ಕೊಡಗು ಜಿಲ್ಲೆಯ ವಿವಿಧೆಡೆ ಮಳೆ

KannadaprabhaNewsNetwork |  
Published : Feb 26, 2026, 02:45 AM IST
ಚಿತ್ರ :  25ಎಂಡಿಕೆ3 : ವಿರಾಜಪೇಟೆಯಲ್ಲಿ ಮಳೆಯಿಂದ ಒಣಗಿಸಲು ಹಾಕಿದ್ದ ಕಾಫಿ ಒದ್ದೆಯಾಗಿರುವುದು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಕೆಲ ಕಾಲ ಮಳೆಯಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಕೆಲ ಕಾಲ ಮಳೆಯಾಯಿತು. ಜಿಲ್ಲೆಯ ವಿರಾಜಪೇಟೆ, ಅಮ್ಮತ್ತಿ, ಮೂರ್ನಾಡು, ಕಿಗ್ಗಾಲು, ದೊಡ್ಡಪುಲಿಕೋಟು, ಕುಂಜಿಲ ಕಕ್ಕಬೆ, ಕಾಕೋಟುಪರಂಬು, ಬಲ್ಲಮಾವಟಿ, ಕುಟ್ಟಂದಿ, ಚೆಟ್ಟಳ್ಳಿ, ಪಾಲಿಬೆಟ್ಟ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆಯಾಯಿತು. ದಿಢೀರ್ ಸುರಿದ ಮಳೆಯಿಂದಾಗಿ ಒಣಗಿಸಲು ಇಟ್ಟಿದ್ದ ಕಾಫಿ ಫಸಲು ಕೊಚ್ಚಿ ಹೋಯಿತು. ಇದರಿಂದ ಬೆಳೆಗಾರರು ಪರದಾಡುವಂತಾಯಿತು.

ಬೇಸಿಗೆ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಸ್ಪ್ರಿಕ್ಲರ್ ಗಳ ಮೂಲಕ ಕಾಫಿ ತೋಟಗಳಿಗೆ ನೀರು ಸಿಂಪಡಿಸಲಾಗುತ್ತಿದೆ. ಆದರೆ ಕೆಲವು ಕಡೆ ಮಾತ್ರ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು, ಬಹುತೇಕ ಬೆಳೆಗಾರರು ಇದೀಗ ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ರೈತರಿಗೆ ಇ-ಕೆವೈಸಿ ಮಾಡುವಂತೆ ಸೂಚನೆ

ಮಡಿಕೇರಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಪಿಎಂ-ಕಿಸಾನ್, ಬರಪರಿಹಾರ, ಬೆಂಬಲ ಬೆಲೆ ಹಾಗೂ ಇತರೆ ಯೋಜನೆಗಳ ಪ್ರಯೋಜನ ಪಡೆಯಲು ಕೇಂದ್ರ ಸರ್ಕಾರ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ಸೃಜಿಸುತ್ತಿದೆ.ಸೆಂಟ್ರಲ್ ಐಡಿ ರಚನೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡಿಸುವುದು ಅವಶ್ಯಕವಾಗಿರುತ್ತದೆ. ಜಮೀನಿನ ಆರ್‌ಟಿಸಿಗಳನ್ನು ಎಫ್‌ಐಡಿಗೆ ಸೇರ್ಪಡೆಗೊಳಿಸಿ ಡಿಜಿಜಟಲ್ ಕನ್ಸೆಂಟ್ ನೀಡಬೇಕಿದೆ. ಆದ್ದರಿಂದ ರೈತರು ಆಧಾರ್ ಕಾರ್ಡ್, ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ಜಮೀನಿನ ವಿವರಗಳೊಂದಿಗೆ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಅಥವಾ ಹತ್ತಿರದ ಕೃಷಿ/ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಬಾಲ್ಯದಲ್ಲೇ ಮಾನವೀಯತೆ ಕಲಿಸಿ: ವಿಜಯಾನಂದ ಕಾಶಪ್ಪನವರ
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಶಾಸಕಿ ಎಂ.ಪಿ.ಲತಾ