ರಸಪ್ರಶ್ನೆ ಸ್ಪರ್ಧೆಯಿಂದ ಕೌಶಲ್ಯ ವೃದ್ಧಿ: ಅಶೋಕ ವನ್ನಾಲ

KannadaprabhaNewsNetwork |  
Published : Feb 25, 2026, 02:30 AM IST
ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ನಾಯಕತ್ವ ಗುಣ, ಗುಂಪಿನೊಂದಿಗೆ ಹೊಂದಾಣಿಕೆ ಸ್ವಕಲಿಕಾ ಸಾಮರ್ಥ್ಯವು ಅಭಿವೃದ್ಧಿಪಡಿಸುತ್ತದೆ. ಕೌಶಲ ವೃದ್ಧಿಸುವುದು ರಸಪ್ರಶ್ನೆ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ.

ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯಜ್ಞಾನದ ಜತೆಗೆ ಇತರೆ ಸಾಮಾನ್ಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರೋಗ್ಯ ಸದೃಢವಾಗುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿಯಾಗುತ್ತದೆ ಎಂದು ಮುಖಂಡ ಅಶೋಕ ವನ್ನಾಲ ತಿಳಿಸಿದರು.

ಪಟ್ಟಣದ ಹಿರೇಬಜಾರ ಓಣಿಯ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ೨೦೨೫- ೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ನಾಯಕತ್ವ ಗುಣ, ಗುಂಪಿನೊಂದಿಗೆ ಹೊಂದಾಣಿಕೆ ಸ್ವಕಲಿಕಾ ಸಾಮರ್ಥ್ಯವು ಅಭಿವೃದ್ಧಿಪಡಿಸುತ್ತದೆ. ಕೌಶಲ ವೃದ್ಧಿಸುವುದು ರಸಪ್ರಶ್ನೆ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದರು.ಶಿಕ್ಷಕ ಎಸ್.ಎಸ್. ಡೊಳ್ಳಿನ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳನ್ನು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು.

ಸ್ಪರ್ಧೆಯಲ್ಲಿ ಸೋಲು ಗೆಲುವು- ಸಾಮಾನ್ಯ. ಅವುಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡಾಗ ಇನ್ನಷ್ಟು ಜಾಣರಾಗುತ್ತೀರಿ ಎಂದರು.ಜಿಲ್ಲೆಯ ಬೇರೆ ಬೇರೆ ಶಾಲೆಯಿಂದ ೩೩ ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಗಜೇಂದ್ರಗಡ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವೈಷ್ಣವಿ ಕುಲಕರ್ಣಿ, ಪದ್ಮಾವತಿ ಶಾಬಾದಿ, ದ್ವಿತೀಯ ಇಟಗಿಯ ಸರ್ಕಾರಿ ಆದರ್ಶ ಶಾಲೆಯ ವೀರೇಶ ಜೂಚನಿ, ರೋಹಾನ್ ಮುಜಾವರ್, ತೃತೀಯ ಗಜೇಂದ್ರಗಡದ ವಿ.ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸೌಮ್ಯ ಸಾರಂಗಮಠ, ಸ್ಫೂರ್ತಿ ಇಂಜನಿ ನಗದು ಬಹುಮಾನ ಪಡೆದರು.

ಈ ವೇಳೆ ಲಕ್ಷ್ಮಣ ಗಡಗಿ, ಶ್ರೀಕಂಠ ಕವಡಿಮಟ್ಟಿ, ಪ್ರಶಾಂತ ನೆಲ್ಲೂರ, ಕಾಲೇಶ ವನ್ನಾಲ, ಗೀತಾ ಬನಿಕಲ್, ಮೋಹನ ತಟ್ಟಿ, ಮಾರುತಿ ಬುಟ್ಟಾ, ಗಿರೀಶ ಮಾದಗುಂಡಿ, ಶಿವಾನಂದ ಕವಡಿಮಟ್ಟಿ, ಈರಣ್ಣ ಮಾಳಗಿ, ಬಸವರಾಜ ಅಣ್ಣಿಗೇರಿ, ಬಸವರಾಜ ಕೆಂಬಾವಿ, ಅರವಿಂದ ಕವಡಿಮಟ್ಟಿ, ದೇವಣ್ಣ ಬನಿಕಲ್, ಮುದಕಪ್ಪ ಬುಟ್ಟಾ, ಚಂದಾಲಿಂಗಪ್ಪ ಬೀಳಗಿ, ಬಸವರಾಜ ಮಾಳಗಿ, ಮಂಜುನಾಥ ಸಂಕನೂರ, ವಿರೂಪಾಕ್ಷ ಅಳವಂಡಿ, ಕಳಕೇಶ ಕುದರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವಾರದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಹಾಲು ಉತ್ಪಾದಕ ಸಂಘಗಳು ರೈತರ ಬೆನ್ನೆಲುಬು