ಮಳೆ ಬಂದಾಗ ರೈಲ್ವೆ ಅಂಡರ್ ಪಾಸ್‌ ಜಾಲಾವೃತ

KannadaprabhaNewsNetwork |  
Published : May 23, 2025, 12:10 AM IST
20ಕೆಬಿಪಿಟಿ.2.ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದ ಬಳಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಚಿತ್ರ. | Kannada Prabha

ಸಾರಾಂಶ

ಅಂಡರ್ ಪಾಸ್‌ಗಳ ಕೆಳಗೆ 4ರಿಂದ 5 ಅಡಿ ನೀರು ನಿಲ್ಲುವುದರಿಂದ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಅವೈಜ್ಙಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್‌ಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಫಲವಿಲ್ಲ, ಪ್ರತಿಭಟನೆ ಮಾಡಿದರೂ ಕಿವಿಗೊಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೇ ಅಂಡರ್‌ಪಾಸ್‌ಗಳು ಮಳೆ ಬಂದಾಗ ಕೆರೆಯಂತಾಗುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರೈಲ್ವೆ ಇಲಾಖೆ ವಿಫಲವಾಗಿದ್ದು ಮಳೆಗಾಲದಲ್ಲಿ ಅಂಡರ್ ಪಾಸ್‌ಗಳಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ. ಪ್ರತಿ ವರ್ಷ ಮುಂಗಾರು ಮಳೆ ಪ್ರಾರಂಭವಾದರೆ ತಾಲೂಕಿನಲ್ಲಿ ಕೆಲವು ಕಡೆ ನಿರ್ಮಾಣ ಮಾಡಿರುವ ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಮಾಡದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಾಹನಸವಾರರು ಪರದಾಡುವಂತಾಗಿದೆ. ರೈಲ್ವೆ ಇಲಾಖೆಯೂ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸುತ್ತಿಲ್ಲ.

4-5 ಅಡಿ ನೀರು ಸಂಗ್ರಹ

ಅಂಡರ್ ಪಾಸ್‌ಗಳ ಕೆಳಗೆ 4ರಿಂದ 5 ಅಡಿ ನೀರು ನಿಲ್ಲುವುದರಿಂದ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಅವೈಜ್ಙಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್‌ಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಫಲವಿಲ್ಲ, ಪ್ರತಿಭಟನೆ ಮಾಡಿದರೂ ಕಿವಿಗೊಡುತ್ತಿಲ್ಲ. ರೈತ ಸಂಘದ ನಾಯಕರು ನಿರಂತರವಾಗಿ ಅವೈಜ್ಞಾನಿಕ ಅಂಡರ್‌ಪಾಸ್ಗಳ ವಿರುದ್ದ ಹೋರಾಟ ಮಾಡಿದ್ದರಿಂದ ಶಾಶ್ವತ ಪರಿಹಾರ ಕಲ್ಪಿಸುವ ಬದಲು ಆಕಾಶಕ್ಕೆ ಚಪ್ಪರ ಹಾಕಿದಂತೆ ಕೋಟ್ಯತರ ರುಪಾಯಿ ವೆಚ್ಚ ಮಾಡಿ ಅಂಡರ್‌ಪಾಸ್‌ಗಳಿಗೆ ಸೀಟಿನ ಹೊದಿಕೆ ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಸಮಸ್ಯೆ ಮಾತ್ರ ನೀಗಿಲ್ಲ, ಈಗಲೂ ಮಳೆ ಬಂದರೆ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲುತ್ತದೆ, ನೀರಿನ ಜೊತೆ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಅಂಡರ್ ಪಾಸ್‌ಗಳ ಒಳಗೆ ತ್ಯಜ್ಯ ಸಂಗ್ರಹದ ಗೂಡಾಗಿದೆ. ಇದರಿಂದ ಲಕ್ಷಾಂತರ ರು.ಗಳ ಬಂಡವಾಳ ಹಾಕಿ ಬೆಳೆದ ರೈತರು ತರಕಾರಿ ಸೇರಿದಂತೆ ಇತರೇ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅಡ್ಡಿಯಾಗಿದೆ. ಮತ್ತೊಂದು ಕಡೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಸಮಯಕ್ಕೆ ಹೋಗಲಾಗದೆ ರೈಲ್ವೆ ಅಧಿಕಾರಿಗಳಿಗೆ ಶಾಪ ಹಾಕುವಂತಾಗಿದೆ. ಸಂಸದ ಎಂ.ಮಲ್ಲೇಶಬಾಬು ಅವೈಜ್ಙಾನಿಕ ಅಂಡರ್ ಪಾಸ್‌ಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಲೋಕಸಭೆಯಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗುವರೆ ಕಾದು ನೋಡಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ