ರಡ್ಡಿ-ರೆಡ್ಡಿ ಧೈರ್ಯ, ನಂಬಿಕೆಯ ಪ್ರತೀಕ

KannadaprabhaNewsNetwork |  
Published : May 23, 2025, 12:23 AM IST
22ಕೆಪಿಎಲ್25 ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆ  | Kannada Prabha

ಸಾರಾಂಶ

ಗೃಹಿಣಿಯರಿಗೆ ಸಂಸಾರದ ಜವಾಬ್ದಾರಿ ತಿಳಿಸುವ ಆದಮ್ಯ ಶಕ್ತಿ ಹೇಮರಡ್ಡಿ ಮಲ್ಲಮ್ಮನಾಗಿದ್ದಾರೆ. ಅವರ ಅಧ್ಯಾತ್ಮ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಭಾರತೀಯ ಕುಟುಂಬ ವ್ಯವಸ್ಥೆ ಸುಂದರವಾಗಿದ್ದು ಈ ವ್ಯವಸ್ಥೆ ಉತ್ತಮವಾಗಿರಲು ಮಲ್ಲಮ್ಮನ ಬದುಕಿನ ಕೌಶಲ್ಯ ರೂಢಿಸಿಕೊಳ್ಳಬೇಕು.

ಕೊಪ್ಪಳ:

ರಡ್ಡಿ ಸಮುದಾಯದ ರೆಡ್ಡಿ, ರಡ್ಡಿ ಎನ್ನುವುದು ಸಮಾಜದಲ್ಲಿ ನಂಬಿಕೆ, ವಿಶ್ವಾಸ, ಧೈರ್ಯದ ಪ್ರತೀಕವಾಗಿದ್ದು, ಈ ಶಕ್ತಿಯನ್ನು ಹೇಮರಡ್ಡಿ ಮಲ್ಲಮ್ಮ ಸಮಾಜಕ್ಕೆ ನೀಡಿದ್ದಾಳೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಲ್ಲಮ್ಮನ ಆದರ್ಶಗಳು ಶ್ರೇಷ್ಠತೆಯುಳ್ಳದ್ದಾಗಿವೆ ಎಂದು ಎರೆಹೊಸಳ್ಳಿಯ ಹೇಮ-ವೇಮ ರಡ್ಡಿ ಪೀಠದ ಶ್ರೀವೇಮನಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಗುರುವಾರ ಪ್ರತಿಷ್ಠಾಪನೆಗೊಂಡ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿಯ ಬೆಳ್ಳಿ ಮೂರ್ತಿಯ ಲೋಕಾರ್ಪಣೆ ಹಾಗೂ ಕೊಪ್ಪಳ ತಾಲೂಕು ಮಟ್ಟದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೃಹಿಣಿಯರಿಗೆ ಸಂಸಾರದ ಜವಾಬ್ದಾರಿ ತಿಳಿಸುವ ಆದಮ್ಯ ಶಕ್ತಿ ಮಲ್ಲಮ್ಮನಾಗಿದ್ದಾರೆ. ಅವರ ಅಧ್ಯಾತ್ಮ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದ ಶ್ರೀಗಳು, ಭಾರತೀಯ ಕುಟುಂಬ ವ್ಯವಸ್ಥೆ ಸುಂದರವಾಗಿದ್ದು ಈ ವ್ಯವಸ್ಥೆ ಉತ್ತಮವಾಗಿರಲು ಮಲ್ಲಮ್ಮನ ಬದುಕಿನ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದರು.

ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ರಡ್ಡಿ ಸಮಾಜ ಕೊಡುಗೈ ದಾನಿಯಾಗಿದೆ. ಸಮಾಜದ ಹೆಚ್ಚು ಕುಟುಂಬಗಳು ಕೃಷಿ ಅವಲಂಬಿಸಿದ್ದು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಜತೆಗೆ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕ. ಸಮಾಜ ಶಿಕ್ಷಣ, ಸಂಘಟನೆ, ಕೃಷಿ, ಸಾಮಾಜಿಕ ಬದಲಾವಣೆಗೆ ಆದ್ಯತೆ ಕೊಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಉತ್ತಮ ಭವಿಷ್ಯ ನಿರ್ಮಸಬೇಕೆಂದು ಪಾಲಕರಿಗೆ ಕರೆ ನೀಡಿದರು.

ರಾಜ್ಯ ರಡ್ಡಿ ಸಮಾಜದ ಅಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿ, ಸಮಾಜಕ್ಕೆ ಚೈತನ್ಯ ಕಟ್ಟುವ ಕೆಲಸ ಸರ್ವರು ಮಾಡಬೇಕು. ಏನನ್ನು ಕಲಿಯದ ಮಲ್ಲಮ್ಮ ಸಾಧಕಿಯಾಗಿದ್ದಾಳೆ, ಶಕ್ತಿ ರೂಪಿಣಿಯಾದ ಅವರನ್ನು ಶ್ರದ್ಧೆಯಿಂದ ಸ್ಮರಿಸಬೇಕು ಎಂದರು.

ಹೂವಿನಹಡಗಲಿಯ ಹಿರೇಶಾಂತವೀರ ಸ್ವಾಮೀಜಿ, ಅಳವಂಡಿಯ ಶ್ರೀಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ನಿವೃತ್ತ ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಮುಂಡರಗಿ ತಹಸೀಲ್ದಾರ್‌ ಎರ‍್ರಿಸ್ವಾಮಿ ಪಿ.ಎಸ್, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಜಗದೀಶಪ್ಪ ಸಾಹುಕಾರ, ಸಿ.ವಿ. ಚಂದ್ರಶೇಖರ, ಎಸ್.ಬಿ. ನಾಗರಳ್ಳಿ, ಮಿಥುನಗೌಡ ಪಾಟೀಲ, ಈಶ್ವರಪ್ಪ ಹಂಚಿನಾಳ, ಶೋಭಾ ಮೇಟಿ, ಬಸವರಡ್ಡೆಪ್ಪ ಹಳ್ಳಿಕೇರಿ, ಪ್ರದೀಪಗೌಡ, ಮಹಾಂತೇಶ ಪಾಟೀಲ, ಯಂಕನಗೌಡ್ರ, ಈಶಪ್ಪ, ಹನುಮರಡ್ಡಿ, ಎಚ್.ಎಲ್. ಹಿರೇಗೌಡ, ಆರ್.ಪಿ. ರಡ್ಡೇರ, ಸಂಜಯ ಪಾಟೀಲ, ಕೆ. ಅಮರೇಶ ಪಾಟೀಲ, ಕೃಷ್ಣಾರಡ್ಡಿ, ವಿರೂಪಾಕ್ಷಪ್ಪ, ಸುನಂದಾ, ಸಂಧ್ಯಾ, ಬಸವರಾಜ, ವೆಂಕರಡ್ಡಿ, ಕಾಶಿನಾಥ, ಶಂಕರಗೌಡ ಹಿರೇಗೌಡ, ರಮೇಶ ಮೂಲಿಮನಿ, ಸುರೇಶ, ಕಮಲಪ್ಪ, ಸಂಗಮೇಶ ಕೊಪ್ಪಳ, ಪಿಎಸ್‌ಐ ಪ್ರಕಾಶರಡ್ಡಿ, ಹಾಲಪ್ಪ, ಶೀಲಾ, ವೈದ್ಯ ಪ್ರವೀಣಕುಮಾರ, ಚನ್ನಪ್ಪ, ಬಸವರಡ್ಡಿ, ದೇವಪ್ಪ, ಗವಿಸಿದ್ದಪ್ಪ ಕರಡಿ, ರುದ್ರಗೌಡ, ಹನುಮರಡ್ಡಿ, ಸುಭಾಸರಡ್ಡಿ, ಹೇಮರಡ್ಡಿ ಸೇರಿದಂತೆ ಇತರರು ಇದ್ದರು.

PREV