ಹಳ್ಳಿಯಿಂದ ಡೆಲ್ಲಿಗೆ ಹೋಗಿ ಸಾಧನೆ ಮಾಡಿದ ರಾಘವೇಂದ್ರ ನಾಯ್ಕ್!

KannadaprabhaNewsNetwork |  
Published : Aug 15, 2025, 01:00 AM IST
14ರಾಘವೇಂದ್ರ | Kannada Prabha

ಸಾರಾಂಶ

ಪಟ್ಲದ ಯು.ಎಸ್. ನಾಯಕ್ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಡಿಪ್ಲೋಮಾ ವ್ಯಾಸಂಗದ ನಂತರ 2005ರಲ್ಲಿ ಉದ್ಯೋಗಕ್ಕಾಗಿ ಬರಿಕೈಯಲ್ಲಿ ದೆಹಲಿಗೆ ಹೋಗಿದ್ದ ರಾಘವೇಂದ್ರ, ಅಲ್ಲಿ ಸ್ವಂತ ಪರಿಶ್ರಮದಿಂದ ಅಕ್ಯೂಟ್ ಲೇಸರ್ ಡೈ ಇಂಡಿಯಾ ಎಂಬ ಕಿರು ಉದ್ದಿಮೆಯನ್ನು ಆರಂಭಿಸಿದರು. ಇಂದು ಈ ಉದ್ದಿಮೆ ಕೇಂದ್ರ ಸರ್ಕಾರದಿಂದಲೇ ಗುರುತಿಸಲ್ಪಡುವಷ್ಟು ದೊಡ್ಡದಾಗಿ ಬೆಳೆದಿದ್ದು, ರಾಘವೇಂದ್ರ ಅವರು ಈ ಸಾಧನೆಯಿಂದ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

ಸ್ವಾತಂತ್ರ್ಯೋತ್ಸವ ಮುನ್ನಾದಿನ ಕೇಂದ್ರ ಸಚಿವರೊಂದಿಗೆ ಔತಣದ ಗೌರವ ಪಡೆದ ಯುವ ಸಾಧಕ

ಸುಭಾಶ್‌ಚಂದ್ರ ಎಸ್. ವಾಗ್ಳೆಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪಟ್ಲ ಎಂಬ ಹಳ್ಳಿಯಲ್ಲಿ ಬಡ ಕೃಷಿಕೂಲಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವಕ ರಾಘವೇಂದ್ರ ಕೃಷ್ಣ ನಾಯ್ಕ್ ದೆಹಲಿಯಲ್ಲೀಗ ಸ್ವಂತ ಉದ್ಯಮವನ್ನು ಸ್ಥಾಪಿಸಿದಲ್ಲದೇ ಇಂದು ಸ್ವಾತಂತ್ರ್ಯೋತ್ಸವದಂಗವಾಗಿ ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ ಆಯೋಜಿಸಿದ್ದ ಸಚಿವರೊಂದಿಗೆ ಔತಣ ಕೂಟ (ಮೀಟಿಂಗ್ ಆ್ಯಂಡ್ ಡಿನ್ನರ್ ವಿದ್ ಮಿನಿಸ್ಟರ್)ದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.ಪಟ್ಲದ ಯು.ಎಸ್. ನಾಯಕ್ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಡಿಪ್ಲೋಮಾ ವ್ಯಾಸಂಗದ ನಂತರ 2005ರಲ್ಲಿ ಉದ್ಯೋಗಕ್ಕಾಗಿ ಬರಿಕೈಯಲ್ಲಿ ದೆಹಲಿಗೆ ಹೋಗಿದ್ದ ರಾಘವೇಂದ್ರ, ಅಲ್ಲಿ ಸ್ವಂತ ಪರಿಶ್ರಮದಿಂದ ಅಕ್ಯೂಟ್ ಲೇಸರ್ ಡೈ ಇಂಡಿಯಾ ಎಂಬ ಕಿರು ಉದ್ದಿಮೆಯನ್ನು ಆರಂಭಿಸಿದರು. ಇಂದು ಈ ಉದ್ದಿಮೆ ಕೇಂದ್ರ ಸರ್ಕಾರದಿಂದಲೇ ಗುರುತಿಸಲ್ಪಡುವಷ್ಟು ದೊಡ್ಡದಾಗಿ ಬೆಳೆದಿದ್ದು, ರಾಘವೇಂದ್ರ ಅವರು ಈ ಸಾಧನೆಯಿಂದ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 2014ರಲ್ಲಿ ಒಂದು ಚಿಕ್ಕ ಕೋಣೆಯಲ್ಲಿ, ಬ್ಯಾಂಕ್ ಖಾತೆಯಲ್ಲಿ ಒಂದು ತಿಂಗಳ ವೇತನದೊಂದಿಗೆ ತನ್ನ ಕಿರು ಉದ್ಯಮವನ್ನು ಪ್ರಾರಂಭಿಸಿದ ರಾಘವೇಂದ್ರ, ಇಂದು ದೆಹಲಿಯಲ್ಲೇ ಪ್ರಸಿದ್ಧ ಡೈ ಮೇಕರ್ ಆಗಿ ಬೆಳೆದದ್ದು ಪವಾಡಕ್ಕಿಂತ ಕಮ್ಮಿ ಇಲ್ಲ. ಡೈ ಮೇಕಿಂಗ್ ಕ್ಷೇತ್ರದಲ್ಲಿ ತಮ್ಮ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿರುವ ಪಂಜಾಬಿ ಉದ್ಯಮಿಗಳಿಂದ ಕೊಲೆ ಬೆದರಿಕೆ, ಫ್ಯಾಕ್ಟ್ರಿಗೆ ಬೆಂಕಿ ಹಚ್ಚುವ ಹೆದರಿಕೆ, ಪೊಲೀಸ್ ಕೇಸುಗಳ ಜೊತೆ ಗುದ್ದಾಡಿಕೊಳ್ಳುತ್ತಲೇ, ಉದ್ಯಮದಲ್ಲಿರುವ ಸ್ಪರ್ಧೆಯನ್ನು ಎದುರಿಸುವುದಕ್ಕಾಗಿ ಸ್ವಂತ ಪರಿಶ್ರಮದಿಂದ ಆಧುನಿಕ ಡೈಮೇಕಿಂಗ್ ಜ್ಞಾನವನ್ನು ಪಡೆದು, ಹೊಸ ಜ್ಞಾನ ತಂತ್ರಜ್ಞಾನವನ್ನಳವಡಿಸಿಕೊಂಡು ಉದ್ದಿಮೆ, ಕೇಂದ್ರ ಕಚೇರಿಯ ಜೊತೆಗೆ ಇನ್ನೊಂದು ಶಾಖಾ ಕಚೇರಿಯನ್ನೂ ಹುಟ್ಟು ಹಾಕಿರುವ ಅವರು 60 ಮಂದಿಗೆ ಉದ್ಯೋಗವನ್ನು ನೀಡಿ, ಅವರ ಕುಟುಂಬಗಳಿಗೆ ಅಧಾರವಾಗಿದ್ದಾರೆ.ಕೂಲಿ ಕೆಲಸ ಮಾಡುವ ತಂದೆ ಕೃಷ್ಣ ನಾಯ್ಕ್, ತಾಯಿ ಸುಶೀಲಾ ತೀರಾ ಬಡತನದ ನಡುವೆಯೂ ಮಗನಿಗೆ ಐಟಿಐ ಶಿಕ್ಷಣ ನೀಡಿದ್ದಾರೆ. ಇದಾದ ಮೇಲೆ ರಾಘವೇಂದ್ರ ಖಾಸಗಿಯಾಗಿ ಪದವಿಯನ್ನೂ ವ್ಯಾಸಂಗ ಮಾಡಿದ್ದಾರೆ. ಅವರ ಪತ್ನಿ ವಾಣಿ ಕೂಡ ಪಟ್ಲ ಶಾಲೆಯಲ್ಲಿಯೇ ಶಿಕ್ಷಣ ಪಡೆದವರು, ಗಂಡನ ಸಾಧನೆಗೆ ಒತ್ತಾಸೆಯಾಗಿ ನಿಂತಿದ್ದಾರೆ.

ಡೆಲ್ಲಿ ತುಳು ಐಸಿರಿ, ಪಟ್ಲ ಫೌಂಡೇಶನ್‌ಗಳಲ್ಲಿ ಸಕ್ರಿಯರಾಗಿ, ಡೆಲ್ಲಿಯ ರಂಗಭೂಮಿಯಲ್ಲಿಯೂ ನಟಿಸುತ್ತಾ, ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಗೌರವಕ್ಕೆ ಪಾತ್ರವಾಗಿರುವ ರಾಘವೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಚಾರಿತ್ರಿಕ ಕೆಂಪುಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿದ್ದಾರೆ. ಮಾತ್ರವಲ್ಲ ಇಂದು ಸಂಜೆ ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ಜಿತೆನ್ ರಾಮ್ ಮಾಂಝಿ ಮತ್ತು ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ದೇಶದ 100 ಮಂದಿ ಆಯ್ದ ಔದ್ಯಮಿಕ ರಂಗದ ಸಾಧಕರ ಗೌರವಾರ್ಥ ಆಯೋಜಿಸಿರುವ ‘ಮೀಟಿಂಗ್ ಆ್ಯಂಡ್ ಡಿನ್ನರ್ ವಿದ್ ಮಿನಿಸ್ಟರ್’ ಕಾರ್ಯಕ್ರಮದಲ್ಲಿ ಪತ್ನಿಯ ಜೊತೆ ಭಾಗವಹಿಸುತ್ತಿದ್ದಾರೆ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ