24ರಂದು ರಾಜಕೇಸರಿ ಟ್ರಸ್ಟ್‌ನಿಂದ ಆಟಿ ಕಷಾಯ ವಿತರಣೆ

KannadaprabhaNewsNetwork |  
Published : Jul 18, 2025, 12:45 AM IST
ಆಟಿ | Kannada Prabha

ಸಾರಾಂಶ

ರಾಜಕೇಸರಿ ಟ್ರಸ್ಟ್ ನಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಟಿ ಕಷಾಯ ವಿತರಿಸಲಾಗುವುದು. ಬೆಳಗ್ಗೆ 6 ರಿಂದ 10 ಗಂಟೆ ತನಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೊದಲು ಬಂದ 250 ಮಂದಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಳ್ತಂಗಡಿ: ನಾಟಿ ವೈದ್ಯಕೀಯ ಪರಂಪರೆಯಲ್ಲಿ ಅನೇಕ ರೋಗ ನಿವಾರಣೆಗಾಗಿ ಆಟಿ ಅಮವಾಸ್ಯೆ ದಿನ ಕುಡಿಯುವ ಸಂಪ್ರದಾಯ ಇದ್ದು ಇದನ್ನು ಮುಂದಿನ ಪೀಳಿಗೆಗೆ ತಿಳಿಸಲು ಮತ್ತು ಹಿರಿಯರ ಸಂಪ್ರದಾಯ ಮುಂದುವರೆಸಲು ಜು. 24 ರಂದು ರಾಜಕೇಸರಿ ಟ್ರಸ್ಟ್ ನಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಟಿ ಕಷಾಯ ವಿತರಿಸಲಾಗುವುದು ಎಂದು ರಾಜಕೇಸರಿ ಟ್ರಸ್ಟ್ ಸ್ಥಾಪಕಾದ್ಯಕ್ಷ ದೀಪಕ್ ಜಿ ಹೇಳಿದರು.

ಅವರು ಮಂಗಳವಾರ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಎರಡು ದಿನದ ಅಲೊಚನೆಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ 150 ಅಧಿಕ ಮಂದಿ ಪ್ರಯೋಜನ ಪಡೆದುಕೊಂಡರು. ಮತ್ತೆಯೂ ಬೇಡಿಕೆ ಇದ್ದಕಾರಣ ಪೂರೈಸಲು ಸಾಧ್ಯವಾಗಲಿಲ್ಲ. ಈ ಭಾರಿ ಮುಂಚಿತವಾಗಿ ತಯಾರಿ ನಡೆಸುತ್ತಿದ್ದು ಶಾಸಕ ಹರೀಶ್ ಪೂಂಜಾ ಮತ್ತು ಧಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಸಹಿತ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ನೀಡಲು ಮುಂದೆ ಬಂದಿದ್ದಾರೆ ಎಂದರು.

ರಾಜಕೇಸರಿ ಟ್ರಸ್ಟ್ ನ ತಾಲೂಕು ಅಧ್ಯಕ್ಷ ಸತೀಶ್ ಕಂಗಿತ್ತಿಲು ಮಾತನಾಡಿ ಬೆಳಗ್ಗೆ 6 ರಿಂದ 10 ಗಂಟೆ ತನಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೊದಲು ಬಂದ 250 ಮಂದಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹಿರಿಯರು ಅನೇಕ ಆಚರಣೆಯಿಂದ ಕಷಾಯ ತಯಾರಿಸುತ್ತಿದ್ದು ನಾವು ಕೂಡ ಅದರಂತೆ ಕಷಾಯ ತಯಾರಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಹೆಚ್ಚಾಗಿ ನಗರ ನಿವಾಸಿಗಳಿಗೆ ಇದು ಅನುಕೂಲವಾಗಲಿದೆ ಎಂದರು.

ಇದರೊಂದಿಗೆ ಮೆಂತೆ ಗಂಜಿ ಸೇವನೆ ಮಾಡುವ ಸಂಪ್ರದಾಯ ಇದ್ದು ಇದನ್ನು ಜೊತೆಗೆ ನೀಡಲು ಚಿಂತಿಸುತ್ತಿದ್ದೇವೆ ಎಂದರು. ಹಿರಿಯರಿಂದ ಆಟಿ ಕಷಾಯದ ಮಹತ್ವವನ್ನು ಜನರಿಗೆ ತಿಳಿಸಲು ಪ್ರಯತ್ನಿಸಲಾಗುವುದು ಎಂದರು. ಇದು ರಾಜಕೇಸರಿಯ 566 ನೇ ಸೇವಾ ಕಾರ್ಯವಾಗಿದೆ ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್ ನ ಗೌರಾವಾಧ್ಯಕ್ಷ ಪ್ರೇಮ್ ರಾಜ್ ರೋಶನ್ ಸಿಕ್ವೇರಾ , ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ