ಹುಬ್ಬಳ್ಳಿ:
ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆಯು, ಕುಟುಂಬದಿಂದ ಬೇರ್ಪಟ್ಟಿದ್ದ ಮಕ್ಕಳನ್ನು ರಕ್ಷಿಸಿ, ಎನ್‌ಜಿಒ ಹಾಗೂ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಅವರ ಕುಟುಂಬಗಳೊಂದಿಗೆ ಮರು ಸೇರ್ಪಡೆಗೆ ಆರ್‌ಪಿಎಫ್ ಸಿಬ್ಬಂದಿ ನೆರವಾಗಿದ್ದಾರೆ. "ಆಪರೇಷನ್ ಡಿಗ್ನಿಟಿ " ಅಡಿ ಇಬ್ಬರು ವೃದ್ಧರನ್ನು ರಕ್ಷಿಸಿ ಕುಟುಂಬ ಅಥವಾ ಎನ್‌ಜಿಒಗಳಿಗೆ ಒಪ್ಪಿಸಲಾಗಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ "ಮೇರಿ ಸಹೇಲಿ " ಉಪಕ್ರಮದಡಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಆಸನ ಹಾಗೂ ಜನನ ವಿವರಗಳನ್ನು ಸಂಬಂಧಿತ ನಿಲ್ದಾಣಗಳ ಆರ್‌ಪಿಎಫ್ ತಂಡಗಳಿಗೆ ಹಂಚಿಕೊಂಡು ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರಸ್ತುತ 32 ರೈಲುಗಳು ಇದರ ವ್ಯಾಪ್ತಿಯಲ್ಲಿವೆ.ಟಿಕೆಟ್‌ಗಳ ಕಾಳಸಂತೆ ತಡೆಯಲು "ಉಪಲಬ್ಧ್ " ಕಾರ್ಯಾಚರಣೆ ನಡೆಸಿ, ರೈಲ್ವೆ ಕಾಯ್ದೆಯ ಸೆಕ್ಷನ್ 143ರಡಿ 12 ಟಿಕೆಟ್ ದಲ್ಲಾಳಿಗಳನ್ನು ಬಂಧಿಸಲಾಗಿದೆ. ₹53,001 ಮೌಲ್ಯದ 18 ಬಳಕೆಯಾಗದ ಹಾಗೂ ₹2.32 ಲಕ್ಷ ಮೌಲ್ಯದ 56 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು 67 ಪ್ರಕರಣಗಳಲ್ಲಿ ಪ್ರಯಾಣಿಕರು ಕಳೆದುಕೊಂಡ ಲ್ಯಾಪ್‌ಟಾಪ್, ಮೊಬೈಲ್, ಆಭರಣ ಸೇರಿದಂತೆ ₹66.41 ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ರೈಲ್ವೆ ಆಸ್ತಿ ಕಳವು ಸಂಬಂಧ 14 ಪ್ರಕರಣ ದಾಖಲಿಸಿ 24 ಮಂದಿಯನ್ನು ಬಂಧಿಸಲಾಗಿದ್ದು, ₹2.28 ಲಕ್ಷ ಮೌಲ್ಯದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.