ಕನ್ನಡಪ್ರಭ ವಾರ್ತೆ ಸವದತ್ತಿಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರ ಕಡ್ಡಾಯ ಮತ ಚಲಾವಣೆ ಮಾಡಬೇಕಿದ್ದು, ಈ ಕುರಿತು ಇತರರಿಗೂ ಅರಿವು ಮೂಡಿಸಿ. ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಇಒ ಯಶವಂತಕುಮಾರ ಹೇಳಿದರು.
ನನ್ನ ಮತ ಮಾರಾಟಕಿಲ್ಲ, ಮತದಾನ ಮಾಡಿದವನೇ ಮಹಾಶೂರ, ಓಟ ಮಾಡಿದವನೆ ಹೀರೋ, ಮತದಾನದಿಂದ ವಂಚಿತರಾಗಬೇಡಿ, ನಮ್ಮ ಮತ ನಮ್ಮ ಹಕ್ಕು, ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ, ವಿವಿಧ ಮತಜಾಗೃತಿ ಘೋಷಣೆ ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಡಾ.ಅನಿಲ ಮರಲಿಂಗಣ್ಣವರ, ತಾಪಂ ಸಹಾಯಕ ನಿರ್ದೇಶಕರು(ಪಂ.ರಾ), ತಾಪಂ ವ್ಯವಸ್ಥಾಪಕರು, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಪಂ ತಾಂತ್ರಿಕ ಸಂಯೋಜಕರು, ತಾಪಂ ಎಂಐಎಸ್ ಸಂಯೋಜಕರು, ತಾಪಂ ಐಇಸಿ ಸಂಯೋಜಕರು, ಬಿಎಫ್‌ಟಿ, ಗ್ರಾಪಂ ಮತ್ತು ತಾಪಂ ಸಿಬ್ಬಂದಿ ಭಾಗವಹಿಸಿದ್ದರು.