ಮುಡಿಪು ಭಾರತೀ ಶಾಲೆ ಹಳೆ ವಿದ್ಯಾರ್ಥಿ ಸಂಘ ನೂತನ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ

KannadaprabhaNewsNetwork |  
Published : Aug 12, 2025, 12:30 AM IST
32 | Kannada Prabha

ಸಾರಾಂಶ

ಭಾನುವಾರ ಮುಡಿಪು ಭಾರತೀ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ‘ಮಹಾಭಾರತಿ’ಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಉಳ್ಳಾಲ: ಮುಡಿಪು ಶ್ರೀ ಭಾರತೀ ಶಾಲೆಯ 2025-26ನೇ ಅವಧಿಗೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಉದ್ಯಮಿ ರಾಧಾಕೃಷ್ಣ ರೈ ಉಮಿಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಭಾನುವಾರ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ‘ಮಹಾಭಾರತಿ’ಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಗೌರವಾಧ್ಯಕ್ಷರಾಗಿ ಜಗದೀಶ್ ಅಡಪ ಕಡ್ವಾಯಿ, ಸುಬ್ರಹ್ಮಣ್ಯ ಭಟ್ ಕೆ., ಕಾರ್ಯದರ್ಶಿಯಾಗಿ ನರಸಿಂಹ ಭಟ್ ಪಾದಲ್ಪಾಡಿ, ಖಜಾಂಚಿಯಾಗಿ ಅಡ್ವಕೇಟ್ ಮೊಹಮ್ಮದ್ ಅಸ್ಗರ್ ಆಯ್ಕೆಯಾದರು.ಸಂಘದ ಗೌರವ ಸಲಹೆಗಾರರನ್ನಾಗಿ ಶಂಕರ ನಾರಾಯಣ ಭಟ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಉಪನ್ಯಾಸಕ ಉಮೇಶ್ ಕೆ. ಆರ್., ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ, ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಕೆ., ರಂಗನಾಥ ಕೊಂಡೆ, ಮುಡಿಪು ಸಂತ ಜೋಸೆಫರ ವಾಝ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಡಿಸೋಜ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುರೇಖಾ ಯಾಳವಾರ್, ನಾರಾಯಣಯ್ಯ, ಜತೆ ಕಾರ್ಯದರ್ಶಿಯಾಗಿ ಚಂದ್ರಹಾಸ ಕಣಂತೂರು ಅವರನ್ನು ಆರಿಸಲಾಯಿತು.ಸಂಘಟನಾ ಕಾರ್ಯದರ್ಶಿಗಳಾಗಿ ಅನ್ನಪೂರ್ಣೇಶ್ವರಿ, ಪೂವಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರೇಖಾ ಸಿ. ಎಚ್. ಹಾಗೂ ಸುಜಯಾ ಆರ್. ಭಟ್, ಸಮೀರ್, ಕ್ರೀಡಾ ಕಾರ್ಯದರ್ಶಿಗಳಾಗಿ ತಸ್ಲಿಮ್ ಆರೀಫ್, ಅಬ್ದುಲ್ ಮಜೀದ್, ಮಾಧ್ಯಮ ಕಾರ್ಯದರ್ಶಿಗಳಾಗಿ ಉಮೇಶ್ ಕೆ. ಆರ್., ಪ್ರವಾಸ ಕಾರ್ಯದರ್ಶಿಗಳಾಗಿ ರಶ್ಮಿ ಅಮ್ಮೆಂಬಳ ಹಾಗೂ ಉಮೇಶ್ ಕೆ.ಆರ್. ಆಯ್ಕೆಯಾದರು.ನಾರಾಯಣ ಭಟ್ ಪಿ., ರಾಮಚಂದ್ರ ಭಟ್, ಶಂಕರ ಭಟ್, ನಾರಾಯಣ ಭಟ್. ಕೆ. ಅವರನ್ನು ಗೌರವ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ಬುಬಕ್ಕರ್ ಹೂಹಾಕುವಕಲ್ಲು, ವಿಜಯ ಕುಮಾರಿ, ಉಮಾವತಿ, ಜಯಶ್ರೀ ಪಿ. ಲಾಡ, ಜಾಹ್ನವಿ, ಮನು ವೆಂಕಟೇಶ್, ಶರಣ ಗೋವಿಂದ, ಪ್ರಭಾಕರ, ಗೋಪಾಲ, ಬಾಲಚಂದ್ರ, ಹಮೀದ್ ತೋಟಾಲ್, ಪಂಕಜ, ವೀಣಾ ತೆಕ್ಕುಂಜ, ಪ್ರಸನ್ನ ಮೊಂತೆರೋ ಕುರ್ನಾಡು, ವಿಜಯ ಡಿಸೋಜ, ತೇಜಸ್ವಿ ಗೋವಿಂದ, ವಿಜಯಲಕ್ಷ್ಮಿ ಪಿ., ಅಮಿತ ಆಯ್ಕೆಯಾದರು.ಮಹಾಸಭೆ ಅಂಗವಾಗಿ ಆಟಿ ತಿಂಗಳ ವಿಶೇಷತೆ ಬಗ್ಗೆ ಡಾ.ರಶ್ಮಿ ಅಮ್ಮೆಂಬಳ ಮಾಹಿತಿ ನೀಡಿದರು. ಚಂದ್ರಹಾಸ ಕಣಂತೂರು ರಸಪ್ರಶ್ನೆ ನಡೆಸಿಕೊಟ್ಟರು. ಪ್ರವೀಣ್ ಅಮ್ಮೆಂಬಳ ಹಾಗೂ ಡಾ.ರಶ್ಮಿ ಅಮ್ಮೆಂಬಳ ಆಟಿ ಕುರಿತು ತುಳು ಕವನ ವಾಚಿಸಿದರು. ಹಳೆ ವಿದ್ಯಾರ್ಥಿಗಳೇ ಸಿದ್ಧಪಡಿಸಿ ತಿಂದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಮಧ್ಯಾಹ್ನದ ಸಹಭೋಜನದಲ್ಲಿ ಬಡಿಸಲಾಯಿತು.ಹಿರಿಯ ಶಿಕ್ಷಕಿ ವಿಜಯಲಕ್ಷ್ಮೀ ವರದಿ ವಾಚಿಸಿದರು. ನಿರ್ಗಮನ ಖಜಾಂಚಿ ಮನು ವೆಂಕಟೇಶ ಲೆಕ್ಕಪತ್ರ ಮಂಡಿಸಿದರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ನರಸಿಂಹ ಭಟ್ ವಂದಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್