ಗುಣಮಟ್ಟದ ಬೋಧನೆಯಿಂದ ಸರ್ಕಾರಿ ಶಾಲೆಗಳ ಮಕ್ಕಳ ಮುನ್ನಡೆ: ಕೆ.ಎಸ್. ಆನಂದ್‌

KannadaprabhaNewsNetwork |  
Published : Nov 26, 2024, 12:46 AM IST
25ೆಕೆಡಿಯು1. | Kannada Prabha

ಸಾರಾಂಶ

ಕಡೂರು, ಸರ್ಕಾರಿ ಶಾಲೆಯ ನುರಿತ ಶಿಕ್ಷಕರ ಗುಣಮಟ್ಟದ ಬೋಧನೆಯಿಂದ ಸರ್ಕಾರಿ ಶಾಲೆಗಳ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡೂರು ಕ್ಷೇತ್ರದ ಶ್ರೀ ಹೇಮಗಿರಿ ಶ್ರೀಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಡಶಾಲಾ ಮಟ್ಟದ ಪ್ರತಿಭಾ ಕಾರಂ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ಶಾಲೆಯ ನುರಿತ ಶಿಕ್ಷಕರ ಗುಣಮಟ್ಟದ ಬೋಧನೆಯಿಂದ ಸರ್ಕಾರಿ ಶಾಲೆಗಳ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡೂರು ಕ್ಷೇತ್ರದ ಶ್ರೀ ಹೇಮಗಿರಿ ಶ್ರೀಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಡಶಾಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನದಲ್ಲಿದ್ದಾರೆ. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಸರಕಾರಗಳು ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಇದರಿಂದ ಶಾಲಾ ಮಕ್ಕಳ ಪ್ರತಿಭೆಗೆ ಉತ್ತಮ ಅವಕಾಶ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.

ಅಲ್ಲದೆ ನಾಟಕಗಳು, ಕ್ರೀಡೆ, ಹಾಡುಗಾರಿಕೆ ಸೇರಿದಂತೆ ಎಲ್ಲಾ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಶಿಕ್ಷಕರು ಹೊರ ತರುವ ಕಾರ್ಯ ಮಾಡಬೇಕು ಕಳೆದ 70 ವರ್ಷಗಳ ಹಿಂದೆ ದೇಶದಲ್ಲಿ ಕೇವಲ ಶೇ. 20ರಷ್ಟಿದ್ದ ಸಾಕ್ಷರತೆ ಪ್ರಮಾಣ ಇದೀಗ ಶೇ.75 ರಷ್ಟಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ನಮ್ಮ ತಾಲೂಕಿನ ಸರಕಾರಿ ಮೊರಾರ್ಜಿ ಶಾಲಾ ಮಕ್ಕಳು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ಸರಕಾರಿ ಶಾಲಾ ಮಕ್ಳಳಿಗೆ ಯಾವುದೇ ಕೀಳರಿಮೆ ಬೇಡ ಸಾಧನೆ ಮಾಡಿರುವವರು ಸರಕಾರಿ ಶಾಲೆಯಲ್ಲಿ ಕಲಿತವರು ಎಂಬುದು ಗಮನಾರ್ಹ ಎಂದರು. ನಮ್ಮ ಮಕ್ಕಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಕ್ರೀಡೆಗಳಲ್ಲಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಬಹುಮುಖ್ಯ ಎಂದ ಅವರು ಮಕ್ಕಳಿಗೆ ಶುಭಾಷಯ ಕೋರಿದರು.

7ನೇ ವೇತನ ಆಯೋಗ ಜಾರಿಗೊಳಿದುವ ಕುರಿತು ನಮ್ಮ ಸರಕಾರ ನೌಕರರ ಬೇಡಿಕೆಗಳನ್ನು ಈಡೇರಿಸಿದೆ. ಶಿಕ್ಷಕರ ಒತ್ತಡದ ಕುರಿತು ಸದನದಲ್ಲಿ ಮಾತನಾಡುತ್ತೇನೆ. ಈ ಭಾಗದ ಬಸ್ಸಿನ ಸಮಸ್ಯೆ ಪರಿಸಲಾಗುವುದು ಎಂದು ಭರವಸೆ ನೀಡಿದರು.

ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ಮಾತನಾಡಿ, ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಿದಲ್ಲಿ ಆ ಪ್ರತಿಭೆ ಬೆಳಗಲು ಸಾಧ್ಯ ಶಿಕ್ಷಕರು ಮಕ್ಕಳ ಪ್ರತಿಭೆ ಗೌರವಿಸಿ ಅಭಿನಂದಿಸಬೇಕು ಎಂದರು.

ಹೇಮಗಿರಿ ಕ್ಷೇತ್ರದ ದೇವಾಲಯದ ವ್ಯವಸ್ಥಾಪಕ ಕಪಿನೇಗೌಡರು ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಮಕ್ಕಳಲ್ಲಿರುವ ಶಕ್ತಿಯನ್ನು ಶಿಕ್ಷಕರು ಗುರುತಿಸಬೇಕು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಕೆ ಎಂ.ಹರೀಶ್ ಮಾತನಾಡಿ, ಸರಕಾರಗಳು ಎಲ್ಲ ಯೋಜನೆಗಳನ್ನು ಶಿಕ್ಷಕರ ಮೂಲಕ ಜಾರಿ ಮಾಡುತ್ತಿರುವ ಕಾರಣ ಶಿಕ್ಷಕರಿಗೆ ಹೆಚ್ಚುತ್ತಿರುವ ಒತ್ತಡದಿಂದ ಬೋಧನೆ ಮಾಡಲು ಕಷ್ಟವಾಗುತ್ತಿದೆ. ಶಾಸಕರು ಸರಕಾರದ ಗಮನ ಸೆಳೆದು ಒತ್ತಡ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶೀ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ರವಿ,ಮಾಜಿ ತಾ.ಪಂ. ಅಧ್ಯಕ್ಷ ಸೋಮಶೇಖರ್, ಕೆರೆಸಂತೆ ಗ್ರಾ.ಪಂ.ಅಧ್ಕ್ಷಕ್ಷೆ ವಂದನಾಬಾಯಿ ಶ್ರೀನಿವಾಸ್ ನಾಯ್ಕ, ಮುಖಂಡರಾದ ದಿನೇಶ್, ದೇವರಾಜ್,ಪ್ರಕಾಶ್, ಎಂ.ಆರ್.ಪ್ರಕಾಶ್,ರಾಧ, ಲಿಂಗರಾಜ್‌,ರಾಜನಾಯ್ಕ,ರಾಜು, ನಾಗರಾಜ್,ಸೇರಿದಂತೆ ವಿವಿಧ ಶಾಲೆಯ ಮಕ್ಕಳು,ಶಿಕ್ಷಕರು ಪೋಷಕರು, ವಿವಿಧ ಗ್ರಾಮಗಳ ಜನರು ಹಾಜರಿದ್ದರು.

25ಕೆಕೆಡಿಯು1. ಶಾಸಕ ಕೆ.ಎಸ್.ಆನಂದ್ ರವರು ಕಡೂರು ಕ್ಷೇತ್ರದ ಹೇಮಗಿರಿ ಶ್ರೀಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಡಶಾಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ