ಕನ್ನಡಪ್ರಭ ವಾರ್ತೆ ಕಲಬುರಗಿ
ಏತನ್ಮಧ್ಯೆ ಹೀಗೆ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿಯೇ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮಳೆಯ ಮುನ್ಸೂಚನೆ ಪ್ರಕಾರ ಕಲಬುರಗಿಯಲ್ಲಿ ಜೂ.9ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತ ವಿಪತ್ತು ತಂಡವನ್ನು ಸನ್ನದ್ಧವಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ. ಜನ ನದಿ , ಕೆರೆ, ನಾಲಾಗಳಲ್ಲಿ ಸಂಚಾರ ಮಾಡಬಾರದು. ಅದೇನೇ ಕೆಲಸಗಲಿದ್ದರೂ ಮಳೆ ಮುನ್ಸೂಚನೆ ಇರೋ ಕಾರಣ ಇಂತಹ ಸ್ಥಳಗಳಲ್ಲ ಸುಳಿಯದಂತೆ ಸೂಚಿಸಿದೆ.
ಏತನ್ಮಧ್ಯೆ ಶುಕ್ರವಾರ ಹಾಗೂ ಶನಿವಾರ ಸಂಜೆ ಸುರಿದ ಮಳೆಗೆ ಸೇಡಂ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ನೀರು ನುಗ್ಗಿದೆ. ಇದರಿಂದಾಗಿ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತಗೊಂಡು ದಾಖಲೆಗಳನ್ನು ರಕ್ಷಿಸಲು ಪೊಲೀಸ್ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಮಳೆಯ ಅರ್ಭಟಕ್ಕೆ ಠಾಣೆ ಆವರಣ ಮಾತ್ರವಲ್ಲದೇ ಠಾಣೆ ಒಳಗೂ ನೀರು ನುಗ್ಗಿದೆ. ಪೊಲೀಸ್ ಸಿಬ್ಬಂದಿ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಠಾಣೆ ಒಳಗೆ, ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ.
ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ಸೇಡಂ ಪೊಲೀಸ್ ಠಾಣೆ ಜಲಾವೃತವಾಗಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡೋದು ಸಾಮಾನ್ಯವಾಗಿದೆ.
ಸಾರ್ವಜನಿಕರ ಸೇವೆಗಾಗಿ ಶಾಂತಿ ನೆಮ್ಮದಿಗೆ ಮಹತ್ವ ನೀಡುವ ಜೊತೆಗೆ ಎಲ್ಲಾ ವ್ಯಾಪ್ತಿಯಲ್ಲಿ ಭದ್ರತೆ ಒದಗಿಸುವವರಿಗೆ ಮಳೆಗಾಲದಲ್ಲಿ ಭದ್ರತೆ ಇಲ್ಲದೆ ಬಳಲುವಂತಾಗಿದೆ. ಪೊಲೀಸ್ ಸಿಬ್ಬಂದಿ ಸೇಡಂನಲ್ಲಿ ಮಳೆಗಾಲದಲ್ಲ ಅದೆಷ್ಟು ವರ್ಷ ಪರದಾಡಬೇಕೋ ಎಂಬುದು ಗೊತ್ತಾಗದಂತಾಗಿದೆ.
ಭರಿ ಮಳೆ ಸುರಿದಾಕ್ಷಣ ಇಲ್ಲಿನ ಪೊಲೀಸ್ ಠಾಣೆ ಒಳಗೆ ಅಕ್ಕಪಕ್ಕದ ರಸ್ತೆ, ಬಡಾವಣೆಗಳಲ್ಲಿರುವ ಚರಂಡಿ ನೀರು, ರಸ್ತೆಯಲ್ಲಿ ಹರಿಯೋ ಮಳೆ ನೀರು ತುಂಬ ಕೆಳಗಡೆ ಇರುವ ಸ್ಟೇಷನ್ ಒಳಗೆ ನುಗ್ಗಿ ದಾಖಲಾತಿಗಳು ನೀರು ಪಾಲಾಗುತ್ತಿವೆ.
ಹಳೆ ಎಸಿ ಕಚೇರಿ ಕಟ್ಟಡಕ್ಕೆ ಠಾಣೆ ಸ್ಥಳಾಂತರ ನನೆಗುಗಿದೆ: ಈ ಜಲಾವೃತಗೊಳ್ಳುವ ಠಾಣೆಯ ಪಕ್ಕದಲ್ಲಿ ಹಳೆ ಸಹಾಯಕ ಆಯುಕ್ತರ ಕಚೇರಿ ಖಾಲಿ ಇದೆ. ಪಾರ್ಕಿಂಗಗೂ ಇಲ್ಲಿ ವಿಶಾಲವಾದಂತಹ ಜಾಗ ಇದೆ. ಹಳೇ ಎಸಿ ಕಚೇರಿಯಲ್ಲಿ ಈ ಪೊಲೀಸ್ ಠಾಣೆ ಸ್ಥಳಾಂತರಿಸುವ ಸಂಬಂಧ ಚರ್ಚೆಗಳೂ ನಡೆದಿದ್ದವು. ಆದರೆ ಇಂದಿಗೂ ಈ ಕಾರ್ ಈಡೇರಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಇಲ್ಲಿಗೆ ಠಾಣೆ ಸ್ಥಾಂತರ ಮಾಡಿದರೆ ತೊಂದರೆಯೇ ಇರೋದಿಲ್ಲವೆಂದೂ ಹೇಳಲಾಗುತ್ತಿದ್ದರೂ ಈ ಕೆಲಸ ಯಾಕೆ ನನೆಗುದಿಗೆ ಬಿದ್ದಿದೆಯ ಗೊತ್ತಿಲ್ಲ.ಚರಂಡಿ ನೀರು ಸರಾಗವಾಗಿ ಹೋಗಲು ಕ್ರಮ ತೆಗೆದುಕೊಳ್ಳಲಾಗುವುದು, ಹಾಗೂ ಈ ಠಾಣೆಯ ಜಲಾವೃತ ಸಮಸ್ಯೆಯನ್ನ ಮೇಲಾಧಿಕಾರಿಗಳಿಗೆ , ಸಚಿವರ ಗಮನಕ್ಕೆ ತರಲಾಗುವುದು.