ಕಾರವಾರ: ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕನ್ನಡದ ವಿವಿಧೆಡೆ ಮಳೆ ತಂಪೆರೆಯುತ್ತಿದೆ. ಶನಿವಾರ ಹಾಗೂ ಭಾನುವಾರ ಜಿಲ್ಲೆಯ ಕೆಲವೆಡೆ ಭಾರಿ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ. ಕರಾವಳಿ ಜನತೆ ಮಳೆಗಾಗಿ ಮುಗಿಲಿನತ್ತ ನೋಡುತ್ತಿದ್ದಾರೆ.ಶಿರಸಿ, ಮುಂಡಗೋಡ, ಹಳಿಯಾಳ, ಜೋಯಿಡಾ, ಸಿದ್ದಾಪುರದ ಕೆಲವೆಡೆ, ಯಲ್ಲಾಪುರಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಭಾನುವಾರ ಶಿರಸಿ ಮತ್ತೆ ತೊಯ್ದು ತೊಪ್ಪೆಯಾಗಿದೆ. ಕರಾವಳಿಯಲ್ಲಿ ಮಾತ್ರ ಮಳೆಯಾಗಿಲ್ಲ.
ಕರಾವಳಿ ಅಕ್ಷರಶಃ ಕಾಯುತ್ತಿದೆ. ಆರ್ದ್ರತೆಯ ಪ್ರಮಾಣ ಹೆಚ್ಚಿರುವುದರಿಂದ ಸೆಕೆ, ಜೊತೆಯಲ್ಲಿ ಬೆವರೂ ಹರಿಯುತ್ತಿದೆ. ಮಳೆ ಬಂದರೆ ಸಾಕು ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.
ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ನೀರಿನ ಬರ ತೀವ್ರವಾಗಿದೆ. ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದಾರೆ. ಇನ್ನು ಜಾನುವಾರುಗಳಿಗೆ ನೀರುಣಿಸುವುದು ಒಂದು ಸವಾಲಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ. ಹಲವೆಡೆ ಅಡಕೆ ತೋಟಗಳಿಗೆ ನೀರುಣಿಸಲಾರದೆ ಕೃಷಿಕರು ಕಂಗೆಟ್ಟಿದ್ದಾರೆ. ಅಡಕೆ ಮರಗಳು ಒಣಗಿದರೆ ಮತ್ತೆ ಹೊಸದಾಗಿ ಅಡಕೆ ಮರಗಳನ್ನು ನೆಟ್ಟು ಫಸಲು ಬಿಡಲು 6- 7 ವರ್ಷಗಳ ತನಕ ಕಾಯಬೇಕು. ಇದರ ಜತೆ ತೆಂಗು, ಬಾಳೆ ಮತ್ತಿತರ ಬೆಳೆಗಳನ್ನೂ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಸದ್ಯ ಮಳೆ ಬಂದಲ್ಲಿ ಅಡಕೆ ತೋಟಗಳಿಗೆ ಸಮಸ್ಯೆಯಾಗದು. ಆದರೆ ಮಳೆಯಾಗದ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಮೋಡ ಕವಿದ ವಾತಾವರಣ, ಆಗಾಗ ಗುಡುಗು, ಮಿಂಚುಗಳ ಅಬ್ಬರದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿಕರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.ಜಿಲ್ಲೆಯ ಎಲ್ಲೆಡೆ ಮುಂಗಾರು ಪೂರ್ವ ಮಳೆಯಾದರೆ ಮಾತ್ರ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಅಡಕೆ, ತೆಂಗಿನ ತೋಟಗಳಿಗೆ ನೀರುಣಿಸುವ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದಲ್ಲಿ ಕೃಷಿಕರ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ.
ಶಿರಸಿ: ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನತೆಗೆ ಭಾನುವಾರ ಸುರಿದ ಮಳೆ ತಂಪೆರೆದಿದೆ.
ಮೋಡ ಕವಿದ ವಾತಾವರಣ: