ಮಳೆ: ಮುಸುಕಿನ ಜೋಳ, ಹುರುಳಿಗೆ ಬಿತ್ತನೆಗೆ ಸಹಕಾರಿ

KannadaprabhaNewsNetwork |  
Published : Sep 20, 2025, 01:00 AM IST
19ಜಿಪಿಟಿ3ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಳೆ. | Kannada Prabha

ಸಾರಾಂಶ

ಬೆಳವಣಿಗೆ ಹಂತದ ಮುಸುಕಿನ ಜೋಳದ ಜೊತೆಗೆ ಹುರುಳಿ ಬಿತ್ತನೆ ಶುರುವಾಗಿದ್ದು, ಹುರುಳಿ ಬಿತ್ತನೆಗೂ ಈ ದಿಢೀರ್‌ ಮಳೆ ಬೇಕಿತ್ತು, ಸದ್ಯ ಮಳೆ ಬಂತಲ್ಲ ಎಂಬ ಖುಷಿಯಲ್ಲಿ ಹುರುಳಿ ಬಿತ್ತನೆ ಮಾಡುವ ರೈತರಿಗೂ ಕೈ ಹಿಡಿದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೆಳವಣಿಗೆ ಹಂತದ ಮುಸುಕಿನ ಜೋಳ ಹಾಗೂ ಹುರುಳಿ ಬಿತ್ತನೆಗೆ ಶುಕ್ರವಾರ ದಿಢೀರನೇ ಸಾಧಾರಣ ಮಳೆ ಸುರಿದು ಅನುಕೂಲ ಮಾಡಿಕೊಟ್ಟಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.ಬೆಳವಣಿಗೆ ಹಂತದ ಮುಸುಕಿನ ಜೋಳದ ಜೊತೆಗೆ ಹುರುಳಿ ಬಿತ್ತನೆ ಶುರುವಾಗಿದ್ದು, ಹುರುಳಿ ಬಿತ್ತನೆಗೂ ಈ ದಿಢೀರ್‌ ಮಳೆ ಬೇಕಿತ್ತು, ಸದ್ಯ ಮಳೆ ಬಂತಲ್ಲ ಎಂಬ ಖುಷಿಯಲ್ಲಿ ಹುರುಳಿ ಬಿತ್ತನೆ ಮಾಡುವ ರೈತರಿಗೂ ಕೈ ಹಿಡಿದಿದೆ.

ಕೃಷಿ ಸಹಾಯಕ ನಿರ್ದೇಶಕ ಎಸ್.ಶಶಿಧರ್‌ ಮಳೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ರೈತರಿಗೆ ಮಳೆ ಬೇಕಾಗಿತ್ತು, ಬೆಳವಣಿಗೆ ಹಂತದ ಮುಸುಕಿನ ಜೋಳ ಹಾಗೂ ಹುರುಳಿ ಬಿತ್ತನೆಗೂ ಬೇಕಿತ್ತು ಸದ್ಯ ಮಳೆ ಬಂದಿದೆ. ಬೆಳವಣಿಗೆ ಹಂತದ ಮುಸುಕಿನ ಜೋಳಕ್ಕೆ ತುಂಬಾ ಅನುಕೂಲವಾಗಿದೆ. ಈ ಮಳೆ, ಜೊತೆಗೆ ಹುರುಳಿ ಬಿತ್ತನೆಗೂ ಬೇಕಿತ್ತು. ಅಲ್ಲಲ್ಲಿ ನೆಲಗಡಲೆ ಕಾಯಿ ಕಟ್ಟುವ ಹಂತದಲ್ಲಿದ್ದು ಫಸಲಿಗೂ ಅನುಕೂಲ ಎಂದರು.

ಸೈಕ್ಲೋನ್‌ ಅಲ್ಲ:

ಶುಕ್ರವಾರ ಸಂಜೆ ತಾಲೂಕಿನ ಬಹುತೇಕ ಕಡೆ ಬಿದ್ದ ಮಳೆ ಸೈಕ್ಲೋನ್‌ ಅಲ್ಲ, ಇದು ಖಂಡಿತ ಮಳೇನೇ ಎಂದು ಹರದನಹಳ್ಳಿ ಕೆವಿಕೆ ಕೃಷಿ ಹವಾಮಾನ ತಜ್ಞ ಡಾ.ರಜತ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಬೇರು ಕೊಳೆ ರೋಗಕ್ಕೆ ಬಸಿಗಾಲುವೆ ಮಾಡಿತಾಲೂಕಿನಲ್ಲಿ ಅರಿಶಿನ ಬೆಳೆಗೆ ಬೇರು ಕೊಳೆ ರೋಗ ಕಾಣಿಸಿಕೊಂಡಿದ್ದು, ಅರಿಶಿನ ಬೆಳೆಯಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಮಾಡಿ ಎಂದು ಹರದನಹಳ್ಳಿ ಕೆವಿಕೆ ಹವಾಮಾನ ತಜ್ಞ ಡಾ.ರಜತ್‌ ಸಲಹೆ ನೀಡಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿ, ಬೇರು ಕೊಳೆ ರೋಗ ನೀರು ಹೆಚ್ಚಾದರೆ ಬರುತ್ತೇ? ನೀರು ಹೆಚ್ಚಾಗಿದ್ದರೆ ಬಸಿ ಗಾಲುವೆ ಮಾಡಬೇಕು. ಬೇರು ಕೊಳೆ ರೋಗಕ್ಕೆ ಡೈಕ್ರೋಡ್ರಮ್‌ ಅಥವಾ ಸೈಕೋಮನಸ್‌ ಬಳಸಿ ಎಂದು ರೈತರಿಗೆ ಹೇಳಿದ್ದಾರೆ.

-----------

19ಜಿಪಿಟಿ3ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಳೆ.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ