ಹೊನ್ನಾಳಿ ಪಟ್ಟಣದಲ್ಲಿ ಕನ್ನಡಜ್ಯೋತಿ ರಥವನ್ನು ಸ್ವಾಗತಿಸಿದ ಮಳೆ

KannadaprabhaNewsNetwork |  
Published : Oct 26, 2024, 01:02 AM IST
ಹೊನ್ನಾಳಿ ಫೋಟೋ 25ಎಚ್.ಎಲ್ಐ2. ಶುಕ್ರವಾರ ಸಂಜೆ ತಡವಾಗಿ ಹೊನ್ನಾಳಿ ಪಟ್ಟಣದ ಟಿ.ಬಿ.ವೃತ್ತಕ್ಕೆ ಕನ್ನಡ ತಾಯಿ ಭುವನೇಶ್ವರಿ ರಥ ಅಗಮಿಸಿದ ಸಂದರ್ಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅವರು ಮಾಲಾರ್ಪಣೆ ಪೂಜೆ ಮಾಡುವ ಮೂಲಕ ಕನ್ನಡ ರಥವನ್ನು ಸ್ವಾಗತಿಸಿ ನಂತರ ಮೆರವಣಿಗೆ ನಡೆಸಲಾಯಿತು. ಎ ಸಿ. ಅಭಿಶೇಕ್, ತಹಸೀಲ್ದಾರ್ ಪಟ್ಟರಾಜಗೌಡ ಸೇರಿದಂತೆ ತಾಲೂಕಿನ ಅಧಿಕಾರಿಗಳು, ಕ.ಸಾ.ಪ ಅಧ್ಕ್ಷಕ್ಷರು, ಪದಾಧಿಕಾರಿಗಳು, ಕನ್ನಡ ಪುರ ಸಂಘಟನೆಗಳು ಉಪಸ್ಥಿತರಿದ್ದರು. . | Kannada Prabha

ಸಾರಾಂಶ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿ ಹೊತ್ತ ಭವನೇಶ್ವರಿ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ಮಧ್ಯಾಹ್ನ ಹೊನ್ನಾಳಿ ಪಟ್ಟಣದಲ್ಲಿ ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಯಿತು.

- ಸುರಿವ ಮಳೆಯಲ್ಲೇ ಭುವನೇಶ್ವರಿ ಮೆರವಣಿಗೆ, ಶಾಸಕರ ನೇತೃತ್ವ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿ ಹೊತ್ತ ಭವನೇಶ್ವರಿ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ಮಧ್ಯಾಹ್ನ ಹೊನ್ನಾಳಿ ಪಟ್ಟಣದಲ್ಲಿ ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಯಿತು.

ಚನ್ನಗಿರಿ ತಾಲೂಕಿನಿಂದ ಸಂಜೆ ವೇಳೆಗೆ ರಥ ಆಗಮಿಸಿತು. ಈ ವೇಳೆ ಟಿ.ಬಿ. ವೃತ್ತದ ಬಳಿ ರಥ ಹಾಗೂ ಭುವನೇಶ್ವರಿ ತಾಯಿಗೆ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಬೃಹತ್ ಪುಷ್ಪಹಾರ ಸಮರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.

ಸಕ್ಕರೆಯ ನಾಡು ಮಂಡ್ಯದಲ್ಲಿ 2024ರ ಡಿ.20 ಮೂರು ದಿನಗಳ ಕಾಲ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುಲಿದೆ. ಇದು ಕನ್ನಡ ನಾಡು-ನುಡಿ ಹಬ್ಬವಾಗಿದೆ. ಹಾವೇರಿ ಮೂಲಕ ರಥವು ಜಿಲ್ಲೆಯ ಜಗಳೂರು, ಹರಿಹರ, ಶುಕ್ರವಾರ ಚನ್ನಗಿರಿಗೆ ಆಗಮಿಸಿತ್ತು. ಹೊನ್ನಾಳಿಯಿಂದ ಲಕ ನ್ಯಾಮತಿ ಮೂಲಕ ರಥವು ಶಿಕಾರಿಪುರಕ್ಕೆ ತೆರಳಿದೆ ಎಂದರು.

ಕನ್ನಡ ರಥವು ಚನ್ನಗಿರಿಯಿಂದ ಸಾಕಷ್ಟು ತಡವಾಗಿ ಆಗಮಿಸಿತಲ್ಲದೇ, ಮಳೆ ಆರಂಭವಾಗಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಶಾಲೆ ವಿದ್ಯಾರ್ಥಿಗಳನ್ನು ಮುಂಜಾಗ್ರತೆಯಾಗಿ ಮನೆಗಳಿಗೆ ಕಳಿಸಲಾಯಿತು. ಮಳೆ ಹಿನ್ನೆಲೆ ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಒ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮುರುಗೆಪ್ಪ ಗೌಡ ಮತ್ತು ಪದಾಧಿಕಾರಿಗಳು, ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಮುಖ್ಯಾಧಿಕಾರಿ, ಟಿ.ಲೀಲಾವತಿ, ಬಿಇಒ ನಿಂಗಪ್ಸ, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ಯುವಶಕ್ತಿ ಒಕ್ಕೂಟ ಪದಾಧಿಕಾರಿಗಳು ಭಾಷಣ ಮಾಡಲಿಲ್ಲ.

ಭಕ್ತಿಯಿಂದ ರಥ ಮತ್ತು ತಾಯಿ ಭುವನೇಶ್ವರಿಗೆ ಅಧಿಕಾರಿಗಳು ಮಾಲಾರ್ಪಣೆ ಮಾಡಿ, ಜೈಕಾರ ಕೂಗಿದರು. ಟಿ.ಬಿ.ವೃತ್ತದ ಕನಕದಾಸ ಪ್ರತಿಮೆ ಶಾಸಕ ಡಿ.ಜಿ.ಶಾಂತನಗೌಡ ಮಾಲಾರ್ಪಣೆ ಮಾಡಿದರು. ಮಳೆಯಲ್ಲಿಯೇ ಶಾಸಕರು ಸೇರಿದಂತೆ ತಾಲೂಕು ಅಧಿಕಾರಿಗಳ ತಂಡ, ಸಂಘಟನೆಗಳು, ಜಾನಪದ ಕಲಾಮೇಳಗಳು ಮೆರವಣಿಗೆಗೆ ಸಾರ್ಥ್ ನೀಡಿದವು. ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ರಥ ಆಗಮಿಸಿದಾಗ ರಾಯಣ್ಣ ಪುತ್ಥಳಿಗೆ ಶಾಸಕರು ಮಾಲಾರ್ಪಣೆ ಮಾಡಿದರು. ಮೆರವಣಿಗೆ ಹಿರೇಕಲ್ಮಠ ಸರ್ಕಲ್ ಮೂಲಕ ಸಾಗಿತು. ಬಳಿಕ ರಥವನ್ನು ನ್ಯಾಮತಿ ತಾಲೂಕಿಗೆ ಬೀಳ್ಕೋಡಲಾಯಿತು.

ಕನ್ನಡಪರ ಸಂಘಟನೆಗಳ ಶ್ರೀನಿವಾಸ್, ಕತ್ತಿಗೆ ನಾಗರಾಜ್, ಮಂಜು, ಮಾಜಿ ಸೈನಿಕ ವಾಸಪ್ಪ, ರೈತ ಸಂಘದ ಮುಖಂಡ ಜಗದೀಶ್, ಸರ್ಕಾರಿ ನೌಕರರು, ಸಾರ್ವಜನಿಕರು ಪಾಲ್ಗೊಂಡಿದ್ದರು.

- - - -25ಎಚ್.ಎಲ್ಐ2:

ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿತ ಕನ್ನಡರಥಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಪೂಜೆ ಸಲ್ಲಿಸಿ, ಸ್ವಾಗತಿಸಿದರು. ಅಧಿಕಾರಿಗಳು, ಕನ್ನಡಾಭಿಮಾನಿಗಳು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ