ಬರಗಾಲದಲ್ಲಿ ಬೆಳೆದ ಜೋಳ ಮಾರಿ ರಾಮಮಂದಿರಕ್ಕೆ ದೇಣಿಗೆ

KannadaprabhaNewsNetwork |  
Published : Jan 24, 2024, 02:00 AM IST
23ಕೆಪಿಆರ್‌ಸಿಆರ್‌01ಮತ್ತು03: | Kannada Prabha

ಸಾರಾಂಶ

ಸಿಂಧನೂರು ತಾಲೂಕಿನ ಗೋಮರ್ಸಿ ಸಣ್ಣ ಕರಿಯಪ್ಪರಿಂದ ವಿಚಿತ್ರ ಸಂಕಲ್ಪ. 50 ಚೀಲ ಜೋಳ ಮಾರಿ ಬಂದ 91,870 ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಆರ್‌ಟಿಜಿಎಸ್ ಮೂಲಕ ವರ್ಗಾವಣೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಮಳೆ ಕೊರತೆ, ತೀವ್ರ ಬರಗಾಲದ ಸಮಯದಲ್ಲಿ ರೈತರು ಬದುಕು ಕಟ್ಟಿಕೊಳ್ಳುವುದೇ ದುಸ್ತರ ಎನ್ನುವಂತಹ ಸಮಯದಲ್ಲಿ ಶ್ರೀರಾಮಭಕ್ತನೊಬ್ಬ ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದ ಜೋಳವನ್ನು ಮಾರಾಟ ಮಾಡಿ ಬಂದ ಹಣವನ್ನೇಲ್ಲಾ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ ದೇಣಿಗೆ ನೀಡಿ ಶ್ರೀರಾಮಲಲ್ಲಾ ಮೇಲಿನ ಅಪಾರ ಭಕ್ತಿಯನ್ನು ಬಹಿರಂಗ ಪಡಿಸಿದ್ದಾರೆ.

ಜಿಲ್ಲೆ ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ಸಣ್ಣ ಕರಿಯಪ್ಪ ಅಂಬಿಗೇರಾ ಅವರೇ ಪ್ರಭು ಶ್ರೀರಾಮನ ಮೇಲಿನ ಅಗಾದ ಭಕ್ತಿಯಿಂದ ಈ ಕಾರ್ಯವನ್ನು ಮಾಡಿದ್ದಾರೆ. ಗೋಮರ್ಸಿ ಗ್ರಾಮದ ಲಕ್ಷ್ಮೀ ಹಾಗೂ ಸಣ್ಣ ಕರಿಯಪ್ಪ ಅಂಬಿಗೇರಾ ಅವರು ಪ್ರಸಕ್ತ ಸಾಲಿನಲ್ಲಿ ತಮ್ಮ 3 ಎಕರೆ ಜಮೀನಿನಲ್ಲಿ ಜೋಳವನ್ನು ಹಾಕಿದ್ದು, ಪ್ರತಿ ವರ್ಷ ಎಕರೆಗೆ 40 ಚೀಲ ಬೆಳೆಯುತ್ತಿದ್ದವರು ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಹಾಗೂ ಬರಗಾಲ ಬಿದಿದ್ದರಿಂದ 120 ಚೀಲಗಳ ಬದಲಾಗಿ ಕೇಲವ 80 ಚೀಲ ಜೋಳ ಬೆಳೆದಿದ್ದಾರೆ. ಇಂತಹ ಕಷ್ಟದಲ್ಲಿಯೂ ಸಹ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ತಮ್ಮದೇ ಆದ ರೀತಿಯಲ್ಲಿ ರಾಮ ಭಕ್ತಿಯನ್ನು ತೋರಲು ಖರ್ಚು ವೆಚ್ಚಕ್ಕಾಗಿ 30 ಚೀಲಗಳನ್ನು ಬಿಟ್ಟು ಉಳಿದ 50 ಚೀಲ ಜೋಳವನ್ನು ಮಾರಾಟ ಮಾಡಿ ಬಂದ 91,870 ರು. ಮೊತ್ತವನ್ನು ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಮಂಗಳವಾರ ಆರ್‌ಟಿಜಿಎಸ್‌ ಮಾಡಿದ್ದಾರೆ.ವಿಚಿತ್ರ ಸಂಕಲ್ಪ

500 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಗೊಂಡಿದೆ ಇದೇ ವರ್ಷ ಸಣ್ಣ ಕರಿಯಪ್ಪ ಅಂಬಿಗೇರಾ ಅವರು 50 ವರ್ಷವಾಗಿದ್ದರಿಂದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಏನಾದರು ಮಾಡಬೇಕು ಎನ್ನುವ ಸದುದ್ದೇಶದಿಂದ ಅಯೋಧ್ಯೆ ಶ್ರೀರಾಮ ಮಂದಿರ ಲೋಪಾರ್ಕಣೆ ದಿನವಾದ ಸೋಮವಾರ ಈ ವಿಚಿತ್ರ ಸಂಕಲ್ಪ ಮಾಡಿ ಜೋಳವನ್ನು ಮಾರಾಟ ಮಾಡಿ ಅದರಿಂದ ಬಂದ 91,870 ರು. ಇಡೀ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮುಖಾಂತರ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ಗೆ ರವಾನಿಸಿ ರಾಮ ಭಕ್ತಿಗೆ ಪಾರವಿಲ್ಲ ಎಂಬುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು