ಅರಹತೊಳಲು ಕೆ.ರಂಗನಾಥ
ಕಳೆದ ಏ.26ರಂದು ಸುರಿದ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆಯಿಂದ ತಮ್ಮ ಜೀವನಾಧಾರವಾಗಿದ್ದ ಅಡಕೆ ತೋಟವನ್ನು ಕಳೆದುಕೊಂಡ ರೈತರಿಗೆ ಸಿಗಬೇಕಾದ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಗಾಳಿ ಮಳೆಯಿಂದ ಆದ ಅನಾಹುತ ಹೊಳೆಹೊನ್ನೂರು ಮತ್ತು ಆನವೇರಿ ಭಾಗದ ಅಡಕೆ ಬೆಳೆಗಾರರ ಬದುಕನ್ನೇ ಬರಡು ಮಾಡಿದೆ. ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ಅಡಕೆ ಮತ್ತು ತೆಂಗಿನ ಮರಗಳು ನೆಲಕ್ಕುರುಳಿದವು. ಇನ್ನೇನು ನಮ್ಮ ಜೀವನವೇ ಕಳೆದುಹೋಯಿತು ಅಂದುಕೊಂಡಿದ್ದ ರೈತರಿಗೆ ಸರ್ಕಾರದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಾಂತ್ವನ ಹೇಳಿ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಪರಿಹಾರವೂ ದೊರೆತಿಲ್ಲ. ಜೊತೆಗೆ ಪರಿಹಾರದ ಪ್ರಮಾಣವೂ ತಿಳಿಯದೆ ರೈತರು ಗೊಂದಲದಲ್ಲಿದ್ದಾರೆ.ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್) ನಿಯಮಾವಳಿಗಳ ಪ್ರಕಾರ ಅಡಕೆ ಮರಗಳಿಗೆ ಪ್ರತ್ಯೇಕ ಮರ ಎಂದು ಪರಿಹಾರ ಇರುವುದಿಲ್ಲ. ಬದಲಿಗೆ ಅಡಕೆಯನ್ನು ‘ದೀರ್ಘಾವಧಿ ಬೆಳೆ/ತೋಟಗಾರಿಕೆ ಬೆಳೆ’ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಒಂದು ಹೆಕ್ಟೇರ್‌ಗೆ 31 ಸಾವಿರ ರು. ವರೆಗೆ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ 22500 ರು., ರಾಜ್ಯ ಸರ್ಕಾರದ 8500 ರು. ಸಹಾಯಧನ ಸೇರಿರುತ್ತದೆ.
1.ಈ ಪರಿಹಾರವು ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗಿರುತ್ತದೆ.
3.ಮಳೆಯಿಂದ ಉಂಟಾಗುವ ಕೊಳೆರೋಗ ಅಥವಾ ಗಾಳಿ ಮಳೆಯಿಂದ ಮರಬಿದ್ದು ನಷ್ಟವಾಗಿದ್ದರೆ ಈ ಪರಿಹಾರ ಅನ್ವಯಿಸುತ್ತದೆ.
ರೈತರಿಗೆ ಆರ್ಥಿಕ ಹೊರೆ:
ನೂರಾರು ಮರ ಕತ್ತರಿಸುವ ಮಿಷಿನ್ ಖರೀದಿ:
ದುಡಿಯುವ ಮಗನಂತಿದ್ದ ಫಸಲಿಗೆ ಬಂದಿದ್ದ ಅಡಕೆ ತೋಟಗಳನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರದ ನೆರವಿನ ಅಗತ್ಯವಿದೆ. ಆದರೆ ಸುಮಾರು 50 ವರ್ಷಗಳ ಹಿಂದಿನ ನಿಯಮಗಳನ್ನು ಮರು ಪರಿಶೀಲಿಸಬೇಕು. ಪ್ರಸ್ತುತ ಆಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ವೈಜ್ಞಾನಿಕವಾದ ಪರಿಹಾರ ನೀಡಬೇಕು.
ಈಗಾಗಲೇ ಸಾವಿರಾರು ಅಡಕೆ, ತೆಂಗಿನ ಮರಗಳನ್ನು ಕತ್ತರಿಸಲಾಗಿದೆ. ಇನ್ನೂ ಕೂಡ ಬಹಾಳ ಮರಗಳನ್ನು ಕತ್ತರಿಸುವುದು ಬಾಕಿ ಇದೆ. ನನ್ನ ಹಾಗೆಯೇ ಬಹಳಷ್ಟು ಜನರು ಹೊಸ ಮರ ಕತ್ತರಿಸುವ ಯಂತ್ರವನ್ನು ತಂದಿದ್ದಾರೆ. ಒಂದೊಂದು ಗ್ರಾಮದಲ್ಲಿ 15 ರಿಂದ 20 ಹೊಸ ಯಂತ್ರ ತಂದಿದ್ದಾರೆ.
ಚೌಡಪ್ಪ ಕಾರ್ಮಿಕ, ಚಂದನಕೆರೆ.