ಉತ್ತಮ ಸುದ್ದಿಗಳಿಗೆ ಗುಣಮಟ್ಟದ ಫೋಟೋಗಳೂ ಮುಖ್ಯ: ನಾಗರಾಜ್

KannadaprabhaNewsNetwork |  
Published : Aug 31, 2026, 01:45 AM IST
ಕ್ಯಾಪ್ಷನ30ಕೆಡಿವಿಜಿ41 ದಾವಣಗೆರೆಯಲ್ಲಿಂದು ನಡೆದ ದೇವನಗರಿ ಪ್ರೊ ಇಮೇಜ್ ಛಾಯಾಮೇಳದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಒಂದು ಫೋಟೋ ನೂರು ಪದಗಳ ಶಕ್ತಿ ಹೊಂದಿದೆ. ನಮ್ಮ ಮಾಧ್ಯಮ ಕ್ಷೇತ್ರದಲ್ಲಿ ಸುದ್ದಿಯ ಜತೆಗೆ ಒಂದು ಫೋಟೋ, ವಿಡಿಯೋ ಇರದಿದ್ದರೆ ಅದು ಅರ್ಥ ಕೊಡುವುದಿಲ್ಲ. ಸುದ್ದಿಗೆ ತಕ್ಕಂತೆ ಫೋಟೋಗಳ ಅವಶ್ಯಕತೆ ಇದೆ. ಈ ವೃತ್ತಿಯಲ್ಲಿ ಮಾತಿನ ಶೈಲಿ, ಶಿಸ್ತು, ಸಮಯ ಪ್ರಜ್ಞೆ ಅತ್ಯಂತ ಪ್ರಮುಖವಾಗಿದ್ದು, ಫೋಟೋಗ್ರಾಫರ್ಸ್‌ ಇದನ್ನು ಪಾಲಿಸಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಒಂದು ಫೋಟೋ ನೂರು ಪದಗಳ ಶಕ್ತಿ ಹೊಂದಿದೆ. ನಮ್ಮ ಮಾಧ್ಯಮ ಕ್ಷೇತ್ರದಲ್ಲಿ ಸುದ್ದಿಯ ಜತೆಗೆ ಒಂದು ಫೋಟೋ, ವಿಡಿಯೋ ಇರದಿದ್ದರೆ ಅದು ಅರ್ಥ ಕೊಡುವುದಿಲ್ಲ. ಸುದ್ದಿಗೆ ತಕ್ಕಂತೆ ಫೋಟೋಗಳ ಅವಶ್ಯಕತೆ ಇದೆ. ಈ ವೃತ್ತಿಯಲ್ಲಿ ಮಾತಿನ ಶೈಲಿ, ಶಿಸ್ತು, ಸಮಯ ಪ್ರಜ್ಞೆ ಅತ್ಯಂತ ಪ್ರಮುಖವಾಗಿದ್ದು, ಫೋಟೋಗ್ರಾಫರ್ಸ್‌ ಇದನ್ನು ಪಾಲಿಸಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಭಿಪ್ರಾಯಪಟ್ಟರು. ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಸಂಘ, ಫೋಟೋಗ್ರಾಫರ್ಸ್‌ ಯೂತ್ ವೆಲ್ ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ ದೇವನಗರಿ ಪ್ರೊ ಇಮೇಜ್-2026 ಅಂತಾರಾಷ್ಟ್ರೀಯ ಛಾಯಾ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಫೋಟೋಗ್ರಾಫಿ ವೃತ್ತಿಯಲ್ಲಿ ಪ್ರತಿಭಾವಂತ, ಉತ್ತಮ ಛಾಯಾಗ್ರಾಹಕರು ಇದ್ದಾರೆ. ಕಷ್ಟಪಟ್ಟು ದುಡಿದು ಉತ್ತಮ ಜೀವನ ನಡೆಸಿದವರೂ ಇದ್ದಾರೆ. ದುರಾಭ್ಯಾಸಕ್ಕೆ ಒಳಗಾಗಿ ತಮ್ಮ ಜೀವನ ಕಷ್ಟ ಪರಿಸ್ಥಿತಿಗೆ ತಂದವರೂ ಇದ್ದಾರೆ. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ನೀವೂ ಸಹಾ ಬದಲಾಗಿ ಉತ್ತಮ ಫಲಿತಾಂಶವನ್ನು ಗ್ರಾಹಕರಿಗೆ ನೀಡಿರಿ ಎಂದರು.ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಫೋಟೋಗ್ರಾಫರ್ಸ್, ವೀಡಿಯೋಗ್ರಾಫರ್ಸ್ ವೃತ್ತಿಯು ಸಂಕಷ್ಟದಲ್ಲಿದ್ದು, ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಳ್ಳಬೇಕು. ಆ ಮೂಲಕ ವೃತ್ತಿ ಬಾಂಧವರು ತಂತ್ರಜ್ಞಾನಕ್ಕೆ ತಕ್ಕಂತೆ ತಾವು ಬದಲಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಜಿಲ್ಲಾ ಸಂಘದ ಅಧ್ಯಕ್ಷ ವಿಜಯ ಕುಮಾರ ಜಾಧವ್, ದೇವನಗರಿ ಪ್ರೊ.ಇಮೇಜ್ ಸಂಸ್ಥಾಪಕ ಶ್ರೀನಾಥ ಪಿ. ಅಗಡಿ, ಅಸೋ ಸಿಯೇಷನ್ ಅಧ್ಯಕ್ಷ ಎಸ್.ಆರ್.ತಿಪ್ಪೇಸ್ವಾಮಿ, ಎಚ್.ಕೆ.ಸಿ. ರಾಜು, ಸಂಘದ ಸಹ ಕಾರ್ಯದರ್ಶಿ ಎ.ಬಿ. ರುದ್ರಮ್ಮ, ಮಂಗಳ, ಎನ್.ಕೆ.ಕೊಟ್ರೇಶ, ಎನ್.ಅರುಣಕುಮಾರ, ಕಿರಣ್ ಕುಮಾರ, ತಿಲಕ್ ಎಕನಾಥ್ ಬನುಕಂಡಿ, ಮೃತ್ಯುಂಜಯ, ಶಂಭು, ಬಿ.ಎಂ.ಮಿಥುನ್, ಶ್ರೀನಿವಾಸ, ನಿರ್ಮಲ, ಎಸ್.ಮಹಾಂತೇಶ, ಕೆ.ಪಿ.ನಾಗರಾಜ, ಮಲ್ಲಿಕಾರ್ಜುನ, ಪಂಚಾಕ್ಷರಿ ಹಾಗೂ ಪದಾಧಿಕಾರಿಗಳು, ಕುಟುಂಬ ವರ್ಗದವರು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಕ್ರೀಡಾಸಕ್ತಿ ಬೆಳೆಸಬೇಕು: ಚಲುವರಾಯಸ್ವಾಮಿ
ಯುವಕರೇ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಂಕರಲಿಂಗೇಗೌಡ