- 2028ರಲ್ಲಿ ಸತೀಶ ಜಾರಕಿಹೊಳಿ ಸಿಎಂ ಆಗಬೇಕೆಂಬ ಆಶಯ
ದಾವಣಗೆರೆ: ಮಹರ್ಷಿ ವಾಲ್ಮೀಕಿ ಸಮಾಜದ ಹಿರಿಯ ಮುಖಂಡ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನ ಹಿನ್ನೆಲೆ ಜೂ.21ರಂದು ತುಮಕೂರಿನಲ್ಲಿ ಅಮೃತ ಮಹೋತ್ಸವ ಸಮಾರಂಭ- ಅಭಿನಂದನಾ ಗ್ರಂಥ ಬಿಡುಗಡೆ ನಡೆಯಲಿದೆ. ಜಿಲ್ಲೆಯಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದೇವೆ ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಹಿರಿಯ ಮುಖಂಡ, ಕಾಂಗ್ರೆಸ್ ಹಿರಿಯ ಬಿ.ವೀರಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ತುಮಕೂರಿನ ಬಿ.ಎಚ್.ರಸ್ತೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾರಂಭ ನಡೆಯಲಿದೆ. ದಾವಣಗೆರೆ ತಾಲೂಕಿನಿಂದ 25 ಬಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಿಂದ ನೂರಾರು ಖಾಸಗಿ ವಾಹನಗಳಲ್ಲೂ ಅಭಿಮಾನಿಗಳು ತೆರಳಲಿದ್ದೇವೆ ಎಂದರು.ಸತೀಶ ಜಾರಕಿಹೊಳಿ ಸಿಎಂ ಆಗಬೇಕು:
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಮ್ಮ ನಾಯಕ ಸಮಾಜದ ಅಗ್ರಗಣ್ಯ ನಾಯಕರು. ಕೆ.ಎನ್.ರಾಜಣ್ಣ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಈಗಾಗಲೇ ಘೋಷಣೆ ಮಾಡಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಗಳಿಂದ ಗೆಲ್ಲಬೇಕು, ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕೆಂಬುದು ನಮ್ಮ ಸಮುದಾಯ ಆಶಯವಾಗಿದೆ ಎಂದರು.ಸಮಾಜದ ಮುಖಂಡರಾದ ಉಚ್ಚೆಂಗೆಪ್ಪ ಹರಪನಹಳ್ಳಿ, ಶ್ಯಾಗಲೆ ಮಂಜುನಾಥ, ವಕೀಲ ಎನ್.ಎಂ. ಆಂಜನೇಯ ಗುರೂಜಿ, ಹದಡಿ ಹಾಲಪ್ಪ, ಗುಮ್ಮನೂರು ಶಂಭುಲಿಂಗಪ್ಪ, ಶ್ಯಾಬನೂರು ಪ್ರವೀಣ, ವಿಜಯಶ್ರೀ ಮಹೇಂದ್ರ, ರಂಗನಾಥ ಸಿರಿಗೆರೆ, ಸುರೇಶ ಕೊಡಗನೂರು ಇತರರು ಇದ್ದರು.
- - -(-ಫೋಟೋ)