ಕನ್ನಡ ಸಾಹಿತ್ಯ ಉಳಿಸಿ, ಬೆಳೆಸುತ್ತಿರುವ ಕಸಾಪ: ಡಾ.ಮಲ್ಲಿಕಾರ್ಜುನ ಮೇತ್ರಿ

KannadaprabhaNewsNetwork | Published : Feb 12, 2025 12:32 AM

ಸಾರಾಂಶ

ಸಾಹಿತ್ಯ ಪ್ರತಿಯೊಬ್ಬ ಕನ್ನಡಿಗನ ಆಸ್ತಿ. ಉತ್ತರ ಕರ್ನಾಟಕದ ತುಂಬ ಕನ್ನಡದ ಕಂಪು ಹರಿಸಿದ ಕೀರ್ತಿ ವಿಜಯಪುರ ಜಿಲ್ಲೆಗೆ ಇದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ಸಾಹಿತ್ಯವನ್ನು ಉಳಿಸಿ, ಬೆಳೆಸಿ ಸಂರಕ್ಷಣೆ ಮಾಡುತ್ತಿದೆ. ಜಾತಿ, ಧರ್ಮಗಳನ್ನು ಮೀರಿದ ಸಾಮರಸ್ಯದ ಕೇಂದ್ರ ಬಿಂದುವಾಗಿದೆ ಎಂದು ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಪ್ರತಿಯೊಬ್ಬ ಕನ್ನಡಿಗನ ಆಸ್ತಿ. ಉತ್ತರ ಕರ್ನಾಟಕದ ತುಂಬ ಕನ್ನಡದ ಕಂಪು ಹರಿಸಿದ ಕೀರ್ತಿ ವಿಜಯಪುರ ಜಿಲ್ಲೆಗೆ ಇದೆ. ಅದನ್ನು ಇಂದು ಕನ್ನಡ ಸಾಹಿತ್ಯ ಪರಿಷತ್‌ ಮುಂದೆವರಿಸಿಕೊಂಡು ಬಂದಿರುವುದು ಬಹಳ ಸಂತೋಷ ಸಂಗತಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕೋಶಾಧ್ಯಕ ಡಾ.ಸಂಗಮೇಶ ಮೇತ್ರಿ ಮಾತನಾಡಿ, ಈ ನಾಡು ಸರ್ವಜನಾಂಗದ ಶಾಂತಿ ತೋಟ ಆಗಬೇಕಾದರೆ ಬುದ್ಧ, ಬಸವ, ಅಂಬೇಡ್ಕರ್‌ ತತ್ವಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಅಧಿಕಾರದ ಆಸೆಗಾಗಿ ಮುಖವಾಡ ಧರಿಸುವವರನ್ನು ವರಕವಿ ಬೇಂದ್ರೆ ಹಾಗೂ ದಲಿತ ಕವಿ ಸಿದ್ದಲಿಂಗಯ್ಯ ಕಟುವಾಗಿ ಟೀಕಿಸಿದ್ದಾರೆ ಎಂದರು.

ಸಾಹಿತಿ ಶಿಲ್ಪಾ ಭಷೆ ಮಾತನಾಡಿ, ಬೇಂದ್ರೆ ಸಾಮರಸ್ಯ ಜೀವನದ ಕೊಂಡಿ. ಬದುಕಿಗೆ ಸಮೀಪದ ಸಾಹಿತ್ಯ ನೀಡಿದ ಮಹಾನ ಕವಿ ಬೇಂದ್ರೆ ಆಗಿದ್ದಾರೆ. ಮಾತೃಭಾಷೆ ಮರಾಠಿಯಿಂದ ಬಂದು ಕನ್ನಡದಲ್ಲಿ ಅದ್ಭುತ ಕಾವ್ಯ ರಚನೆ ಮಾಡಿದ್ದು ಅಲ್ಲದೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಮಹಾನ ಚೇತನ ಎಂದರು.

ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ್ ಚಕ್ರವರ್ತಿ ಮಾತನಾಡಿ, ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ದಲಿತರ ಧ್ವನಿಯಾಗಿ ನಾಡಿನ ತುಂಬ ಹೋರಾಟದ ಮೂಲಕ ದಲಿತರ ಬದುಕು ಸ್ವಚ್ಛ ಮಾಡಲು ಹೋರಾಡಿದವರು ಡಾ.ಸಿದ್ದಲಿಂಗಯ್ಯನವರು. ಎರಡು ಬಾರಿ ಶಾಸಕರಾಗಿ ದಲಿತರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಸಿಗಬೇಕಾದ ಸವಲತ್ತುಗಳು ಕೊಡಲು ಹೋರಾಡಿದ ಮಹಾನ ಚೇತನ. ಬುದ್ಧ-ಬಸವ ಅಂಬೇಡ್ಕರ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪ್ರೊ.ಆರ್.ಸಿ.ವಾಡೇದ, ಶಾರದಾ ನಾಯಕ, ಶಾರದಾ ಲಮಾಣಿ, ಡಾ.ಆನಂದ ಕುಲಕರ್ಣಿ, ಪರವೀನ ಶೇಖ, ವಿಜಯಲಕ್ಷ್ಮಿ ಹಳಕಟ್ಟಿ, ಶೋಭಾ ಬಡಿಗೇರ, ಡಾ.ಮಾಧವ ಗುಡಿ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ, ಲತಾ ಗುಂಡಿ, ರಾಜಾಸಾಬ ಶಿವನಗುತ್ತಿ, ಬಿ.ಎಂ.ಆಜೂರ, ಎಸ್.ಎಲ್.ಇಂಗಳೇಶ್ವರ, ಬಿ.ಎಂ.ಆಜೂರ, ಡಾ.ಮಹಿಬೂಬ ತಾಲಬಾವಡಿ, ಅರ್ಜುನ ಶಿರೂರ, ಟಿ.ಆರ್.ಹಾವಿನಾಳ, ಜಿ.ಎಸ್.ಬಳ್ಳೂರ, ಸಿದ್ರಾಮಪ್ಪ ಜಂಗಮಶೆಟ್ಟಿ, ಅಣ್ಣುಗೌಡ ಬಿರಾದಾರ, ವೈ.ಎಚ್.ಲಂಬು, ಭೀಮಪ್ಪ ಮಸಬಿನಾಳ, ಭಾಗೀರಥಿ ಸಿಂದೆ, ಸಹನಾ ಬಿರಾದಾರ, ಗಂಗಮ್ಮ ರಡ್ಡಿ, ಪಕುರುದ್ದೀನ ಹೀರೆಕೊಪ್ಪ, ಶ್ರೀಕಾಂತ ನಾಡಗೌಡ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ, ಎನ್.ಎಂ.ಹರನಾಳ, ಶಿವಾಜಿ ಮೋರೆ, ಅಲಿಖಾನ ಪಠಾಣ ಮುಂತಾದವರು ಇದ್ದರು.

Share this article