬ ವ್ಯಕ್ತಿಯ ಗೌರವಿಸಿದಂತೆ ಅಲ್ಲ, ಇಡೀ ಸಮಾಜವನ್ನೇ ಗೌರವಿಸಿದಂತೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪನಾ ಅದ್ಯಕ್ಷ ಡಾ. ಎಚ್.ಇ. ಜ್ಞಾನೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳಿಗೆ ಸೀಮಿತವಾಗಿದೆ. ಮಕ್ಕಳು ಅಂಕ ಗಳಿಸುವ ಯಂತ್ರಗಳಾಗದೆ, ಬೌದ್ಧಿಕವಾಗಿ, ಸೃಜನಶೀಲವಾಗಿ ಬೆಳೆಯುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಖಾಸಗಿ ಶಾಲೆಗಳ ಹಿಂದೆ ಹೋಗುವ ಅಗತ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲೇ ಇಂದು ಗುಣಮಟ್ಟದ ಶಿಕ್ಷಕರು ದೊರೆಯುತ್ತಿದ್ದು, ಮಕ್ಕಳು ಉತ್ತಮ ಶಿಕ್ಷಣ ಪಡೆಯಬಹುದು. ಸರ್ಕಾರಿ ಶಾಲೆಗಳಲ್ಲಿ ಈಗ ಹಿಂದೆಗಿಂತಲೂ ಹೆಚ್ಚು ಸೌಲಭ್ಯಗಳು ದೊರೆಯುತ್ತಿವೆ. ಅರ್ಹತೆ ಪಡೆದ, ತರಬೇತಿ ಹೊಂದಿದ ಗುಣಮಟ್ಟದ ಶಿಕ್ಷಕರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದಾರೆ ಎಂದರು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಕಾಲದ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಶಿಕ್ಷಣವು ಜೀವನದ ಪಾಠ ಕಲಿಸುತ್ತಿತ್ತು, ಈಗಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ನಾವು ಜೀವನದ ನಿಜವಾದ ಪಾಠದಿಂದ ಹಿಂದೆ ಉಳಿದಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಲೆಯ ಕಾನೂನು ಸಲಹೆಗಾರ ಚಂದ್ರು ಕರಿಯಮ್ಮನವರ್ ಮಾತನಾಡಿ, ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಒಂದು ಕಡೆ ಕನ್ನಡ ಉಳಿಸಿ, ಬೆಳೆಸಿ ಎನ್ನುತ್ತಾ, ಮತ್ತೊಂದೆಡೆ ಕನ್ನಡ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದು ಯಾವ ನ್ಯಾಯ? ಸರ್ಕಾರದ ದ್ವಂದ್ವ ನೀತಿಯಿಂದಾಗಿ ಇಂದು ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಕನ್ನಡ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಎಚ್.ಇ. ಮಾಲತೇಶ, ಕಾರ್ಯದರ್ಶಿ ಪ್ರಕಾಶ್, ಸಮಾಜ ಸೇವಕ ನಾಗರಾಜ ಗುತ್ತಿ, ರಂಗನಾಥ ಶಾಲೆಯ ಕಾರ್ಯದರ್ಶಿ ನೀಲಪ್ಪ ಡಿ. ಬೂತಣ್ಣನವರ್, ಮಹಾಂತೇಶ್, ಪಾಣಿ ರಾಜಪ್ಪ, ಶಿವನಂದಪ್ಪ ಬಿಳಾಗಿ, ಸಿ.ಬಿ. ಈಶ್ವರಪ್ಪ, ಆಶಾ, ಶಿಲ್ಪ, ಕವಿತ, ಮಂಜುಳಾ, ವೀಣಾ ಶ್ರೀಧರ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಾಚರಣೆಗೆ ಗೈರಾದ ಶಾಸಕರು ಶಿಕ್ಷಕರಲ್ಲಿ ಕ್ಷಮೆಯಾಚನೆಗೆ ಆಗ್ರಹ: ರತ್ನಾಕರ
ಗ್ರಾಮೀಣ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗಲಿ: ಸುನಿಲ್‌ಗೌಡ