ತಾಲೂಕು ಬುಕ್ಕಾಪಟ್ಟಣದಲ್ಲಿ ಆಲಿಕಲ್ಲು ಸಹಿತ ದಾಖಲೆಯ ೩೯.೧ ಮಿಮೀ ಮಳೆಯಾಗಿದ್ದು ಮಳೆ ಆರ್ಭಟಕ್ಕೆ ಗಾಳಿ ರಭಸಕ್ಕೆ ಬುಕ್ಕಾಪಟ್ಟಣದಲ್ಲಿ ಮರಗಳು ಧರೆಗುರುಳಿವೆ.
ಕನ್ನಡಪ್ರಭ ವಾರ್ತೆ ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಆಲಿಕಲ್ಲು ಸಹಿತ ದಾಖಲೆಯ ೩೯.೧ ಮಿಮೀ ಮಳೆಯಾಗಿದ್ದು ಮಳೆ ಆರ್ಭಟಕ್ಕೆ ಗಾಳಿ ರಭಸಕ್ಕೆ ಬುಕ್ಕಾಪಟ್ಟಣದಲ್ಲಿ ಮರಗಳು ಧರೆಗುರುಳಿವೆ, ಆಲಿಕಲ್ಲು ಮಳೆಯಿಂದಾಗಿ ಮಾವಿನ ಮರಗಳಿಗೆ ಹಾನಿಯಾಗಿದ್ದು ಅಲ್ಲಲ್ಲಿ ಮುರಿದು ಬಿದ್ದಿವೆ. ಬುಕ್ಕಾಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿದ್ದ ಅರಳಿ ಮರ ಒಂದು ಮುರಿದು ಬಿದ್ದಿದೆ.
ಬುಕ್ಕಾಪಟ್ಟಣದ ವೆಂಕಟರಾಮ ಗೋವಿಂದಪ್ಪ ನವರಿಗೆ ಸೇರಿದ ೩೦ಕ್ಕೂ ಹೆಚ್ಚು ಫಸಲಿಗೆ ಬಂದಿರುವ ಅಡಿಕೆ ಮರಗಳು ಗಾಳಿ ರಭಸಕ್ಕೆ ಮುರಿದುಬಿದ್ದಿದ್ದು ರೈತರು ಕಂಗಾಲಾಗಿದ್ದಾರೆ. ಜೈ ಲಕ್ಷ್ಮಮ್ಮ ಬಿನ್ ನಾಗಣ್ಣ ರವರ ೨೨ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ, ಹೊಸ ಪಾಳ್ಯ ರಂಗನಾಥ್ ರವರ ತೋಟದಲ್ಲಿ ೩೦ಕ್ಕೂ ಹೆಚ್ಚು ತೆಂಗು ಹಾಗೂ ಅಡಿಕೆ ಮರಗಳು ಬಿದ್ದು ಹೋಗಿದ್ದು. ಬುಕ್ಕಾಪಟ್ಟಣದ ಶಿವಕುಮಾರ್ ಬಿನ್ ಪ್ರಕಾಶಪ್ಪನವರ ಜಮೀನಿನ ೫೨ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ. ಹೊಸ ಪಾಳ್ಯದ ಶಿವರಾಮಯ್ಯ ಹೊಸ ಪಾಳ್ಯ ೩ ತೆಂಗಿನ ಮರ ೨೫ ಅಡಿಕೆ ಮರಗಳು ಗಾಳಿ ರಭಸಕ್ಕೆ ಮುರಿದುಬಿದ್ದಿದ್ದರೆ, ಬುಕ್ಕಾಪಟ್ಟಣದ ಮಾರುತಿ ನಗರದ ಬಳಿ ತಾಪಂ ಮಾಜಿ ಅಧ್ಯಕ್ಷ ಬಿಆರ್ ಮಂಜುನಾಥ್ ರವರ ತೋಟದಲ್ಲಿ ತೆಂಗಿನ ಮರವೊಂದು ಗಾಳಿ ರಭಸಕ್ಕೆ ಬಿದ್ದು ಹೋಗಿದೆ. ಇನ್ನೂ ಹೆಚ್ಚಿನ ರೈತರ ಜಮೀನುಗಳಲ್ಲಿ ಅಡಿಕೆ ಹಾಗು ತೆಂಗಿನ ಮರಗಳು ಗಾಳಿ ರಭಸಕ್ಕೆ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಬುಕ್ಕಾಪಟ್ಟಣದ ಪ್ರಭಾರ ಕಂದಾಯ ಅಧಿಕಾರಿ ಪವನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಶ್ವೇತಾ, ಸಹಾಯಕ ತೋಟಗಾರಿಕೆ ಅಧಿಕಾರಿ ಸವಿತಾ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಬುಕ್ಕಾಪಟ್ಟಣದ ಹೊಸಹಳ್ಳಿಯಲ್ಲಿ ಮೂರು ವಿದ್ಯುತ್ ಕಂಬಗಳು ಭಾಗಶಃ ಹಾನಿಯಾಗಿದ್ದು ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ಬುಕ್ಕಾಪಟ್ಟಣ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಬೆಸ್ಕಾಂ ಅಧಿಕಾರಿಗಳು ಜಂಗಲ್ ತೆರವುಗೊಳಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು. ಅಧಿಕಾರಿಗಳು ಇತ್ತ ಗಮನಹರಿಸಿ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕಾಗಿ ಸಾರ್ವಜನಿಕರು ರೈತರು ಮನವಿ ಮಾಡಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.