ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ನಿರ್ದಿಷ್ಟ ಕೋಮಿನ ಯುವಕರು ನಡೆಸುತ್ತಿರುವ ಲವ್ ಜಿಹಾದ್‌ಗೆ ಹೆಚ್ಚಾಗಿ ಕ್ಷತ್ರಿಯ ಸಮಾಜದ ಮುಗ್ಧ ಯುವತಿಯರು ನಿರಂತರ ಬಲಿಯಾಗುತ್ತಿದ್ದಾರೆ. ಲವ್ ಜಿಹಾದ್ ಮೂಲಕ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ಜಾಲ ಸಕ್ರಿಯವಾಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಬೇಕು ಎಂದು ಬೆಟಗೇರಿ-ಗದಗ ಸಮಾಜದ ಮುಖಂಡ ದತ್ತೂಸಾ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಜಗದಂಬಾ ದೇಗುಲದ ೧೭ನೇ ವಾರ್ಷಿಕೋತ್ಸವ, ಗಣೇಶ, ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನಿಮಿತ್ತ ಬುಧವಾರ ತಾಲೂಕು ಎಸ್‌ಎಸ್‌ಕೆ ಸಮಾಜ ಆಯೋಜಿಸಿದ್ದ ಕ್ಷತ್ರಿಯ ವಟುಗಳ ಉಪನಯನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾರಂಭದಲ್ಲಿ ೨೧ ಕ್ಷತ್ರಿಯ ವಟುಗಳಿಗೆ ಬದರಿನಾರಾಯಣ ಆಚಾರ್ ಬ್ರಹ್ಮೋಪದೇಶ ನೀಡಿದರು. ಸಮಾಜದ ಮಾಜಿ ಅಧ್ಯಕ್ಷ ಅಶೋಕ್ ಮೆಹರವಾಡೆ, ರಾಘವೇಂದ್ರ ನಿರಂಜನ್ ನೆರವಾದರು. ಉಮಾಕಾಂತಸಾ ಮೇಘರಾಜ್ ಕುಟುಂಬದವರು ಜಗದಂಬಾ ದೇವಿಗೆ ಬೆಳ್ಳಿಯ ಹಸ್ತ ದೇಣಿಗೆಯಾಗಿ ನೀಡಿದರು.
ಬೆಟಗೇರಿ ಗದಗ ಸಮಾಜದ ಅಧ್ಯಕ್ಷ ಲೋಕನಾಥಸಾ ಕಬಾಡಿ, ಗಜೇಂದ್ರಗಡ ಸಮಾಜದ ವಿಶ್ವನಾಥಸಾ ಮೇಘರಾಜ್, ಇಲಕಲ್ ಸಮಾಜದ ಲಕ್ಷ್ಮಣಸಾ ಅರಸಿದ್ಧಿ, ರಾಣಿಬೆನ್ನೂರು ಸಮಾಜದ ರಾಜೇಂದ್ರಸಾ ಮಾತನಾಡಿದರು.ಹಿಮಾಚಲಪ್ರದೇಶದ ಪ್ರಕಾಶ ಸ್ವರೂಪ ಶ್ರೀ, ಬಾಲಯೋಗಿನಿ ಜಯಶ್ರೀ ಮಾತಾಜಿ, ತಾರಾಚಂದ ಮಹಾರಾಜ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮಾಜಿ ಅಧ್ಯಕ್ಷರಾದ ರಂಗನಾಥಸಾ ಕಠಾರೆ, ಅಶೋಕ್ ಮೇಹರವಾಡೆ, ಅಧ್ಯಕ್ಷ ದೀಪಕ್ ಕಠಾರೆ, ಉಪಾಧ್ಯಕ್ಷ ಪರಶುರಾಮಸಾ ಪವಾರ್, ಖಜಾಂಚಿ ದಿಲೀಪ್ ಭಾವಿಕಟ್ಟಿ, ಸಹ ಕಾರ್ಯದರ್ಶಿ ರಾಜು ಮೇಘರಾಜ್, ಪರಶುರಾಮಸಾ ದಲಬಂಜನ್ ಇದ್ದರು.