ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಭಾನುಪ್ರಕಾಶರನ್ನು ಬೆಂಬಲಿಸಲು ರಾಘವೇಂದ್ರ ಭಟ್‌ ಮನವಿ

KannadaprabhaNewsNetwork |  
Published : Apr 02, 2025, 01:03 AM IST
ಪ್ರಚಾರ ಸಭೆಯಲ್ಲಿ ರಾಘವೇಂದ್ರ ಭಟ್ ಮಾತನಾಡಿದರು. | Kannada Prabha

ಸಾರಾಂಶ

ಮಹಾಸಭೆಯ ಸಂಘಟನೆಗೊಂಡು ಹೊಸ ಭಾಷ್ಯ ಬರೆಯಲು ಒಕ್ಕೊರಲಿನಿಂದ ಬೆಂಬಲಿಸಬೇಕು ಎಂದು ಕೋರಲಾಯಿತು.

ಹಾವೇರಿ: ಮುಂಬರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡಾ. ಭಾನುಪ್ರಕಾಶ್ ಶರ್ಮ ಅವರು ಜಯಶೀಲರಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುವ ವಿಶ್ವಾಸವಿದೆ. ಆದ್ದರಿಂದ ವಿಪ್ರರು ಅವರನ್ನು ಬೆಂಬಲಿಸಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ರಾಘವೇಂದ್ರ ಭಟ್ ತಿಳಿಸಿದರು.

ನಗರದ ಸೀತಾರಾಮ ಮಂಗಲ ಕಾರ್ಯಾಲಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಭಾನುಪ್ರಕಾಶ್ ಶರ್ಮಾ ಅವರು ಈ ಚುನಾವಣೆಯಲ್ಲಿ ಗೆಲ್ಲಬೇಕು. ಕಳೆದ 30 ವರ್ಷಗಳಿಂದ ಮಹಾಸಭಾದ ಸದಸ್ಯರಾಗಿ ವಿವಿಧ ಹಂತದ ಪದಾಧಿಕಾರಿಗಳಾಗಿ, ಮೂರು ಬಾರಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವ ಹಿಂದು ಪರಿಷತ್ತಿನೊಂದಿಗೆ ಗುರುತಿಸಿಕೊಂಡು ಸನಾತನ ಧರ್ಮದ ಉಳಿವಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಮಠಮಾನ್ಯಗಳ ಗುರುಗಳೊಂದಿಗೆ ನಿರಂತರ ಸಂಪರ್ಕದಿಂದ ಗುರು ಸೇವಾ ಹಾಗೂ ವಿಪ್ರರ ಸೇವೆಯಿಂದ ಸಮಾಜದ ಏಳಿಗೆಗೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಜಿಲ್ಲೆಯ ಎಲ್ಲ ವಿಪ್ರರು ಭಾನುಪ್ರಕಾಶ್ ಶರ್ಮ ಅವರನ್ನು ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲು ಅಮೂಲ್ಯ ಮತವನ್ನು ನೀಡಬೇಕು. ಮಹಾಸಭೆಯ ಸಂಘಟನೆಗೊಂಡು ಹೊಸ ಭಾಷ್ಯ ಬರೆಯಲು ಒಕ್ಕೊರಲಿನಿಂದ ಬೆಂಬಲಿಸಬೇಕು. ಅದೇ ರೀತಿ ಜಿಲ್ಲಾ ಪ್ರತಿನಿಧಿಯಾದ ದತ್ತಾತ್ರೇಯ ನಾಡಿಗೇರ್(ಭಾರಂಗಿ) ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಪ್ರಸಾದ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವಸಂತ ಮೊಕ್ತಾಲಿ, ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ದತ್ತಾತ್ರೇಯ ನಾಡಿಗೇರ, ಉದಯ ಕುಲಕರ್ಣಿ, ಪವನ್ ಬಹದ್ದೂರ ದೇಸಾಯಿ, ಹನುಮಂತ ನಾಯಕ ಬಾದಾಮಿ, ಜಿ.ಎಲ್. ನಾಡಿಗೇರ, ಎನ್.ಎಸ್. ಕುಲಕರ್ಣಿ, ಶ್ರೀಪಾದ ಕುಲಕರ್ಣಿ, ರಮೇಶ ಕಡಕೋಳ, ರಮೇಶ ಕುಲಕರ್ಣಿ, ನಾಗರಾಜ್ ಗಡಗಿ, ವಿನಯ್ ಬಂಕನಾಳ, ರಾಜರಾಮ್ ಕುಲಕರ್ಣಿ, ರಮೇಶ ಮಠದ, ರಮೇಶ್ ಕಡಕೋಳ, ಮಹಾದೇವಗೌಡ ಪಾಟೀಲ್, ಶ್ರೀನಿವಾಸ ಪಾಟೀಲ, ದೀಪಾ ಪಾಟೀಲ್ ಮೊದಲಾದವರು ಇದ್ದರು. ಭೌಗೋಳಿಕ ಮಾದರಿಗಳ ಪ್ರದರ್ಶನ

ರಾಣಿಬೆನ್ನೂರು: ಪ್ರಾಯೋಗಿಕ ಮಾದರಿಗಳು ವಿದ್ಯಾರ್ಥಿನಿಯರ ಭವಿಷ್ಯವನ್ನುರೂಪಿಸುವ ಹಾಗೂ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿವೆ ಎಂದು ಬಿಎಜೆಎಸ್‌ಎಸ್ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದರು.ನಗರದ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಭೌಗೋಳಿಕ ಮಾದರಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಎಸ್.ಎಲ್. ಕರ್ಲವಾಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭೂಗೋಳಶಾಸ್ತ್ರ ವಿಷಯವು ತಂತ್ರಜ್ಞಾನ ಆಧರಿತ ಕಲಿಕೆಯಾಗುತ್ತಿದ್ದು, ಎಲ್ಲ ವಿಜ್ಞಾನಗಳ ತಾಯಿಯಾಗಿದೆ. ತಂತ್ರಜ್ಞಾನಗಳ ತಂತ್ರಾಂಶದಿಂದ ಭೌಗೋಳಿಕ ಮಾದರಿಯನ್ನು ಕಂಡುಹಿಡಿಯಬಹುದು ಎಂದರು.

ಜಿ.ಬಿ. ಬೆಳವಿಗಿ ಮಾತನಾಡಿದರು. ಪ್ರಾ. ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಪುಷ್ಪಾಂಜಲಿ ಕಾಂಬಳೆ, ಬೀರಪ್ಪ ಲಮಾಣಿ, ಡಾ. ಸುನೀಲ ಹಿರೇಮನಿ, ಬಸವರಾಜ ಮಾಳೇನಹಳ್ಳಿ, ಸಂತೋಷ ಭಜಂತ್ರಿ, ರಾಜೀವ ಕೆ.ಎಂ., ಪೃಥ್ವಿರಾಜ ಕಟ್ಟಿಮನಿ, ಡಾ. ಹನುಮಂತಪ್ಪ ಬ್ಯಾಡಗಿ, ಅನ್ನಪೂರ್ಣ, ರಾಧಿಕಾ, ನಾಗರತ್ನಾ ಸಿ.ಎಸ್., ಉಷಾ, ಸೌಜನ್ಯ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ