ಹಾನಗಲ್ಲ ಪುರಸಭೆ ಅಧ್ಯಕ್ಷರಾಗಿ ರಾಧಿಕಾ ದೇಶಪಾಂಡೆ ಅವಿರೋಧ ಆಯ್ಕೆ

KannadaprabhaNewsNetwork |  
Published : Jun 10, 2025, 02:58 AM IST
ಹಾನಗಲ್ಲ ಪುರಸಭೆ ನೂತನ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಅವರನ್ನು ಗಣ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದ ತಾಲೂಕು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಸ್. ರೇಣುಕಾ ರಾಧಿಕಾ ದೇಶಪಾಂಡೆ ಅವರ ಆಯ್ಕೆಯನ್ನು ಘೋಷಿಸಿದರು.

ಹಾನಗಲ್ಲ: ಪುರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯಕ್ಕೆ ಅಧ್ಯಕ್ಷರಾಗುವ ಅವಕಾಶ ದೊರೆತಿದ್ದು, ಕಾಂಗ್ರೆಸ್‌ನ ರಾಧಿಕಾ ದೇಶಪಾಂಡೆ ಈ ಅವಧಿಯ 6ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಸೋಮವಾರ ಪಟ್ಟಣದ ಪುರಸಭೆಯಲ್ಲಿ ಪರಶುರಾಮ ಖಂಡೂನವರ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪೂರ್ವಯೋಜಿತ ಒಪ್ಪಂದದಂತೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರಾಧಿಕಾ ದೇಶಪಾಂಡೆ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದ ತಾಲೂಕು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಸ್. ರೇಣುಕಾ ರಾಧಿಕಾ ದೇಶಪಾಂಡೆ ಅವರ ಆಯ್ಕೆಯನ್ನು ಘೋಷಿಸಿದರು.ವೈ.ಎಫ್. ಕಿತ್ತೂರ, ಎಸ್.ಕೆ. ಪೀರಜಾದೆ, ನಾಗಪ್ಪ ಸವದತ್ತಿ, ಮತೀನ ಶಿರಬಡಗಿ, ಘನಶ್ಯಾಮ ದೇಶಪಾಂಡೆ, ಕೆ.ಎಲ್. ದೇಶಪಾಂಡೆ, ಶಂಕರ ದೇಶಪಾಂಡೆ, ಪಿ.ಕೆ. ಪಾರಗಾಂವಕರ, ಭರಮಣ್ಣ ಶಿವೂರ, ಮಂಜಣ್ಣ ನೀಲಗುಂದ, ಚಂದ್ರಪ್ಪ ಜಾಲಗಾರ, ರಾಜಕುಮಾರ ಶಿರಪಂಥಿ, ವೀರೇಶ ಬೈಲವಾಳ, ತಮ್ಮಣ್ಣ ಆರೆಗೊಪ್ಪ, ಪ್ರಶಾಂತ ಮುಚ್ಚಂಡಿ, ಪುರಸಭೆ ಸದಸ್ಯರಾದ ವಿಕಾಸ ನಿಂಗೋಜಿ, ಮಹೇಶ ಪವಾಡಿ, ರವಿ ಹುನುಮನಕೊಪ್ಪ, ಮಮತಾ ಆರೆಗೊಪ್ಪ, ಗಂಗೂಬಾಯಿ ನಿಂಗೋಜಿ, ಸವಿತಾ ಚಿಕ್ಕಣ್ಣನವರ, ಶಂಶಿಯಾಬಾನು ಬಾಳೂರ, ನಾಸಿರಾ ಬಡಿಗೇರ, ವಿರುಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಘನಿ ಪಾಳಾ, ವಿನಾಯಕ ಬಂಕನಾಳ, ಮೇಕಾಜಿ ಕಲಾಲ, ಖುರ್ಷಿದ ಹುಲ್ಲತ್ತಿ ಮೊದಲಾದವರು ನೂತನ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಅವರನ್ನು ಅಭಿನಂದಿಸಿದರು.ಚುನಾವಣಾ ಪ್ರಕ್ರಿಯೆಗೂ ಮೊದಲು ಶಾಸಕ ಶ್ರೀನಿವಾಸ ಮಾನೆ ಅವರು ಪುರಸಭೆ ಸದಸ್ಯರು ಹಾಗೂ ಪಕ್ಷದ ಹಿರಿಯ ಮುಖಂಡರ ಸಭೆ ನಡೆಸಿ ರಾಧಿಕಾ ದೇಶಪಾಂಡೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಾಗೂ ಈ ಅವಧಿಯಲ್ಲಿ ಎಲ್ಲ ಸದಸ್ಯರು ಒಟ್ಟಾಗಿ ಪುರಸಭೆಯ ಅಭಿವೃದ್ಧಿಗೆ ಗಮನ ನೀಡುವ ಸೂಚನೆ ನೀಡಿದ್ದರು.ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುವೆ: ರಾಧಿಕಾ

ಹಾನಗಲ್ಲ: ಪುರಸಭೆ ಅಧ್ಯಕ್ಷ ಸ್ಥಾನ ಕಲ್ಪಿಸಿದ ಶಾಸಕ ಶ್ರೀನಿವಾಸ ಮಾನೆ ಅಭಿನಂದನಾರ್ಹರು. ನನ್ನ ಅವಧಿಯಲ್ಲಿ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಪುರಸಭೆ ನೂತನ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ತಿಳಿಸಿದರು.

ಸೋಮವಾರ ಪುರಸಭೆಯಲ್ಲಿ ನಡೆದ ಅಧ್ಯಕ್ಷರ ಆಯ್ಕೆ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಪುರಸಭೆ ಆರ್ಥಿಕವಾಗಿ ಸಬಲವಾಗಿಲ್ಲ. ₹50 ಲಕ್ಷ ಕರ ಬಾಕಿ ಇದೆ. ಕರ ವಸೂಲಿಗೂ ಅದ್ಯತೆ ನೀಡಲಾಗುವುದು. ಸರ್ಕಾರದಿಂದಲೂ ಅನುದಾನವನ್ನು ತಂದು ಪಟ್ಟಣದ ಅಭಿವೃದ್ಧಿ ಮಾಡುವುದು ನನ್ನ ಕನಸು ಎಂದರು.

ಪುರಸಭೆ ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಮಮತಾ ಆರೆಗೊಪ್ಪ ಹಾಗೂ ಘನಶ್ಯಾಮ ದೇಶಪಾಂಡೆ, ರವಿ ದೇಶಪಾಂಡೆ, ಘನಿ ಪಾಳಾ, ಸಂಜೀವ ಬೇದ್ರೆ, ಸುನಿತಾ ಚಿಕ್ಕಣ್ಣನವರ ಮೊದಲಾದವರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ