ರಘು ಇಡ್ಕಿದು ಅವರ ‘ಎಲ್ಲವೂ ಬದಲಾಗುತ್ತದೆ’ ಕೃತಿ ಲೋಕಾರ್ಪಣೆ

KannadaprabhaNewsNetwork |  
Published : Dec 22, 2023, 01:30 AM IST
ಎಲ್ಲವೂ ಬದಲಾಗುತ್ತದೆ ಕೃತಿ ಲೋಕಾರ್ಪಣೆ ಸಂದರ್ಭ | Kannada Prabha

ಸಾರಾಂಶ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಪುತ್ತೂರು ಉಮೇಶ್‌ ನಾಯಕ್‌ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಟನ್ನು ಹೊಂದಿ ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವಿದ್ಯಾಪ್ರಕಾಶನ ಮಂಗಳೂರು ವತಿಯಿಂದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಲೋಕಾರ್ಪಣೆ ಕಾರ್ಯಕ್ರಮ ಸಮಾರಂಭ ಗುರುವಾರ ನಗರದ ಸುದ್ದಿಗೋಷ್ಠಿಯಲ್ಲಿ ನಡೆಯಿತು.ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಪುತ್ತೂರು ಉಮೇಶ್‌ ನಾಯಕ್‌ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಟನ್ನು ಹೊಂದಿ ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಶುಭಹಾರೈಸಿದರು. ಸುರತ್ಕಲ್‌ ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ. ಪಿ. ಕೃಷ್ಣ ಮೂರ್ತಿ ಮಾತನಾಡಿ, ರಘು ಇಡ್ಕಿದು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವವರು ಮತ್ತು ಪ್ರಯೋಗಶೀಲರು ಆಗಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ಅವರ ಕಾರ್ಯ ಮೆಚ್ಚುವಂತಹುದು ಎಂದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕಾ.ವೀ. ಕೃಷ್ಣದಾಸ್‌, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೋಪಾಕೃಷ್ಣ ಶಾಸ್ತ್ರಿ, ಪ್ರಕಾಶಕರಾದ ವಿದ್ಯಾ ಇದ್ದರು.

ಕೃತಿ ರಚನೆಕಾರ ಸಾಹಿತಿ ರಘು ಇಡ್ಕಿದು ಸ್ವಾಗತಿಸಿದರು. ಎನ್‌. ಸುಬ್ರಾಯ ಭಟ್‌ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ