ಮಳೆಯಾಶ್ರಿತ ಕೃಷಿ ನೀತಿ: ಕೃಷಿ ಭಾಗ್ಯ ಯೋಜನೆ ಅನುಷ್ಠಾನ

KannadaprabhaNewsNetwork |  
Published : Sep 04, 2024, 01:50 AM IST
32 | Kannada Prabha

ಸಾರಾಂಶ

ಮಳೆಯಾಶ್ರಿತ ಕೃಷಿ ನೀತಿ ಯೋಜನೆ ಕುರಿತು ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಸೋಮವಾರಪೇಟೆ ಕಸಬಾ 9108758654, ಶನಿವಾರಸಂತೆ 7760210610, ಕೊಡ್ಲಿಪೇಟೆ 8217723388 , ಶಾಂತಳ್ಳಿ 8310828896 , ಸುಂಟಿಕೊಪ್ಪ 9741963357, ಕುಶಾಲನಗರ 9380895275 ನ್ನು ಸಂಪರ್ಕಿಸಬಹುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ರಸ್ತುತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆ ಹೊಂದಿರುತ್ತದೆ. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಹಾಯಧನ ರೈತರ ವರ್ಗವಾರು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ(ಕೃಷಿ ಹೊಂಡ) ಮತ್ತು ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ (ಗರಿಷ್ಠ 50 ಸಾವಿರ ರು. ) ಸಾಮಾನ್ಯ ರೈತರಿಗೆ ಶೇ. 80, ಪ.ಜಾತಿ/ಪ.ಪಂಗಡ ಶೇ. 90. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಗೆ ಸಾಮಾನ್ಯ ಶೇ. 40, ಪ. ಜಾತಿ/ಪ.ಪಂಗಡಕ್ಕೆ ಶೇ. 50. ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್ ಸೆಟ್‌ಗೆ ಸಾಮಾನ್ಯ ಶೇ. 50, ಪ.ಜಾತಿ/ಪ.ಪಂಗಡ ಶೇ.90 ಹಾಗೂ ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು, ಹನಿ) ನೀರಾವರಿ ಯೋಜನೆಯ ಒಗ್ಗೂಡಿಸುವಿಕೆಯಡಿ ಸಾಮಾನ್ಯ ಶೇ.90 ಮತ್ತು ಪ.ಜಾತಿ/ ಪ.ಪಂಗಡಕ್ಕೆ ಶೇ. 90 ರಷ್ಟು ಸಹಾಯಧನ ಕಲ್ಪಿಸಲಾಗುತ್ತದೆ. ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಒಟ್ಟಾರೆ 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು, ಎಲ್ಲ ಘಟಕಗಳನ್ನು ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ತಪ್ಪದೇ ಅಳವಡಿಸುವುದು.

ಸಹಾಯಧನ ಪಾವತಿ ವಿಧಾನ: ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ ಪೂರ್ಣಗೊಂಡ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳುವ ಬಗ್ಗೆ ರೈತರಿಂದ ದೃಢೀಕರಣ ಪತ್ರ ಪಡೆದುಕೊಂಡು, ಕ್ಷೇತ್ರ ಬದು ಹಾಗೂ ಕೃಷಿಹೊಂಡ ಘಟಕಗಳಿಗೆ ಸಂಬಂಧಿಸಿದ ಒಟ್ಟು ಸಹಾಯಧನದ ಶೇ. 75 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಕೃಷಿಭಾಗ್ಯ ಯೋಜನೆ ಪ್ಯಾಕೇಜ್ ಅಡಿ ಬರುವ ಆರು ಘಟಕಗಳ ಅನುಷ್ಠಾನ ಮತ್ತು ಕೆ- ಕಿಸಾನ್ ಮೊಬೈಲ್ ಆ್ಯಪ್‌ನಲ್ಲಿ ದಾಖಲೀಕರಿಸಿದ ನಂತರ ಉಳಿಕೆ ಶೇ. 25ರಷ್ಟು ಸಹಾಯಧನದ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಸೋಮವಾರಪೇಟೆ ಕಸಬಾ 9108758654, ಶನಿವಾರಸಂತೆ 7760210610, ಕೊಡ್ಲಿಪೇಟೆ 8217723388 , ಶಾಂತಳ್ಳಿ 8310828896 , ಸುಂಟಿಕೊಪ್ಪ 9741963357, ಕುಶಾಲನಗರ 9380895275 ನ್ನು ಸಂಪರ್ಕಿಸಬಹುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ