ನೆಲಕ್ಕುರುಳಿದ ವಿದ್ಯುತ್ ಕಂಬ ಶೀಘ್ರ ದುರಸ್ತಿ

KannadaprabhaNewsNetwork |  
Published : Jun 28, 2024, 12:46 AM IST

ಸಾರಾಂಶ

ತಾಲೂಕಿನ ಮುದ್ನಾಳ, ವಡಗೇರಾ, ಮಳ್ಳಳ್ಳಿ, ಕ್ಯಾತನಾಳ, ಕಾಡಂಗೇರಾ ಹಾಗೂ ಶಹಾಪುರ ತಾಲೂಕಿನ ಚಟ್ನಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ, ಭಾರೀ ಮಳೆ ಸುರಿದು ಜೋರು ಗಾಳಿ ಬೀಸಿದ ಪರಿಣಾಮ ಗಿಡಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ನೆಲಕ್ಕುರುಳಿದ್ದವು. ತಕ್ಷಣ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಸರಿಪಡಿಸುವ ಮೂಲಕ ರೈತರಿಗೆ ನೆರವಾಗಿರುವುದಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾಹಿತಿ ಸಂತಸ ವ್ಯಕ್ತಪಡಿಸಿದ್ದಾರೆ.

ಜೆಸ್ಕಾಂ ಅಧಿಕಾರಿಗಳಿಂದ ತ್ವರಿತ ಕಾಮಗಾರಿ | ಸಂತಸ ವ್ಯಕ್ತಪಡಿಸಿದ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ಯಾದಗಿರಿ

ತಾಲೂಕಿನ ಮುದ್ನಾಳ, ವಡಗೇರಾ, ಮಳ್ಳಳ್ಳಿ, ಕ್ಯಾತನಾಳ, ಕಾಡಂಗೇರಾ ಹಾಗೂ ಶಹಾಪುರ ತಾಲೂಕಿನ ಚಟ್ನಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ, ಭಾರೀ ಮಳೆ ಸುರಿದು ಜೋರು ಗಾಳಿ ಬೀಸಿದ ಪರಿಣಾಮ ಗಿಡಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ನೆಲಕ್ಕುರುಳಿದ್ದವು. ತಕ್ಷಣ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಸರಿಪಡಿಸುವ ಮೂಲಕ ರೈತರಿಗೆ ನೆರವಾಗಿರುವುದಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾಹಿತಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ರೈತರ ಜಮೀನು ಸ್ಥಳಕ್ಕೆ ಭೇಟಿ ನೀಡಿ, ಮಳೆಯಿಂದ ನೆಲಕ್ಕುರುಳಿದ ವಿದ್ಯುತ್ ಪರಿವರ್ತಕ, ಕಂಬಗಳನ್ನು ಹೊಸದಾಗಿ ಅಳವಡಿಸಿ ಸರಿಯಾದ ಸಮಯಕ್ಕೆ ಬಂದು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ಯಾದಗಿರಿ ಹಾಗೂ ಶಹಾಪುರ ತಾಲೂಕಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೆಲವು ರೈತರು ಹೆಸರು, ತೊಗರಿ ಮತ್ತು ಹತ್ತಿ ಬಿತ್ತಿದ್ದಾರೆ. ಆದರೆ ಅವರಿಗೆ ಮಳೆ ಬರುತ್ತದೆ ಎಂಬ ಖಾತರಿ ಇರಲಿಲ್ಲ. ಇದೀಗ ವಿದ್ಯುತ್ ಪರಿವರ್ತಕ ಅಳವಡಿಸಿರುವುದರಿಂದ ಸಂಕಷ್ಟ ದೂರವಾದಂತಾಗಿದೆ ಎಂದು ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ಸ್ಥಳದಲ್ಲಿ ಸಾಬಣ್ಣ, ಯಲ್ಲರಡ್ಡಿ, ಭೀಮರಾಯ, ಹಣಮಂತ, ರಾಜು, ಸಂತೋಷ, ರವಿ, ಶಿವು, ಬಾಗಪ್ಪ, ದೇವಪ್ಪ, ಮಲ್ಲಪ್ಪ ಹಾಗೂ ಇತರರಿದ್ದರು.

27ವೈಡಿಆರ್3

ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ದುರಸ್ತಿ ಕಾರ್ಯ ಕೈಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ