ಡಿಸೆಂಬರ್‌ವರೆಗೂ ಮಳೆ ಕೊರತೆ ಸಂಭವ: ಭೂ ವಿಜ್ಞಾನಿ ಆತಂಕ

KannadaprabhaNewsNetwork |  
Published : Jun 29, 2026, 02:45 AM IST
ಮುಂಗಾರು ಮಳೆ ಕೊರತೆ | Kannada Prabha

ಸಾರಾಂಶ

2026ರ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಭೂ ವಿಜ್ಞಾನಿ ಹೆಚ್ ಎಂ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ: 2026ರ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಭೂ ವಿಜ್ಞಾನಿ ಹೆಚ್ ಎಂ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಭಾರತ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಆವಿಯ ಮೂಲಗಳಾದ ಜ್ವಾಲಾಮುಖಿಗಳ ಚಟುವಟಿಕೆಗಳು ಇಳಿಮುಖವಾಗಿದೆ. ಆ ಕಾರಣದಿಂದ ಮುಂದಿನ ಆರು ತಿಂಗಳ ಕಾಲ ಮುನ್ಸೂಚನೆ ವರದಿಗಳ ಅಧ್ಯಯನದಿಂದ ಮಳೆಯ ಕೊರತೆ ಕಂಡುಬರುತ್ತದೆ. ಮುಂದಿನ ಆರು ತಿಂಗಳ ಕಾಲ ಚಟುವಟಿಕೆಗಳ ಮುನ್ಸೂಚನೆ ವರದಿಗಳ ಅಧ್ಯಯನ ಮೂಲಕ ಬಂದ ಅಂಶ ಗಳ ಪ್ರಕಾರ ಈ ವರ್ಷದ ಡಿಸೆಂಬರ್ ತಿಂಗಳ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಎಲ್ ನಿನೋ ಪರಿಸ್ಥಿತಿಗೂ ಸಹ ಸಮುದ್ರದ ಒಳಭಾಗದಲ್ಲಿ ಭೀಕರ ಜ್ವಾಲಾಮುಖಿಗಳು ಕಾರಣ ಎನ್ನುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಈ ಪ್ರಕಾರ ಈ ಬಾರಿ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ 2.10 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ
ಕೆಎಂಸಿ ಕಾಲೇಜು ತಂಡಕ್ಕೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ ೨೦೨೬ ಪ್ರಶಸ್ತಿ