ರಾಜ್‌, ಪುನೀತ್‌ ಬದುಕು ಎಲ್ಲರಿಗೂ ಆದರ್ಶ: ಸಂಗಮೇಶ್ವರ್

KannadaprabhaNewsNetwork |  
Published : Jan 23, 2026, 01:45 AM IST
ಭದ್ರಾವತಿಯಲ್ಲಿ ವರನಟ, ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗು ಕರ್ನಾಟಕ ರತ್ನ ಪುನೀತ್ ರಾಜಕುಮಾರ್‌ರವರ ದೇವಾಲಯ ಹಾಗು ಕಂಚಿನ ಪ್ರತಿಮೆಗಳನ್ನು ಲೋಕಾರ್ಪಣೆಗೊಳಿಸಿದ ಅಶ್ವಿನಿ ರಾಜಕುಮಾರ್ ಅವರನ್ನು ಡಾ. ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ವರನಟ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ ಅವರ ದೇವಾಲಯ ಹಾಗೂ ಕಂಚಿನ ಪ್ರತಿಮೆಗಳನ್ನು ಗುರುವಾರ ಪುನೀತ್ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ರಾಜಕುಮಾರ್‌ ಲೋಕಾರ್ಪಣೆಗೊಳಿಸಿದರು.

ಭದ್ರಾವತಿ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ವರನಟ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ ಅವರ ದೇವಾಲಯ ಹಾಗೂ ಕಂಚಿನ ಪ್ರತಿಮೆಗಳನ್ನು ಗುರುವಾರ ಪುನೀತ್ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ರಾಜಕುಮಾರ್‌ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಡಾ. ರಾಜ್‌ಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ಅವರು ಈ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇವರಿಬ್ಬರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ನಗರದಲ್ಲಿ ಅಭಿಮಾನಿಗಳು ಇವರಿಬ್ಬರ ಹೆಸರಿನ ದೇವಾಲಯ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಈ ದೇವಾಲಯದಲ್ಲಿ ಪ್ರತಿದಿನ ಧಾರ್ಮಿಕ ಆಚರಣೆಗಳು ನಡೆಯಲಿವೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಎಸ್.ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಸೇರಿದಂತೆ ಇನ್ನಿತರರು ಮಾತನಾಡಿ, ನಗರದಲ್ಲಿ ಡಾ.ರಾಜಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಬಳಗ ತುಂಬಾ ದೊಡ್ಡ ಪ್ರಮಾಣದಲ್ಲಿದೆ. ಇವರಿಬ್ಬರ ಹೆಸರಿನಲ್ಲಿ ಕೇವಲ ದೇವಾಲಯ ಮಾತ್ರವಲ್ಲ ಪ್ರಮುಖ ರಸ್ತೆಗಳಿಗೆ ಇವರಿಬ್ಬರ ಹೆಸರನ್ನು ನಾಮಕರಣಗೊಳಿಸಲಾಗಿದೆ ಎಂದರು. ಇದೇ ವೇಳೆ ಅಶ್ವಿನಿ ಪುನೀತ್‌ರಾಜಕುಮಾರ್ ಅವರನ್ನು ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಪ್ರಮುಖರಾದ ಎಂ.ಶ್ರೀಕಾಂತ್, ಬಿ.ಕೆ.ಜಗನ್ನಾಥ್, ಬಿ.ಕೆ.ಶಿವಕುಮಾರ್, ಎಚ್.ಎಲ್.ಷಡಾಕ್ಷರಿ, ಬಿ.ಎಸ್.ಗಣೇಶ್, ಬಿ.ಎಸ್.ಬಸವೇಶ್, ನಗರಸಭೆ ಸದಸ್ಯ ಜಾರ್ಜ್, ಡಾ.ರಾಜಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಬಿ.ಎಂ.ಅರ್ಪಿತ್ ಕುಮಾರ್(ಅಪ್ಪು), ಉಪಾಧ್ಯಕ್ಷರಾದ ಜಿ.ಕೆ.ದೇವೇಂದ್ರ(ದೇವ), ವೆಂಕಟೇಶ್, ಖಜಾಂಚಿ ಲಲಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಟಿ.ರವಿಕುಮಾರ್, ಕಾರ್ಯದರ್ಶಿ ಎಲ್.ಶಂಕರ್, ಸಹ ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ಗೋಪಿ, ಭೂಮಿನಾಥನ್, ಮಹೇಶ್, ಎಲ್.ಶಂಕರ್, ಸುಮನ್, ಸುನೀಲ್, ರಕ್ಷಿತ್, ಅಮೋಘ, ಪ್ರಜ್ವಲ್, ನಿತಿನ್, ಮದನ್ ಮತ್ತು ಕೆ.ಸಿ.ಮನು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು, ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸೇರಿದಂತೆ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ