ಹರಪನಹಳ್ಳಿಯಲ್ಲಿ ರಾಘವೇಂದ್ರಸ್ವಾಮೀಗಳ ಆರಾಧನೆ ಆರಂಭ

KannadaprabhaNewsNetwork |  
Published : Aug 30, 2026, 02:00 AM IST
ಹರಪನಹಳ್ಳಿಯ ಮಠದ ಕೇರಿಯಲ್ಲಿರುವ ಮಠದಲ್ಲಿ  ರಾಘವೇಂದ್ರಸ್ವಾಮಿಗಳ ಆರಾಧನೆ ಗೆ ಚಾಲನೆ ನೀಡಲಾಯಿತು | Kannada Prabha

ಸಾರಾಂಶ

ರಾಘವೇಂದ್ರಸ್ವಾಮಿಗಳ 355ನೇ ಆರಾಧನೆ ಮಹೋತ್ಸವ ನಗರದಲ್ಲಿ ಮಠದ ಕೇರಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರದಿಂದ ಆರಂಭಗೊಂಡಿತು. ಬೆಳಗ್ಗೆ ಪಂಚಾಮೃತಾಭಿಷೇಕ, ವಾಯುಸ್ತುತಿ, ವಿಷ್ಣುಸಹಸ್ರನಾಮ, ಹರಿವಾಯುಸ್ತುತಿ, ರಾಘವೇಂದ್ರ ಸ್ವಾಮಿ ಶ್ತೋತ್ರ, ಹೀಗೆ ಅಷ್ಟೋತ್ತರ ಕಾರ್ಯಕ್ರಮ ಜರುಗಿತು.

ಹರಪನಹಳ್ಳಿ: ರಾಘವೇಂದ್ರಸ್ವಾಮಿಗಳ 355ನೇ ಆರಾಧನೆ ಮಹೋತ್ಸವ ನಗರದಲ್ಲಿ ಮಠದ ಕೇರಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರದಿಂದ ಆರಂಭಗೊಂಡಿತು. ಬೆಳಗ್ಗೆ ಪಂಚಾಮೃತಾಭಿಷೇಕ, ವಾಯುಸ್ತುತಿ, ವಿಷ್ಣುಸಹಸ್ರನಾಮ, ಹರಿವಾಯುಸ್ತುತಿ, ರಾಘವೇಂದ್ರ ಸ್ವಾಮಿ ಶ್ತೋತ್ರ, ಹೀಗೆ ಅಷ್ಟೋತ್ತರ ಕಾರ್ಯಕ್ರಮ ಜರುಗಿತು.

ರಾಘವೇಂದ್ರಸ್ವಾಮಿಗಳಿಗೆ ಜಿ. ಶ್ರೀನಿಧಿ ಕುಟುಂಬಸ್ಥರು ಅಲಂಕಾರ ಸೇರಿದಂತೆ ಸೇವಾಕರ್ತರಾಗಿ ಕಾರ್ಯನಿರ್ವಹಿಸಿದರು. ಧರ್ಮಕರ್ತರಾದ ವೆಂಕಣ್ಣಾಚಾರ್ಯರು, ಎ. ಶ್ರೀನಿವಾಸಚಾರ್ಯರು, ಎನ್. ಶೇಷಗಿರಿ ವಿವಿಧ ಪೂಜಾ ವಿಧಿವಿಧಾನಗಳನ್ನು ಮಾಡಿದರು.ವಿಠಲ್‌ ರಾವ್, ಕರೂರು ರಂಗರಾವ್, ಎ. ಬದರೀನಾರಾಯಣ, ಆರ್. ಮಧುಸೂಧನ, ದಂಡಿನ ಹರೀಶ, ಶೇಷಗಿರಿರಾವ್, ಕಟ್ಟಿ ಹರ್ಷ, ವಕೀಲ ಶ್ರೀನಿಧಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಾಘವೇಂದ್ರಸ್ವಾಮಿಗಳು 1671 ಶ್ರಾವಣ ಕೃಷ್ಣಪಕ್ಷದ ದ್ವಿತೀಯ ದಿನದಂದು ಮಂತ್ರಾಲಯದಲ್ಲಿ ಬೃಂದಾವನವನ್ನು ಪ್ರವೇಶಿಸಿದರು. ಪ್ರವೇಶಿಸಿದ ದಿನವನ್ನು ಸ್ಮರಿಸುವ ಒಂದು ಹಬ್ಬವೇ ರಾಘವೇಂದ್ರಸ್ವಾಮಿಗಳ ಆರಾಧನೆಯಾಗಿ ಈವರೆಗೂ ನಡೆದುಕೊಂಡು ಬಂದಿದೆ. ರಾಘವೇಂದ್ರ ಸ್ವಾಮಿಗಳ ಆರಾಧನೆಯು ಭಕ್ತರಿಗೆ ಗುರುಗಳ ಅನುಗ್ರಹವನ್ನು ಪಡೆಯಲು ಮತ್ತು ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಒಂದು ಅವಕಾಶವಾಗಿದೆ. ಆರಾಧನೆಯು ಭಕ್ತಿಯ ಸಂಕೇತವಾಗಿದ್ದು, ಭಕ್ತರ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತರುತ್ತದೆ ಎಂಬುದು ನಂಬಿಕೆಯಾಗಿದೆ ಎಂದು ಧರ್ಮಕರ್ತ ಎ. ವೆಂಕಣ್ಣಾಚಾರ್ಯರು ಹೇಳುತ್ತಾರೆ.ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ: ಶ್ರದ್ಧಾಭಕ್ತಿಯಿಂದ ಪೂರ್ವಾರಾಧನೆ

ಕಂಪ್ಲಿ: ಪಟ್ಟಣದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಶಾಖಾಮಠದಲ್ಲಿ ಗುರುಸಾರ್ವಭೌಮ ಶ್ರೀ ರಾಘವೇಂದ್ರ ತೀರ್ಥರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಪೂರ್ವಾರಾಧನಾ ಕಾರ್ಯಕ್ರಮಗಳು ಶನಿವಾರ ಶ್ರದ್ಧಾ, ಭಕ್ತಿಭಾವದಿಂದ ನೆರವೇರಿದವು.ಆರಾಧನಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಂಜಾನೆ ಸುಪ್ರಭಾತ ಸೇವೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಬಳಿಕ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಸಹಿತ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ, ಹಸ್ತೋದಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಸೇವೆಗಳು ವಿಧಿವಿಧಾನಗಳೊಂದಿಗೆ ನೆರವೇರಿದವು.ಆರಾಧನಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸೌಮ್ಯ ವೆಂಕಟ್ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬಳಿಕ ಕಂಪ್ಲಿಯ ಲಕ್ಷ್ಮೀ ಕಲಾ ಕ್ಷೇತ್ರದ ಎಸ್.ಕೆ.ಆರ್. ಜಿಲಾನಿಬಾಷ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಲಾವಿದರ ಸಾಂಸ್ಕೃತಿಕ ಪ್ರದರ್ಶನ ಭಕ್ತರ ಗಮನ ಸೆಳೆಯಿತು.

ಇದಕ್ಕೂ ಮುನ್ನ ಆ. 28ರಂದು ಆರಾಧನಾ ಮಹೋತ್ಸವದ ಪೂರ್ವಭಾವಿಯಾಗಿ ಗೋಪೂಜೆ ನೆರವೇರಿಸಲಾಯಿತು. ಬಳಿಕ ಪ್ರಮುಖ ಗೌಡ್ರು ಗೋಪಾಲಕೃಷ್ಣ ಅವರಿಂದ ಧ್ವಜಾರೋಹಣ ನೆರವೇರಿತು. ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿವಾಚನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿರುವ ರಾಯರ ಬೃಂದಾವನವನ್ನು ನಾನಾ ಬಗೆಯ ಫಲಪುಷ್ಪಗಳಿಂದ ಹಾಗೂ ರಜತ ಮುಖವಾಡದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೃಂದಾವನದ ವಿಶೇಷ ಅಲಂಕಾರ ಭಕ್ತರನ್ನು ಆಕರ್ಷಿಸಿತು. ಮಠದ ಆವರಣದಲ್ಲಿ ಭಕ್ತಿಗೀತೆಗಳ ಗಾಯನವೂ ನಡೆಯಿತು. ಸತ್ಯನಾರಾಯಣ ಭಜನಾ ಮಹಿಳಾ ಮಂಡಳಿಯ ಸದಸ್ಯರು ಭಕ್ತಿಗೀತೆಗಳನ್ನು ಹಾಡಿ ಭಕ್ತಿಭಾವ ಮೂಡಿಸಿದರು.

ಮಠದ ವಿಚಾರಣಾಕರ್ತ ಟಿ.ಕೋಟ್ರೇಶ್, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಅರ್ಚಕ ವಿಜಯೇಂದ್ರ ಹಾಗೂ ಗುರುರಾಜ ಸೇವಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ವಿವಿಧ ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು