ಪಟಾಕಿ ವ್ಯಾಪಾರಸ್ಥರ ನಿರೀಕ್ಷೆಗೆ ಮಳೆ ತಣ್ಣೀರು

KannadaprabhaNewsNetwork |  
Published : Oct 25, 2025, 01:00 AM IST
ಹೊನ್ನಾಳಿ ಫೋಟೋ 24ಎಚ್.ಎಲ್.ಐ2। ದೀಪಾವಳಿ ಹಬ್ಬದ ಅಂಗವಾವಾಗಿ ಪಟ್ಟಣದ ಪಟ್ಟಣಶೆಟ್ಟಿ ಲೇ ಔಟ್ ಪ್ರದೇಶದಲ್ಲಿ ಹಾಕಲಾಗಿದ್ದ ಹಲವಾರು ಪಟಾಕಿ ಅಂಗಡಿಗಳು   ವರುಣನ  ಅರ್ಭಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರುಗಳು ಅಂಗಡಿಗಳತ್ತ ಸುಳಿಯದೇ ವ್ಯಾಪಾರಸ್ಥರು ಭ್ರಮನಿರಸನಕ್ಕೊಳಗಾಗುವ ಪರಿಸ್ಥಿತಿ ಎದುರಿಸಿದರು.  .     | Kannada Prabha

ಸಾರಾಂಶ

ಬೆಳಕಿನ ಹಬ್ಬ ದೀವಾವಳಿ ಎಂದರೆ ತಕ್ಷಣಕ್ಕೆ ನೆನಪಾಗುವುದು ಬಣ್ಣಬಣ್ಣದ ಪಟಾಕಿಗಳು. ದೀಪಾವಳಿ ಹಬ್ಬ ಬರುತ್ತಿದ್ದಂತೆ ಪಟಾಕಿ ವ್ಯಾಪಾರಿಗಳು ಕೂಡ ಉತ್ತಮ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಎಡಬಿಡದೇ ಸುರಿದ ಮಳೆಯಿಂದ ನಿರೀಕ್ಷಿತ ವ್ಯಾಪಾರವಾಗದೆ ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬೆಳಕಿನ ಹಬ್ಬ ದೀವಾವಳಿ ಎಂದರೆ ತಕ್ಷಣಕ್ಕೆ ನೆನಪಾಗುವುದು ಬಣ್ಣಬಣ್ಣದ ಪಟಾಕಿಗಳು. ದೀಪಾವಳಿ ಹಬ್ಬ ಬರುತ್ತಿದ್ದಂತೆ ಪಟಾಕಿ ವ್ಯಾಪಾರಿಗಳು ಕೂಡ ಉತ್ತಮ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಎಡಬಿಡದೇ ಸುರಿದ ಮಳೆಯಿಂದ ನಿರೀಕ್ಷಿತ ವ್ಯಾಪಾರವಾಗದೆ ಕಂಗಾಲಾಗಿದ್ದಾರೆ.

ತಾಲೂಕು ಅಡಳಿತ ಸೂಚಿಸಿದ ಸ್ಥಳಗಳಲ್ಲಿ ಸರ್ಕಾರದ ಮಾರ್ಗಸೂಚಿಗಳಂತೆ ಪಟಾಕಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದರು. ಈ ಬಾರಿ ಕೂಡ ಸೋಮವಾರದಿಂದಲೇ ಪಟ್ಟಣದ ಶೆಟ್ಟಿ ಲೇಔಟ್‌ನಲ್ಲಿ ಸ್ಥಳೀಯ ಹಲವಾರು ಜನ ಪಟಾಕಿ ವ್ಯಾಪಾರಸ್ಥರು ಅಂಗಡಿಗಳನ್ನು ಹಾಕಿಕೊಂಡು ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದರು.

ಆದರೆ ಹಬ್ಬದ ಆರಂಭದಿಂದ ಅಂದರೆ ಸೋಮವಾರ ಸಂಜೆಯಿಂದಲೇ ಪಟ್ಟಣ ಹಾಗೂ ಸುತ್ತಮುತ್ತಲು ವಿಪರೀತ ಮಳೆಯಿಂದಾಗಿ ನಿರೀಕ್ಷಿತ ವ್ಯಾಪರವಾಗಲಿಲ್ಲ ಎಂದು ಪಟಾಕಿ ವ್ಯಾಪಾರಿ ದೀಪಕ್ ದುಮ್ಮಿ ಅಳಲು ತೋಡಿಕೊಂಡರು.

ಸುರಿಯವ ಮಳೆಯ ಕಾರಣ ಹೊನ್ನಾಳಿ ಸುತ್ತಮುತ್ತಲ ಗ್ರಾಮಗಳಿಂದ ಪೇಟೆಗೆ ಬರುವವರ ಸಂಖ್ಯೆ ತೀರಾ ಕಡಿಮೆಯಾದರೆ, ಇನ್ನು ಪಟ್ಟಣದಲ್ಲಿರುವವರೇ ಮನೆಯಿಂದ ಮಳೆಯಲ್ಲಿ ಪಟಾಕಿ ಅಂಗಡಿಗಳ ತನಕ ಬರುವಲ್ಲಿ ಹಿಂದೇಟು ಹಾಕಿದ್ದಾರೆ. ಈ ಮಳೆಯಲ್ಲಿ ಇನ್ನೇನು ಪಟಾಕಿ ಹೊಡೆಯುವುದು, ಪಟಾಕಿಗಳನ್ನು ಖರೀದಿಸಿ ತಂದರೂ ಅವುಗಳನ್ನು ಹೊಡೆಯಲು ಸುರಿಯುತ್ತಿರುವ ಮಳೆ ಅಡ್ಡಿಯಾಗಿರುವ ಕಾರಣಗಳಿಂದ ಸಾಕಷ್ಟು ಜನ ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಖರೀದಿಸಲಿಲ್ಲ. ಉತ್ತಮ ವ್ಯಾಪಾರದ ನಿರೀಕ್ಷೆಯಿಂದ ಪಟಾಕಿ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕಾಗಿ ಕಾದು ಕುಳಿತಿದ್ದ ಪಟಾಕಿ ವ್ಯಾಪಾರಸ್ಥರಿಗೆ ಸಿಕ್ಕಿದು ನಿರಾಶೆ ಮಾತ್ರ, ಹಾಕಿದ ಬಂಡವಾಳ ಕೂಡ ವಾಪಾಸ್ ಬಾರದೇ ಈ ಬಾರಿಯ ಪಟಾಕಿಗಳ ವಹಿವಾಟು ವ್ಯಾಪಾರಸ್ಥರಿಗೆ ನಿರಾಸೆ ತರುವಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಮಳೆ ಸ್ವಲ್ಪ ಬಿಡುವು ನೀಡಿದಾಗ ಅಂಗಡಿಗಳ ಕಡೆಗೆ ಬಂದ ಗ್ರಾಹಕರು ಕೇವಲ ಸುರ್ ಸುರ್ ಬತ್ತಿ, ಫ್ಲ ವರ್ ಪಾಟ್, ಭೂ ಚಕ್ರಗಳನ್ನಷ್ಟೇ ಖರೀಸಿದರು. ಅದರೆ ಢಂ ಎಂದು ಶಬ್ದಮಾಡುವ ಲಕ್ಷ್ಮಿ ಪಟಾಕಿ, ಆನೇ ಪಟಾಕಿಗಳನ್ನು ಖರೀದಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಮಂಗಳವಾರ ಸಂಜೆ ಅಂಗಡಿ ಪೂಜೆ ಮಾಡುವವರು ಅಲ್ಪಸ್ವಲ್ಪ ಇಂತಹ ಪಟಾಕಿಗಳನ್ನು ಖರೀದಿಸಿದ್ದು ಬಿಟ್ಟರೆ ಮನೆಗಳಿಂದ ಬಂದ ಗಿರಾಕಿಗಳು ಕೇವಲ ಶಬ್ದ ಮಾಡದ ಪಟಾಕಿಗಳನ್ನು ಖರೀದಿಸಿದ್ದಾರೆ ಎಂದು ದೀಪಕ್ ದುಮ್ಮಿ ಹೇಳಿದರು

ಈ ಬಾರಿ ಮಳೆಯ ಕಾರಣದಿಂದಾಗಿ ಪಟಾಕಿ ವ್ಯಾಪಾರಕ್ಕೆ ಗ್ರಹಣ ಹಿಡಿದಂತಾಗಿ ಪಟಾಕಿ ವ್ಯಾಪಾರಸ್ಥರ ವ್ಯಾಪಾರದ ನಿರೀಕ್ಷೆ ಕೂಡ ಮಳೆ ನೀರಿನಂತೆ ಕೊಚ್ಚಿಹೋದಂತಾಗಿದೆ.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ