ಹೊಳಲ್ಕೆರೆ: ಚಿತ್ರದುರ್ಗ ಲೋಕಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಯುವ ಮುಖಂಡ ರಘು ಚಂದನ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಗೆ ಜನ ಸಂಘಟಿಸಿ ಕಾರ್ಯಕ್ರಮ ಉಸ್ತುವಾರಿ ಹೊತ್ತ ಬಗೆ ಭರ್ಜರಿ ಎಂಟ್ರಿ ಸಾಬೀತು ಪಡಿಸಿದಂತೆ ಗೋಚರಿಸಿತು.
ಈ ವೇಳೆ ಮಾತನಾಡಿದ ರಘು ಚಂದನ್, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಸಹಜವಾಗಿಯೇ ಅಸಮಧಾನವಾಗಿತ್ತು. ಟಿಕೆಟ್ ತಪ್ಪಿದಾಗ ಬೇರೆ ಪಕ್ಷದವರು ಆಹ್ವಾನಿಸಿದ್ದರು. ನಂಬಿದ ಕಾರ್ಯಕರ್ತರ ಕತ್ತು ಕೊಯ್ಯುವುದಿಲ್ಲವೆಂದು ಕರೆದವರಿಗೆ ಹೇಳಿದ್ದೆ. ಬಳಿಕ ಬಿ.ಎಸ್.ವೈ, ಬಿ.ವೈ.ವಿಜಯೇಂದ್ರ ಮನವೊಲಿಸಿದ್ದರು. ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ಹೆಚ್ಚಿನ ಮತಗಳ ಲೀಡ್ ಕೊಡಿಸುವೆ. ನಾವು ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ, ಬಳಸಿಕೊಳ್ಳಲ್ಲ. ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುವುದೇ ನನ್ನ ಗುರಿ ಎಂದರು.