ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕಿನಲ್ಲಿ ಗಾಳಿ, ಮಳೆಗೆ ಒಂದೆರಡು ಕಡೆಗಳಲ್ಲಿ ಮರಗಳು ನೆಲಕ್ಕೆರುಳಿಬಿದ್ದ ಪರಿಣಾಮ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿ ಬಿದ್ದಿದ್ದರೆ, ಬೇತಮಂಗಲದಲ್ಲಿ ಅಲಿಕಲ್ಲು ಮಳೆ ಮತ್ತು ಗಾಳಿಗೆ ತೆಂಗಿನ ಮರ ಬಿದ್ದಿದೆ.ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಪ್ರಾರಂಭವಾದ ಮಳೆ ತಾಲೂಕಿನ್ಯಾದ್ಯಂತ ೧೦ ಮೀಲಿ ಮೀಟರ್ ಮಳೆಯಾಗಿದೆ, ಇದರಿಂದ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ತಂಪಿನ ವಾತವಾರಣ ಕಂಡು ಬಂತು.ಕೆಜಿಎಫ್‌ನಲ್ಲಿ ಉತ್ತಮ ಮಳೆಮಳೆ ಇಲ್ಲದೆ ನರಳಾಡುತ್ತಿದ್ದ ಕೆಜಿಎಫ್ ಜನರಿಗೆ ಗುರುವಾರ, ಶುಕ್ರವಾರ ಭರ್ಜರಿ ಮಳೆ ಸಂತಸ ತಂದಿದೆ. ಜನರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿರುವ ದಶ್ಯ ಸಾಮಾನ್ಯವಾಗಿತ್ತು. ಒಮ್ಮೊಮ್ಮೆ ಜೋರಾಗಿ, ಮತ್ತೊಮ್ಮೆ ನಿಧಾನವಾಗಿ ಮಳೆ ಸುರಿದು ಭೂಮಿಯನ್ನು ತಂಪು ಮಾಡಿದೆ. ಬೇತಮಂಗಲದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಒಂದು ಗಂಟೆಯ ಬಿಟ್ಟು ಬಿಡದೆ ಮಳೆ ಸುರಿಯಿತು, ಮಳೆಯಿಂದ ಹಳ್ಳಕೊಳ್ಳಗಳಲ್ಲಿ ಮಳೆನೀರು ಹರಿಯುತ್ತಿತ್ತು. ಕಳೆದ ಒಂದು ವಾರದಿಂದ ೩೭ ರಿಂದ ೪೧ ಡಿಗ್ರಿ ಉಷ್ಟಾಂಶ ನಗರದಲ್ಲಿ ದಾಖಲಾಗಿತ್ತು, ಜನರು ಮಳೆ ಬರುತ್ತೋ ಇಲ್ಲವೋ ಎಂದು ಪ್ರತಿ ದಿನ ಆಕಾಶ ಎದುರು ನೋಡುತ್ತಿದ್ದರು.