ದೇವಿಯನ್ನು ಪ್ರೀತಿಯಿಂದ ಆರಾಧಿಸಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Oct 23, 2026, 02:30 AM IST
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಗುರುಭಿಕ್ಷಾಸೇವೆ ಸಮರ್ಪಿಸಿ‌ ಆಶೀರ್ವಾದ ಪಡೆದರು.  | Kannada Prabha

ಸಾರಾಂಶ

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ನವರಾತ್ರ ನಮಸ್ಯಾ ಮಹಾ ಸಮಾರೋಪದ ಧರ್ಮ ಸಭೆ

ಬೆಂಗಳೂರು: ದೇವಿಯನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದಾಗ ಆಚರಣೆಗೆ ಅರ್ಥ ಬರುತ್ತದೆ. ಭೀತಿಯಿಂದ ಮಾಡಿದಾಗ ಯಾವುದೇ ಅರ್ಥವಿಲ್ಲ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ನವರಾತ್ರ ನಮಸ್ಯಾ ಮಹಾ ಸಮಾರೋಪದ ಧರ್ಮ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವಿಯನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ ಕಾಲ ಈ ನವರಾತ್ರಿ ಎಂದರು.

ನವರಾತ್ರಿಯಲ್ಲಿ ಉಪವಾಸದ ಆಚರಣೆಯು ವಿಶೇಷವಾಗಿದೆ. ಸರಿಯಾದ ಉಪವಾಸದ ಆಚರಣೆಯಿಂದ ಆರೋಗ್ಯ ವೃದ್ಧಿಯನ್ನು ಕಾಣಬಹುದಾಗಿದ್ದು, ಇದು ನವರಾತ್ರಿ ಆಚರಣೆಯ ಬಾಹ್ಯ ಫಲವಾಗಿದೆ. ನವರಾತ್ರಿಯಲ್ಲಿರುವ ನವವನ್ನು ಹೊಸತನದ ಕಾಲ ಎಂಬುದಾಗಿಯೂ ಪರಿಗಣಿಸಬಹುದಾಗಿದ್ದು, ನಮ್ಮ ಜೀವನದ ತಪ್ಪುಗಳನ್ನು ತಿದ್ದಿಕೊಳ್ಳಲು ಈ ನವರಾತ್ರಿಯ ವ್ರತವನ್ನು ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ದೇವಿ ಪಾರಾಯಣ ಎಂಬುದು ಕೇವಲ ಕಾಟಾಚಾರದ ಕ್ರಮವಾಗಬಾರದು. ಸಪ್ತಶತೀ, ಲಲಿತೋಪಾಖ್ಯಾನಗಳಲ್ಲಿ ದೇವಿಯ ಅವತಾರ ವಿಶೇಷತೆಗಳಿದ್ದು, ಅದನ್ನು ಓದಿದಾಗ ದೇವಿಯನ್ನು ನಮ್ಮ ಮನಸ್ಸಿನೊಳಗೆ ದೇವಿಯ ಲೀಲೆಯನ್ನು ತುಂಬಿಕೊಳ್ಳಬಹುದು ಎಂದರು.

ಸನ್ಮಾನ: ಸಂಸದ ತೇಜಸ್ವಿ ಸೂರ್ಯ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಶ್ರೀಗಳ ಆಶೀರ್ವಾದ ಪಡೆದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಗುರುಭಿಕ್ಷಾಸೇವೆ ಸಮರ್ಪಿಸಿ‌ ಆಶೀರ್ವಾದ ಪಡೆದರು. ಹಿರಿಯ ನ್ಯಾಯವಾದಿ ರಾಜಶೇಖರ ಹಿಲ್ಯಾರ್, ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ಶ್ರೀಗಳ ಆಶೀರ್ವಾದ ಪಡೆದರು.

ಪ್ರಧಾನ ಸಂಚಾಲಕ ರಮೇಶ ಹೆಗಡೆ ಕೊರಮಂಗಲ ಸಭಾ ಪೂಜೆ ನೆರವೇರಿಸಿದರು. ಸಂಚಾಲಕ ದೀಪಕ ಹೆಗಡೆ ಗೋಳಿಕೈ ಕಾರ್ಯಕ್ರಮದ ಅವಲೋಕನ ಮಾಡಿದರು. ಶ್ರೀಮಠದ ಪ್ರಶಾನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ‌ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ, ಶ್ರೀವತ್ಸ ಮೂಡುಗೋಡು, ಗಾಯತ್ರೀ ಭಾಗ್ವತ್, ಶಿವರಾಜ ಪೆರ್ಮುಖ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧರ್ಮದ ನಾಶ ಧರ್ಮದ ವಿಜಯವೇ ವಿಜಯದಶಮಿ: ರಂಭಾಪುರಿ ಜಗದ್ಗುರು
ಇಳಕಲ್ಲದಲ್ಲಿ ಆರೆಸ್ಸೆಸ್‌ ಆಕರ್ಷಕ ಪಥಸಂಚಲನ