ಹುಬ್ಬಳ್ಳಿ: ತೋಟದ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿದ್ದ ಅಡ್ಡೆ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ₹5 ಲಕ್ಷ ಮೌಲ್ಯದ ನಕಲಿ ಮದ್ಯ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಛಬ್ಬಿ ಗ್ರಾಮದ ಬಳಿ ನಡೆದಿದೆ.
ಛಬ್ಬಿ ಗ್ರಾಮದ ಬಳಿಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಹೊರ ಠಾಣೆಯ ಕೂಗಳತೆಯ ದೂರದಲ್ಲಿಯೇ ಈ ನಕಲಿ ಮದ್ಯ ಮಾರಾಟ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಎಸ್.ಪಿ. ವಿಜಯಕುಮಾರ್ ಹಿರೇಮಠ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಧಾರವಾಡ ಅಬಕಾರಿ ಉಪಆಯುಕ್ತ ರಮೇಶ್ ಕುಮಾರ್. ಎಚ್ ಮಾಹಿತಿ ನೀಡಿದ್ದಾರೆ.ನಕಲಿ ಮದ್ಯ ತಯಾರಿಸುತ್ತಿದ್ದ ಹುಬ್ಬಳ್ಳಿ ಮೂಲದ ಸಂದೀಪ್ ಹಾಗೂ ಅಮೃತ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ನಕಲಿ ಲೇಬಲ್, ಭದ್ರಾತಾ ಚೀಟಿ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಪೊಲೀಸರು ದಾಳಿ ಮಾಡಿದಾಗ ಇಬ್ಬರು ಯುವಕರು ನಕಲಿ ಮದ್ಯ ತಯಾರಿಸುತ್ತಿದ್ದರು. ಇದರಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಬ್ರಾಂಡ್ ಯಾವುದೂ ಇರಲಿಲ್ಲ. ಬರೋಬ್ಬರಿ ₹5 ಲಕ್ಷ ಮೌಲ್ಯದ ಮದ್ಯ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಭವಿಸಿದಂತೆ ಮೂಲ ಮಾಲೀಕನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಓರ್ವನ ಬಂಧನ
ಅಣ್ಣಿಗೇರಿ: ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿ ಗರ್ಭೀಣಿ ಮಾಡಿದ ಆರೋಪದ ಮೇಲೆ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದ ಶಿವಕುಮಾರ ಮಾರುತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆಈತ ಅದೇ ಊರಿನ ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಅಪ್ರಾಪ್ತೆಯನ್ನು ಕೇಳಿದಾಗ ಈ ವಿಚಾರ ತಿಳಿಸಿದ್ದಾಳೆ. ಈ ಕುರಿತು ಅಪ್ರಾಪ್ತೆಯ ತಾಯಿ ಅಣ್ಣಿಗೇರಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.