
ಡಿಸಿಎಂ ಆದ ಬಳಿಕ ಜಿಲ್ಲೆಗೆ ಭೇಟಿ ಕೊಟ್ಟ ಪರಮೇಶ್ವರ್ । ಶಾಸಕ ರಾಜಣ್ಣ ಮನೆಗೆ ಭೇಟಿ । ನಮ್ಮ ಭೇಟಿ ಹೊಸದೇನಲ್ಲ: ಪರಂ
ಉಪ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಡಾ. ಜಿ. ಪರಮೇಶ್ವರ್ ತುಮಕೂರಿಗೆ ಆಗಮಿಸಿದರು.
ತುಮಕೂರಿನ ಬಟವಾಡಿ ವೃತ್ತದಿಂದ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಅವರ ಅಭಿಮಾನಿಗಳು ಬರ ಮಾಡಿಕೊಂಡರು.ತುಮಕೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಪರಮೇಶ್ವರ್ ಅವರಿಗೆ ಅವರ ಅಭಿಮಾನಿಗಳು ಜೈಕಾರ ಹಾಕಿದರು. ತುಮಕೂರಿಗೆ ಪರಮೇಶ್ವರ್ ಆಗಮಿಸಿದ ಕೂಡಲೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಮನೆಗೆ ಭೇಟಿ ನೀಡಿದರು.
ರಾಜಣ್ಣ ಅವರು ಸುದೀರ್ಘ ಕಾಲ ರಾಜಕಾರಣ ಮಾಡಿದ್ದಾರೆ. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ನಮ್ಮ ಭೇಟಿ ಹೊಸದೇನಲ್ಲ. ಅನಿರೀಕ್ಷಿತನು ಅಲ್ಲ ಎಂದರು.
ತುಮಕೂರಿಗೆ ಸಿಎಂ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಅವರದ್ದು ಖಾಸಗಿ ಭೇಟಿ. ನೊಣವಿನಕೆರೆ ಮಠಕ್ಕೆ ಭೇಟಿ ಕೊಡುತ್ತಿದ್ದಾರೆ. ಖಾಸಗಿ ಭೇಟಿಯಾದ್ದರಿಂದ ನಾನು ಹೋಗ್ತಾ ಇಲ್ಲ ಎಂದರು. ತಮಗೆ ಸಿಎಂ ಸ್ಥಾನ ಕೈ ತಪ್ಪಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ತಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದರು.
ಮೂರು ವರ್ಷ ಸತತವಾಗಿ ಸಿದ್ದರಾಮಯ್ಯ ನವರು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಹಣಕಾಸಿನ ಶಿಸ್ತನ್ನು ಕಾಪಾಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಅಭಿನಂದನೆ ಹೇಳಬೇಕಾಗುತ್ತದೆ. ಕ್ಯಾಬಿನೆಟ್‌ನಲ್ಲಿ ಹೇಳಿದ್ದೇವೆ ಎಂದರು.
ರಾಮಲಿಂಗಾ ರೆಡ್ಡಿ ರಾಜಿನಾಮೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಅವರ ಜೊತೆ ರಾತ್ರಿ ಮಾತನಾಡಿದ್ದಾರೆ. ಅವರ ಮಧ್ಯೆ ಏನ್ ಚರ್ಚೆ ನಡೆಯಿತು ಅದು ನಮ್ಮ ಗಮನದಲ್ಲಿ ಇಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಅವರನ್ನು ಒಪ್ಪಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಅವಶ್ಯಕತೆ ಇದ್ದರೆ ನಾನು ಅವರ ಬಳಿ ಮಾತನಾಡುವುದಾಗಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಜಾರಕಿಹೊಳಿಗೆ ಕೈತಪ್ಪಿದ ವಿಚಾರದ ಬಗ್ಗೆ ಮಾತನಾಡಿ ಆ ರೀತಿ ಏನಿಲ್ಲ. ಕೊಡುವುದಾಗಿ ಯಾರಿಗೂ ಯಾರು ಭರವಸೆ ಕೊಟ್ಟಿರಲಿಲ್ಲ ಎಂದರು.