ಕೊಳ್ಳೇಗಾಲ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ವಿವಿಧ ಸಂಘಟನೆಗಳ ಧನಗೆರೆ ಪಿಡಿ ಹಾಗೂ ಇಒ ವರ್ತನೆ ಖಂಡಿಸಿ ನಡೆಸುತ್ತಿರುವ ಧರಣಿ ಮಂಗಳವಾರ 6ನೇ ದಿನಕ್ಕೆ ಕಾಲಿಟ್ಟಿದ್ದು ಈ ವೇಳೆ ಜಿಪಂನ ಉಪಕಾರ್ಯದರ್ಶಿ ಲಕ್ಷ್ಮಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆ ಧರಣಿ ಅಂತ್ಯಗೊಳಿಸಲಾಯಿತು.ಇ-ಸ್ವತ್ತು ನೀಡುವ ವಿಚಾರದಲ್ಲಿ ಲೋಕಾಯುಕ್ತ ಕಚೇರಿಗೆ ಸುಳ್ಳು ಮಾಹಿತಿ ನೀಡಿರುವ ಧನಗೆರೆ ಗ್ರಾಪಂ ಪಿಡಿಒ, ತಾಲೂಕು ಇಒಗಳ ವಿರುದ್ಧ ಹಾಗೂ ಟಗರಪುರ ಪಂಚಾಯಿತಿಯಿಂದ ಗೋಪಿನಾಥಂ ವರೆಗೂ ವಿಲೇಜ್ ಸೈಟ್ (ಗ್ರಾಮ ಠಾಣೆ) ಹಕ್ಕು ಪತ್ರ ನೀಡಿ ಇ-ಸ್ವತ್ತು ನೀಡುವ ಬಗ್ಗೆ ಅನಿರ್ದಿಷ್ಟಾವಧಿ ಧರಣಿ ಕೈಗೊಂಡ ಪ್ರತಿಭಟನಾಕಾರರನ್ನು ಇಂದು ಪಂಚಾಯತಿ ಆವರಣದಲ್ಲಿ ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.