- ಕೆ.ಜಿ.ರಮೇಶ್, ರುದ್ರಮ್ಮ ರಾಜೀನಾಮೆ ಹಿನ್ನೆಲೆ ಶುಕ್ರವಾರ ಚುನಾವಣೆ
ಹೊನ್ನಾಳಿ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಹೊನ್ನಾಳಿಯ ರಾಘವೇಂದ್ರ ಹಾಗೂ ಉಪಾಧ್ಯಕ್ಷರಾಗಿ ಘಂಟಾಪುರದ ಎಸ್. ಕುಬೇರನಾಯ್ಕ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷರಾಗಿದ್ದ ಕೆ.ಜಿ. ರಮೇಶ್ ಹಾಗೂ ಉಪಾಧ್ಯಕ್ಷರಾಗಿದ್ದ ರುದ್ರಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ರಾಘವೇಂದ್ರ ಅಧ್ಯಕ್ಷ ಸ್ಥಾನಕ್ಕೆ, ಕುಬೇರನಾಯ್ಕ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಇತರೆ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿರದ ಕಾರಣ ಚುನಾವಣಾಧಿಕಾರಿ ಹಾಗೂ ಪಿಎಲ್‌ಡಿ. ಬ್ಯಾಂಕ್‌ನ ವಿಶಾಲಾಕ್ಷಿ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ವಿ.ನಾಗರಾಜ್, ಕುಂದೂರು ಎಂ.ಜಿ.ಆರ್. ಮಂಜುನಾಥ್, ಕೆಂಚಿಕೊಪ್ಪದ ಜಿ. ಶಂಕರಪ್ಪ, ಚಿನ್ನಿಕಟ್ಟೆಯ ಕೆ.ಚೇತನ್, ಸಿದ್ದಪ್ಪಗೌಡ್ರು ಕುಳಗಟ್ಟೆ, ಹರಳಹಳ್ಳಿಯ ಎಚ್.ಡಿ. ಸುನೀಲ್, ಕೋಟೆಮಲ್ಲೂರು ಅನುಸೂಯಮ್ಮ, ಆಶಾ ಚಿಕ್ಕೆರೆಹಳ್ಳಿ ಉಪಸ್ಥಿತರಿದ್ದರು.
- - -
-27ಎಚ್.ಎಲ್.ಐ2:ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಎಸ್. ಕುಬೇರನಾಯ್ಕ ಅವಿರೋಧ ಆಯ್ಕೆಯಾದ ಹಿನ್ನೆಲೆ ಎಚ್.ಬಿ. ಮಂಜಪ್ಪ, ಡಿ.ಎಸ್. ಸುರೇಂದ್ರಗೌಡ, ಎಂ.ಪಿ.ರಾಜು, ವಸಂತ ನಾಯ್ಕ, ಎಚ್.ಬಿ.ಅಣ್ಣಪ್ಪ ಮತ್ತಿತರ ಗಣ್ಯರು, ಮುಖಂಡರು ಅಭಿನಂದಿಸಿದರು.