)
ಸಿಂಧನೂರು: ನಗರದ ರೈಲ್ವೆ ನಿಲ್ದಾಣವರೆಗೆ ನಡೆಯುತ್ತಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಈ ಕಾಮಗಾರಿಗೆ ₹9 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದೆ. 1.75 ಕಿ.ಮೀ ಉದ್ದ, 66 ಅಡಿ ಅಗಲದ ಸಿಸಿ ರಸ್ತೆ ನಿರ್ಮಾಣ ಕೆಲಸವನ್ನು ತ್ವರಿತಗತಿಯಲ್ಲಿ ಗುಣಮಟ್ಟದಿಂದ ನಿರ್ವಹಿಸಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ತಮ್ಮ ಜಾಗವನ್ನು ಗುರುತಿಸಿ ಕೊನೆ ಯಲ್ಲಿ ಚರಂಡಿ ನಿರ್ಮಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ, ರಸ್ತೆ ಜಾಗ ಒತ್ತುವರಿ ಆಗದಂತೆ ಕ್ರಮ ವಹಿಸಬೇಕು ಎಂದು ಕಾರ್ಯ ಪಾಲಕ ಎಂಜನಿಯರ್ ಸತ್ಯನಾರಾಯಣ ಶೆಟ್ಟಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜನಿಯರ್ ದಾವಲಸಾಬ್ ಅವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ರವಿಗೌಡ ಪನ್ನೂರು, ಮುಖಂಡರಾದ ಅಶೋಕ ಗೌಡ ಗದ್ರಟಗಿ, ವೆಂಕನಗೌಡ ಮಲ್ಕಾಪುರ, ದೇವೇಂದ್ರಗೌಡ, ವೆಂಕೋಬಣ್ಣ ಕಲ್ಲೂರು, ವೆಂಕಟೇಶ ನಂಜಲದಿನ್ನಿ, ಸಾಯಿ ರಾಮಕೃಷ್ಣ, ಮಹಾಂತೇಶ, ಎಸ್.ಬಿ.ರೆಡ್ಡಿ, ನಿರುಪಾದಿ ನಾಗಲಾಪೂರ, ಚಂದ್ರಶೇಖರ ಮೈಲಾರ, ಅಲ್ಲಮಪ್ರಭು ಪೂಜಾರ್, ಜಗದೀಶ ವಕೀಲ, ಬಸವರಾಜ ಕರ್ನಿ, ಸೈಯ್ಯದ್ ಆಸೀಫ್, ತಿಮ್ಮಣ್ಣ ರಾಮತ್ನಾಳ, ರಫಿ ಕುನ್ನಟಗಿ, ವಿರೂಪಾಕ್ಷಿ ಸಾಸಲಮರಿ ಇದ್ದರು.